Advertisement

ಜೆಎನ್‌ಯುನಲ್ಲಿ ಎಬಿವಿಪಿ ಪ್ರತಿಭಟನೆ

06:26 PM Nov 21, 2019 | Team Udayavani |

ಹೊಸದಿಲ್ಲಿ: ಜವಾಹರ್ಲಾರ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು)ನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಹಾಸ್ಟೆಲ್ ಶುಲ್ಕ ಹೆಚ್ಚಿಸುವ ಪ್ರಸ್ತಾವನೆಯ ವಿರುದ್ಧ ಭಾರೀ ಪ್ರತಿಭಟನೆಗಳು ಮುಂದುವರೆದಿದೆ. ಬಿಜೆಪಿ ಬೆಂಬಲಿತ ಅಂಗಸಂಸ್ಥೆಯಾಗಿರುವ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಗುರುವಾರ ಸಂಸತ್ ಭವನದ ಹೊರಗೆ ಪ್ರತಿಭಟಿಸಲು ತೆರಳುತ್ತಿದ್ದ 9 ಮಂದಿ ಕಾರ್ಯಕರ್ತರನ್ನು ಸಂಸತ್ತಿನ ಬೀದಿಯಲ್ಲಿ ತಡೆಯಲಾಗಿದೆ.

Advertisement

ಶಾಸ್ತ್ರೀ ಭವನದಲ್ಲಿರುವ ಮಾನವ ಸಂಪನ್ಮೂಲ ಸಚಿವಾಲಯದ ಕಚೇರಿಯತ್ತ ಸಾಗುತ್ತಿದ್ದ ವೇಳೆ ಅವರನ್ನು ತಡೆದು ನಿಲ್ಲಿಸಲಾಗಿದೆ. ಹಾಸ್ಟೆಲ್ ಶುಲ್ಕ ಏರಿಕೆ ವಿರುದ್ಧ ಜೆಎನ್‌ಯು ವಿದ್ಯಾರ್ಥಿಗಳು ನಡೆಸಿದ ಆಂದೋಲನದ ಹಿನ್ನೆಲೆಯಲ್ಲಿ ಎಚ್ಆರ್ಡಿ ಸಚಿವಾಲಯ ಸ್ಥಾಪಿಸಿರುವ ಹೈ ಪವರ್ ಕಮಿಟಿಯನ್ನು ರದ್ದುಗೊಳಿಸುವಂತೆ ಎಬಿವಿಪಿ ಒತ್ತಾಯಿಸಿದೆ.

ಶುಲ್ಕ ಹೆಚ್ಚಳದಿಂದ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ. ಆಡಳಿತಾತ್ಮಕವಾದ ತಾತ್ಕಾಲಿಕ ಪರಿಹಾರ ಕೇವಲ ಲಾಲಿಪಾಪ್ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್ ಶುಲ್ಕ ಹೆಚ್ಚಳದ ಜತೆಗೆ ಡ್ರೆಸ್ ಕೋಡ್, ಲೈಬ್ರರಿ ಸಮಯ ನಿರ್ಬಂಧಗಳು ಸೇರಿದಂತೆ ಇನ್ನಿತರ ವಿಚಾರಗಳನ್ನು ಗಮನಿಸಬೇಕು ಎಂದು ಆಕ್ರೋಶವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next