ಚಿಂತಾಮಣಿ: ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿದ್ದು, ಕೀಳರಿಮೆ ಬಿಟ್ಟು ಸೌಲಭ್ಯವನ್ನು ಪಡೆದು ಸಾಧನೆ ಮಾಡಿ ಉತ್ತಮ ಫಲಿತಾಂಶವನ್ನು ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೈಕೋರ್ಟಿನ ಹಿರಿಯ ವಕೀಲ ಶ್ರೀರಾಮರೆಡ್ಡಿ ಸರ್ಕಾರಿ ಶಾಲೆಯ ಮಕ್ಕಳಿಗೆ ತಿಳಿ ಹೇಳಿದರು.
ಚಿಂತಾಮಣಿ ತಾಲೂಕು ಚಿಲಕಲನೇಪುì ಹೊಬಳಿ ನಂದನ ಹೊಸಹಳ್ಳಿ, ಅಮಿಟಹಳ್ಳಿ, ರಂಗೇನಹಳ್ಳಿ, ಕಸಬಾ ಹೊಬಳಿ ಗೋಪಸಂದ್ರ, ದೊಡ್ಡಗಂಜೂರು ಹಾಗೂ ಬಿಟ್ಟಗಾನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೈಕೊರ್ಟನ ಖ್ಯಾತ ವಕೀಲ ಶ್ರೀ ರಾಮರೆಡ್ಡಿ ಪರಿವಾರದಿಂದ ಉಚಿತ ವಾಗಿ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ತಾನೂ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಿ, ಗುಣಮಟ್ಟದ ಶಿಕ್ಷಣವನ್ನು ಪಡೆದು, ಇಂದು ಉತ್ತಮ ಸ್ಥಾನದಲ್ಲಿದ್ದೇನೆ. ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ 17 ವರ್ಷದಿಂದ ಲೇಖನ ಸಾಮಗ್ರಿ ವಿತರಿಸುತ್ತಾ ಬಂದಿರುವುದಾಗಿ ತಿಳಿಸಿದರು.
ರೋಟರಿ ಬೆಂಗಳೂರು ಅಲಸೂರು ಸಂಸ್ಥೆ ಸಂತೋಷ್ ಮಾತನಾಡಿ, ತಮ್ಮ ಸಂಸ್ಥೆುಂದ ಸರಕಾರಿ ಶಾಲೆಗಳಲ್ಲಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಲವಾರು ರೀತಿಯ ಸೌಲಭ್ಯಗಳನ್ನು ಒದಿಗಿಸುತ್ತಿದ್ದು, ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಪಡೆದು ಉತ್ತಮ ಗುಮಟ್ಟ ಶಿಕ್ಷ ಪಡೆಯಬೇಕು ಎಂದು ಹೇಳಿದರು. ಬಿಇಒ ವೆಂಕಟೇಶಪ್ಪ ಮಾತನಾಡಿ, ಶಿಕ್ಷಣ ಇಲಾಖೆ ಸಾರ್ವಜನಿಕರ ಸ್ವತ್ತು. ಬೇರೆ ಇಲಾಖೆಗಳಿಗೆ ಹೋಲಿಸಿದರೆ ಶಿಕ್ಷಣ ಇಲಾಖೆ ಮನುಷ್ಯನ ಮದುಳು ಇದ್ದಂತೆ ಇದನ್ನು ಸರಿಯಾಗಿ ಬಳಸಿಕೊಂಡರೆ ಸಮಾಜಕ್ಕೆ ಉತ್ತಮ ಭವಿಷ್ಯವಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಬಹುತೇಕ ಮಕ್ಕಳು ಬಡ ಮಕ್ಕಳಾಗಿದ್ದು, ಸರ್ಕಾರ ಹಾಗೂ ದಾನಿಗಳು ನೀಡುವ ಸೌಲಭ್ಯಗಳನ್ನು ಪಡೆದು ಸಮಾಜಕ್ಕೆ ಒಳ್ಳೆಯ ಹೆಸರು ತನ್ನಿ ಎಂದು ಹೇಳಿದರು.
ಸ್ಕೋಪ್, ಗ್ರೀನ್ ಬೋರ್ಡ್, ಯುಪಿಎಸ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡಲಾಯಿತು. ಬಿಇಒ ವೆಂಕಟೇಶಪ್ಪ, ರೋಟರಿ ಬೆಂಗಳೂರು ಅಲಸೂರು ಸಂಸ್ಥೆಯ ಸಂತೋಷ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ನಂದನ ಹೊಸಹಳ್ಳಿ ಪ್ರೌಡಶಾಲೆ ಪ್ರಭಾರ ಮುಖ್ಯಶಿಕ್ಷಕ ಜನಾರ್ದನರೆಡ್ಡಿ, ಇಸಿಓ ರಾಜ, ಕುಸಮ, ರೋಟರಿ ಸಂಸ್ಥೆಯ ಬಸವರಾಜ್, ವರ್ಷ, ಸುಗು, ಸಂತಾನಲಕ್ಷ್ಮೀ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀರಾಮಪ್ಪ, ಅಮಿಟಿಹಳ್ಳಿ ಶಾಲೆಯ ಮುಖ್ಯಶಿಕ್ಷಕ, ಸತ್ಯನಾರಾಯಸ್ವಾಮಿ, ಶಿಕ್ಷಕರಾದ ರಾಜಗೋಪಾಲ್, ಶ್ವೇತಾ, ನಾಗೇಶ್, ಕೇಶವ ಡಿ, ಶ್ರೀಹರಿ, ರಂಗೇನಹಳ್ಳಿ ಶಾಲೆಯ ಅನುಷಾ. ಪದ್ಮ. ವೆಂಕಟರೆಡ್ಡಿ, ನಾಗರಾಜ್ ಇತರರಿದ್ದರು.