Advertisement

ರಾಜ್ಯ ಹೆದ್ದಾರಿ ತಡೆದು ಎಬಿವಿಪಿ ಪ್ರತಿಭಟನೆ

01:02 PM Dec 01, 2019 | Suhan S |

ಬಸವನಬಾಗೇವಾಡಿ: ತೆಂಗಾಣದಲ್ಲಿ ಗುರುವಾರ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ಶನಿವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಸಿ ಕೆಲ ಹೊತ್ತು ಮನಗೂಳಿ-ಬಿಜ್ಜಳ,ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

Advertisement

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಿಂದ ನೂರಾರು ವಿದ್ಯಾರ್ಥಿನಿಯರು ಘೋಷಣೆ ಕೂಗುತ್ತ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಎಬಿವಿಪಿ ವಿಭಾಗೀಯ ಸಂಚಾಲಕ ಸಚಿನ ಕುಳಗೇರಿ ಮಾತನಾಡಿ, ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಜೀವಂತವಾಗಿ ದಹನ ಮಾಡಿ ಕೊಲೆ ಮಾಡಿದ ಘಟನೆ ಅಖೀಲಭಾರತೀಯ ವಿದ್ಯಾರ್ಥಿ ಪರಿಷತ್‌ ಕಟುವಾಗಿ ಖಂಡಿಸುತ್ತದೆ. ಕ್ರೂರ ಘಟನೆಗೆ ಕಾರಣರಾದವರಿಗೆ ತಕ್ಷಣಮರಣ ದಂಡನೆ ವಿಧಿ ಸಬೇಕೆಂದು ಆಗ್ರಹಿಸುತ್ತದೆ ಎಂದರು.

ತೆಲಂಗಾಣದ ಗೃಹ ಮಂತ್ರಿ ನೀಡಿದಹೇಳಿಕೆ ಅವರ ಕೀಳು ಮಾನಸಿಕತೆಯನ್ನುಬಿಂಬಿಸುತ್ತಿದೆ. ಅಪರಾ ಧಿಗಳಿಗೆಕಠಿಣ ಶಿಕ್ಷೆ ವಿಧಿಸುವ ಬದಲು ಹತ್ಯೆಗೀಡಾದ ವೈದ್ಯರ ಮೇಲೆಯೇ ಪ್ರಶ್ನೆ ಚಿಹ್ನೆ ಕೂರಿಸುವುದು ಚಿಂತಾಜನಕ ಸಂಗತಿಯಾಗಿದೆ ಎಂದರು.  ನಗರ ಕಾರ್ಯದರ್ಶಿ ಸಂತೋಷ ಪಟೆದ ಮಾತನಾಡಿ, ಯಾವುದೇ ಒಬ್ಬಮಹಿಳೆ ಸಹಾಯವನ್ನು ಅಪೇಕ್ಷಿಸಿದಾಗ ಪ್ರತಿಯಾಗಿ ಸಹಾಯ ಮಾಡುವ ಬದಲಾಗಿ ಆ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಜೀವಂತವಿರುವಾಗಲೇ ಸುಟ್ಟು ಕೊಲೆ ಮಾಡುವ ಮಾನಸಿಕತೆವುಳ್ಳವರು ಭೂಮಿ ಮೇಲೆ ಬದುಕಿರುವುದುಯೋಗ್ಯವಲ್ಲ ಎಂದರು.

ತಾಲೂಕು ಸಂಚಾಲಕ ಶಿವಾನಂದಬೆಲ್ಲದ, ಬಂಗಾರೆಪ್ಪಗೌಡ ಪಾಟೀಲ,ಮುತ್ತುರಾಜ ಹಾಳಿಹಾಲ, ಹನುಮಂತ ಹಾದಿಮನಿ, ಸಿದ್ದು ಪೂಜಾರಿ, ಸಂಜುತಳವಾರ, ಬಸವರಾಜ ಬೇಲಿ, ಜ್ಯೋತಿಸಂಗಮ, ಜಯಶ್ರೀ ಮಳ್ಳಿ, ಅನಿತಾ ಲಮಾಣೆ, ಗೀತಾ ಜಾಧವ, ದೀಪಾ ಲಮಾಣಿ ಸೇರಿದಂತೆ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next