Advertisement

ನಿಂದನೆ: ಪ್ರೇಕ್ಷಕರಿಗೆ ಗೇಟ್‌ಪಾಸ್‌

12:30 AM Dec 29, 2018 | Team Udayavani |

ಮೆಲ್ಬರ್ನ್: ಭಾರತೀಯ ಕ್ರಿಕೆಟಿಗರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಕೆಲವು ಪ್ರೇಕ್ಷಕರನ್ನು ಮೆಲ್ಬರ್ನ್ ಮೈದಾನದಿಂದ ಹೊರಹಾಕಲಾಗಿದೆ. ಗುರುವಾರ, ನಿಮ್ಮ ವೀಸಾ ತೋರಿಸಿ ಎಂದು ಭಾರತೀಯ ಕ್ರಿಕೆಟಿಗರನ್ನು ಅಣಕಿಸುತ್ತಿದ್ದ ಒಂದು ಗುಂಪಿನ ಪ್ರೇಕ್ಷಕರಿಗೆ ಕ್ರಿಕೆಟ್‌ ಆಸ್ಟ್ರೇಲಿಯ ಎಚ್ಚರಿಕೆ ನೀಡಿತ್ತು. ಇದು ಹೀಗೆಯೇ ಮುಂದುವರಿದರೆ ನಿಮ್ಮನ್ನು ಮೈದಾನದಿಂದಾಚೆ ಕಳುಹಿಸಲಾಗುವುದು ಎಂದಿತ್ತು. ಶುಕ್ರವಾರವೂ ಪ್ರಕರಣ ಮರುಕಳಿಸಿದಾಗ, ಕ್ರಿಕೆಟ್‌ ಆಸ್ಟ್ರೇಲಿಯ ಪ್ರೇಕ್ಷಕರನ್ನು ಮುಲಾಜಿಲ್ಲದೆ ಹೊರಗೆ ಕಳುಹಿಸಿತು. 

Advertisement

ಇದೇ ಪ್ರೇಕ್ಷಕರಿಂದ ಭಾರತ ತಂಡದ ನಾಯಕ ಕೊಹ್ಲಿ, ಆಸ್ಟ್ರೇಲಿಯದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಕೂಡ ಅವಹೇಳನಕ್ಕೊಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next