ಕುಣಿಗಲ್ : ನಿವೇಶನ ಖಾತೆ ಬದಲಾವಣೆಗೆ ಮಾಡಿಕೊಡಲು ವ್ಯಕ್ತಿಯೋರ್ವನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾ.ಪಂ ಪಂಚಾಯ್ತಿ ಸಹಾಯಕಿ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದ ಪಿಡಿಓ ಎಸಿಬಿ ಅಧಿಕಾರಿಗಳು ಬೀಸಿದ ಬಲೆಗೆ ಶುಕ್ರವಾರ ಬಿದ್ದಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಬೇಗೂರು ಗ್ರಾ.ಪಂನ ಸಹಾಯಕಿ ಅನಸೂಯ ಹಾಗೂ ಇದಕ್ಕೆ ಕುಮ್ಮಕು ನೀಡಿದ ಪಿಡಿಓ ಸೌಮ್ಯ ಶ್ರೀ ಅವರನ್ನು ತುಮಕೂರು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ತಾಲೂಕಿನ ಕೂತಾರಹಳ್ಳಿ ಲಕ್ಷ್ಮಣ್ ಗೌಡ ಅವರ ಹೆಸರಿಗೆ ನಿವೇಶನ ಖಾತೆ ಮಾಡಿಕೊಡಲು ೨೦ ಸಾವಿರ ರೂ ಲಂಚ ನೀಡುವಂತೆ ಬೇಗೂರು ಗ್ರಾ.ಪಂ ಪಿಡಿಓ ಸೌಮ್ಯ, ಲಕ್ಷ್ಮಣ್ ಗೌಡ ಅವರ ಮಗ ವಿನೋದ್‌ಗೌಡ ಅವರಿಗೆ ಬೇಡಿಕೆ ಇಟ್ಟಿದರು ಎನ್ನಲಾಗಿದೆ.
ಶುಕ್ರವಾರ 10 ಸಾವಿರ ರೂ ನೀಡುವಂತೆ ತಿಳಿಸಿದರು ಎನ್ನಲಾಗಿದ್ದು, ಈ ಸಂಬಂಧ ವಿನೋದ್ ಗೌಡ ತುಮಕೂರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದರು, ಪ್ರಕರಣ ದಾಖಲಿಸಿಕೊಂಡ ಎಸಿಬಿ ಡಿವೈಎಸ್‌ಪಿ ಮಲ್ಲಿಕಾರ್ಜುನಯ್ಯ ಹಾಗೂ ಅವರ ಸಿಬ್ಬಂದಿಗಳು ಶುಕ್ರವಾರ ಇಲ್ಲಿನ ತಾ.ಪಂ ಕಚೇರಿ ಬಳಿ ವಂಚಿ ಹಾಕಿ ಕಾಯುತ್ತಿದ್ದರು, ಹಣ ಕೊಡಲು ಬಂದ ವಿನೋದ್‌ಗೌಡ ನಿಗೆ ಗ್ರಾ.ಪಂ ಪಿಡಿಓ ಗ್ರಾ.ಪಂ ಸಹಾಯಕಿ ಅನುಸೂಯ ಅವರ ಕೈಗೆ ಹಣ ನೀಡುವಂತೆ ತಿಳಿಸಿದರು ಎನ್ನಲಾಗಿದ್ದು ಅದರಂತೆ 10 ಸಾವಿರ ರೂ ಹಣವನ್ನು ವಿನೋದ್‌ಗೌಡ ಅನುಸೂಯ ಅವರಿಗೆ ಕೊಡುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅನುಸೂಯ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ 10 ಸಾವಿರ ರೂ ಹಣವನ್ನು ವಿನೋದ್‌ಗೌಡ ಅವರಿಂದ ತೆಗೆದುಕೊಳ್ಳುವಂತೆ ಪಿಡಿಓ ಸೌಮ್ಯ ಅವರು ನನಗೆ ತಿಳಿಸಿದರು ಹಾಗಾಗಿ ಹಣವನ್ನು ನಾನು ತೆಗೆದುಕೊಂಡೆ ಎಂದು ಬಾಯಿಬ್ಬಿಟ್ಟರು ಎನ್ನಲಾಗಿದ್ದು, ಬೇಗೂರು ಗ್ರಾ.ಪಂ ಬಳಿ ಇದ್ದ ಪಿಡಿಓ ಸೌಮ್ಯ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.