Advertisement
ಶುಕ್ರವಾರ ಮತ್ತು ಶನಿವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು, ಮಂಗಳವಾರ ವೈಯಾಲಿಕಾವಲ್ ನಲ್ಲಿರುವ ಬಿಡಿಎ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ್ದರು. ಇದೇ ವೇಳೆ ಆರ್.ಟಿ.ನಗರಲ್ಲಿನ ಬಿಡಿಎ ಉತ್ತರ ವಿಭಾಗ ಕಚೇರಿ, ವಿಜಯನಗರದಲ್ಲಿ ಪಶ್ಚಿಮ ವಿಭಾಗ ಕಚೇರಿ, ಎಚ್‌ಎಸ್‌ಆರ್ ಲೇಔಟ್‌ನ ಪೂರ್ವ ವಿಭಾಗ ಕಚೇರಿ, ಬನಶಂಕರಿಯಲ್ಲಿನ ದಕ್ಷಿಣ ವಿಭಾಗದ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲನೆ ನಡೆಸಲಾಯಿತು.
Related Articles
Advertisement
ಬಿ.ಜೆ.ಪುಟ್ಟಸ್ವಾಮಿ ಅವರಿಂದಲೂ ದೂರು: ವಿಧಾನಪರಿಷತ್ ಮಾಜಿ ಸದಸ್ಯ ಬಿ.ಜೆ ಪುಟ್ಟಸ್ವಾಮಿ ನೀಡಿದ ದೂರಿನ ಆಧಾರದ ಮೇಲೆ ಬಿಡಿಎ ಮೇಲೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. ಬಿಡಿಎ 3,702 ಎಕರೆ ಜಾಗದಲ್ಲಿ ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಭ್ರಷ್ಟಚಾರ ಮಾಡಿ ಕೆಲ ಬಿಡಿಎ ಅಧಿಕಾರಿಗಳು ಕೋಟಿÂಧಿ ಪತಿಗಳಾಗಿದ್ದಾರೆ.
ಈ ಸಂಬಂಧ ಎಸಿಬಿ ಹಿರಿಯ ಅಧಿಕಾರಿಯೊಬ್ಬರಿಗೆ 3-4 ದಿನಗಳ ಹಿಂದೆ ದಾಖಲೆ ಸಮೇತ ದೂರು ನೀಡಿದ್ದೇನೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಎಂಆರ್ ಡಿನಲ್ಲಿ 8,456 ಎಕರೆ ಅನಧಿಕೃತ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಜೆ ಪುಟ್ಟಸ್ವಾಮಿ ತಿಳಿಸಿ ದ್ದಾರೆ. ಇದುವರೆಗೂ 40ಕ್ಕೂ ಅಧಿಕ ದೂರುಗಳು ಬಂದಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಸಂತ್ರಸ್ತರು ದೂರು ನೀಡಬಹುದು ಬಿಡಿಎ ಕಚೇರಿಯಲ್ಲಿನ ಅವ್ಯವಹಾರದ ಸಂಬಂಧ ಈಗಾಗಲೇ ಹಲವು ದೂರುಗಳು ಬಂದಿವೆ. ವಂಚನೆಗೊಳಗಾಗಿರುವ ಸಾರ್ವಜನಿಕರಿಗೆ ಬಿಡಿಎ ಕಚೇರಿಯಲ್ಲಿನ ಅವ್ಯಹಾರದ ಕುರಿತು ಎಸಿಬಿ ಕಚೇರಿಗೆ ಆಗಮಿಸಿ ಲಿಖೀತ ದೂರನ್ನು ನೀಡಬಹುದು ಎಂದು ಎಸಿಬಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ಬೆಳವಣಿಗೆಗೆ ಸಂಬಂಧಿಸಿದಂತೆ ಇಂದು ಮುಂಜಾನೆ ಆದಾಯಕ್ಕೆ ಮೀರಿದ ಆಸ್ತಿಯ ಆರೋಪದಡಿಯಲ್ಲಿ ಹಲವು ಅಧಿಕಾರಿಗಳ ಮತ್ತು ಅವರ ಸಹಚರರ ಮನೆಗಳಿಗೆ ಏಸಿಬಿ ತನ್ನ ಮೆಗಾ ಬೇಟೆ ಆರಂಭಿಸಿದೆ.