Advertisement

ಮುಸ್ತಫಿಜುರ್‌ ಬದಲು ಅಬುಲ್‌ ಹಸನ್‌

06:00 AM May 31, 2018 | |

ಢಾಕಾ: ಅಫ್ಘಾನಿಸ್ಥಾನ ವಿರುದ್ಧ ಡೆಹ್ರಾಡೂನ್‌ನಲ್ಲಿ ನಡೆ ಯುವ ಟಿ20 ಸರಣಿಯಿಂದ ಬಾಂಗ್ಲಾದ ಗಾಯಾಳು ವೇಗಿ ಮುಸ್ತಫಿಜುರ್‌ ರೆಹಮಾನ್‌ ಈಗಾ ಗಲೇ ಹೊರಗುಳಿದಿದ್ದಾರೆ. ಇವರ ಬದಲು ಅಬುಲ್‌ ಹಸನ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

ಅಬುಲ್‌ ಹಸನ್‌ ಹೊಸ ಮುಖವೇನೂ ಅಲ್ಲ. 6 ವರ್ಷಗಳ ಹಿಂದೆ ವಿಶಿಷ್ಟ ಸಾಧನೆಯ ಮೂಲಕ ಇವರು ಸುದ್ದಿಯಾಗಿದ್ದರು. ಮೊದಲ ಟೆಸ್ಟ್‌ನಲ್ಲೇ 10ನೇ ಕ್ರಮಾಂಕದಲ್ಲಿ ಆಡಲಿಳಿದು ಶತಕ ಬಾರಿಸಿದ ವಿಶ್ವದ ಪ್ರಥಮ ಆಟಗಾರನೆಂಬ ದಾಖಲೆ ಅಬುಲ್‌ ಹಸನ್‌ ಅವರದಾಗಿತ್ತು. ಅದು ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ 2012ರ ಖುಲಾ° ಟೆಸ್ಟ್‌ ಪಂದ್ಯ. ಇದರಲ್ಲಿ ಹಸನ್‌ 113 ರನ್‌ ಬಾರಿಸಿದ್ದರು.

ಅಬುಲ್‌ ಹಸನ್‌ 2012-13ರ ಅವಧಿಯಲ್ಲಿ 3 ಟೆಸ್ಟ್‌, 7 ಏಕದಿನ, 4 ಟಿ20 ಪಂದ್ಯಗಳನ್ನಾಡಿದ್ದರು. ಆದರೆ ಅನಂತರ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಅಸ್ಥಿರ ಪ್ರದರ್ಶನ ನೀಡಿ ತಂಡದಿಂದ ಬೇರ್ಪಟ್ಟಿದ್ದರು. ಬಾಂಗ್ಲಾ-ಅಫ್ಘಾನ್‌ ಸರಣಿಯ ಪಂದ್ಯಗಳು ಜೂ. 3, 5 ಮತ್ತು 7ರಂದು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next