Advertisement

ಸಾಧನೆಯ ಹಿಂದಿನ ನಿಂದನೆ

10:16 AM Jan 25, 2020 | mahesh |

ನಾನು ನನ್‌ ಜಾನು…
-ಇದು ಚಿತ್ರದ ಹೆಸರು. ಬಹುಶಃ ಈ ಶೀರ್ಷಿಕೆ ಕೇಳಿದರೆ, ಇದೊಂದು ಪಕ್ಕಾ ಲವ್‌ಸ್ಟೋರಿ ಸಿನಿಮಾ ಅಂದೆನಿಸವುದು ಸಹಜ. ಆದರೆ, ಇಲ್ಲಿ ಪ್ರೀತಿಗೆ ಎಷ್ಟು ಜಾಗವಿದೆಯೋ ಅಷ್ಟೇ ಜಾಗ ಗಂಭೀರ ವಿಷಯಕ್ಕೂ ಇದೆ. ಆ ಗಂಭೀರ ವಿಷಯ ಏನೆಂಬುದನ್ನು ಚಿತ್ರದಲ್ಲೇ ಕಾಣಬೇಕು. ಅಂದಹಾಗೆ, ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅದಕ್ಕೂ ಮೊದಲು ಚಿತ್ರದ ಹಾಡುಗಳು ಹೊರಬಂದಿವೆ. ಶ್ರೀಹರಿ ನಿರ್ದೇಶನದ ಈ ಚಿತ್ರದಲ್ಲಿ ತಿಳಿಯಾದ ಹಾಸ್ಯವೂ ಇದೆ. ಕಥೆ ಬಗ್ಗೆ ಹೇಳುವುದಾದರೆ, ಸಾಧಿಸೋಕೆ ಹೊರಡುವ ವ್ಯಕ್ತಿಗೆ ಉತ್ಸಾಹ ತುಂಬುವ ಬದಲು ನಿಂದನೆ ಹೆಚ್ಚಾಗುತ್ತೆ. ಜನರು ಕಡೆಗಣಿಸಿದರೂ, ತಾನು ಅಂದುಕೊಡಿದ್ದನ್ನು ಸಾಧಿಸಬೇಕೆಂದು ಹೊರಡುವ ಆ ವ್ಯಕ್ತಿ, ಎಲ್ಲವನ್ನು ಕಳೆದುಕೊಳ್ಳುತ್ತಾನೆ. ನಂತರ ಅವನು ಸಾಧಿಸುತ್ತಾನಾ ಇಲ್ಲವಾ? ಅವನನ್ನು ಆಡಿಕೊಂಡ ಸಮಾಜ ಕೊನೆಗೆ ಏನು ಮಾಡುತ್ತೆ ಅನ್ನೋದು ಕಥೆ. ಚಿತ್ರದಲ್ಲಿ ವಾಸ್ತವ ಅಂಶಗಳಿಗೆ ಜಾಗವಿದೆ. ಪ್ರೀತಿಗೂ ಇಲ್ಲಿ ವಿಶೇಷ ಅರ್ಥ ಕಲ್ಪಿಸಲಾಗಿದೆ.

Advertisement

ಮನು ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಅವರಿಗಿಲ್ಲಿ ಎರಡು ಶೇಡ್‌ ಪಾತ್ರವಿದ್ದು, ಬೇಜವಾಬ್ದಾರಿ ಹುಡುಗನೊಬ್ಬ ಅತ್ಯುನ್ನತ ಕೆಲಸ ಸಿಕ್ಕಿದ ಬಳಿಕ ಜವಾಬ್ದಾರಿ ಹೆಚ್ಚಾದಾಗ, ಅದನ್ನು ಹೇಗೆ ನಿರ್ವಹಿಸುತ್ತಾನೆ ಎಂಬ ಪಾತ್ರ ಮಾಡಿದ್ದಾರಂತೆ.

ಇನ್ನು, ಉಡುಪಿ ಮೂಲದ ಋತ್ವಿಕಾ ಶೆಟ್ಟಿ ನಾಯಕಿ­ಯಾಗಿ ಕಾಣಿಸಿಕೊಂಡಿದ್ದು, ಅವರು, ತನ್ನ ಕುಟುಂಬಕ್ಕಾಗಿ ಯಾವ ತ್ಯಾಗ ಮಾಡೋಕೂ ರೆಡಿಯಾಗಿರುವ ಹುಡುಗಿಯಾಗಿ ನಟಿಸಿದ್ದಾರಂತೆ. ವಿಶೇಷ ಪಾತ್ರದಲ್ಲಿ ಸೃಜನ್‌ ಲೋಕೇಶ್‌ ಕೂಡ ಅಭಿನಯಿಸಿದ್ದಾರೆ ಎಂಬುದು ಚಿತ್ರತಂಡದ ಮಾತು.

ಚಿತ್ರ ನೋಡುವ ಪ್ರತಿಯೊಬ್ಬರಿಗೂ ತಮ್ಮ ಹಳೆಯ ಲವ್‌ಸ್ಟೋರಿ ನೆನಪಾಗುವುದು ಗ್ಯಾರಂಟಿ ಎನ್ನುವ ಚಿತ್ರತಂಡ, ಇದು ಯೂಥ್‌ಗೆ ಇಷ್ಟವಾಗುವ ಚಿತ್ರ ಅನ್ನುತ್ತಾರೆ ಅವರು. ಚಿತ್ರಕ್ಕೆ ಶ್ರೀಧರ್‌ಕಶ್ಯಪ್‌ ಸಂಗೀತ ನೀಡಿದ್ದಾರೆ. ಆನಂದ್‌ ಇಳಯರಾಜ-ಮಾರ ವರ್ಮನ್‌ ಛಾಯಾಗ್ರಹಣದಿವೆ. ವಿಶ್ವ ಸಂಕಲನ ಮಾಡಿದರೆ, ಅಪ್ಪು ವೆಂಕಟೇಶ್‌ ಸಾಹಸವಿದೆ. ಹೇಮಂತ್‌ ರಾಜ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೆಂಪೆಗೌಡ ಎನ್‌, ಹರೀಶ್‌.ಪಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಂದು ಕನ್ನಡ ಚಿತ್ರರಂಗದ

Advertisement

Udayavani is now on Telegram. Click here to join our channel and stay updated with the latest news.

Next