Advertisement
ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಈ ಕಾಲನಿಯಲ್ಲಿ ಮೂರ್‍ನಾಲ್ಕು ದಿನಗಳಿಗೊಮ್ಮೆ ನಳ್ಳಿಯಲ್ಲಿ ಅಲ್ಪ ಪ್ರಮಾಣದ ನೀರು ಸರಬರಾಜಾಗುತ್ತಿದೆ. ಆದರೆ ಈ ನೀರು ಸಾಕಾಗುತ್ತಿಲ್ಲ ಎಂಬುದನ್ನು ಮನಗಂಡು ಸ್ಥಳೀಯ ವಾರ್ಡು ಸದಸ್ಯ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ಎ. ಆರ್ ಅವರು ಕಳೆದ ಕೆಲ ವರ್ಷಗಳಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ.
ಈ ಕಾಲೋನಿಯಲ್ಲಿ ಸುಮಾರು 300 ರಷ್ಟು ಮನೆಗಳಿದ್ದು, ಇದ್ದ ಬಾವಿ, ನೀರಿನ ಆಶ್ರಯವು ಬತ್ತಿ ಹೋಗಿರುತ್ತದೆ. ಅಬೂಬಕ್ಕರ್ ಅವರ ಮನೆಯ
ಬಾವಿಯಲ್ಲಿ ಹೇರಳವಾಗಿ ನೀರಿದ್ದು, ಅವರು ಸ್ವತಃ ಬಾವಿಯಿಂದ ಸುಮಾರು ಎರಡು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ಗೆ ನೀರನ್ನು ತುಂಬಿಸಿ ಸ್ವಂತ ಖರ್ಚಿನಲ್ಲಿಯೇ ಈ ಸರಕಾರಿ ಗುಡ್ಡೆಯ ಕಾಲೋನಿಯ ಎಲ್ಲಾ ಮನೆಗಳಿಗೂ ಜಾತಿ ಬೇಧ ಮರೆತು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ಈ ಭಾಗದಲ್ಲಿ ಪಂಚಾಯತ್ ನೀರಿಗಾಗಿ ಮೂರು ಬೋರ್‌ವೆಲ್ ಹಾಕಲಾಗಿದ್ದು, 2 ಬೋರ್‌ವೆಲ್‌ಗಳು ಕೆಟ್ಟಿವೆ. ಇದ್ದ 1 ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ನೀರಿನ ಕೊರತೆ ಬಾಧಿಸುತ್ತಿದೆ. ಇಂತಹ ಕಡು ಬೇಸಿಗೆಯ ಸಂದರ್ಭ ಕುಡಿಯುವ ನೀರಿನ ತೀವ್ರ ಬರವನ್ನು
ಎದುರಿಸಬೇಕಾದ ದುಸ್ಥಿತಿ ಈ ಕಾಲೋನಿ ನಿವಾಸಿಗಳದ್ದಾಗಿದ್ದು,
ಅಬೂಬಕ್ಕರ್ ಅವರ ಈ ಕೆಲಸಕ್ಕೆ ಸ್ಥಳೀಯರು ಮುಕ್ತ ಕಂಠದಿಂದ
ಶ್ಲಾ ಸಿದ್ದಾರೆ.
Related Articles
ದಿನವೊಂದರ 200ರಿಂದ 300 ಲೀಟರ್‌ಗೂ ಅಧಿಕ ನೀರನ್ನು ಪ್ರತೀ ಮನೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 7ಗಂಟೆಯಿಂದ 12 ಗಂಟೆಯ ತನಕ ಹಾಗೂ ಸಂಜೆ 4ಗಂಟೆಯಿಂದ ರಾತ್ರಿ ಸರಿಸುಮಾರು 10 ಗಂಟೆಯ ತನಕವೂ ಕುಡಿಯುವ ನೀರನ್ನು ಉದ್ಯಮಿ ಅಬೂಬಕ್ಕರ್ ಮನೆಮಂದಿಯ ಸಹಕಾರದೊಂದಿದೆ ಸರಬರಾಜು ಮಾಡುತ್ತಿದ್ದಾರೆ.
Advertisement
ಮನೆಯ ಬಾವಿಯಲ್ಲಿ ಭೂಮಿತಾಯಿ ನೀಡಿದ ನೀರು ಇದೆ. ಪತ್ನಿ, ಮಕ್ಕಳ ಸಹಕಾರದಿಂದ ಸ್ವತಃ ಬಾಡಿಗೆ ವಾಹನ ಗೊತ್ತುಪಡಿಸಿ ಖರ್ಚು ಭರಿಸಿಕೊಂಡು ಸ್ಥಳೀಯ 300ರಷ್ಟು ನಿವಾಸಿಗಳಿಗೆ ಕೊಡುತ್ತಿದ್ದೇನೆ. ಮುಂದೆಯೂ ಈ ಸೇವೆ ನಡೆಸಲು ಬದ್ಧವಾಗಿದ್ದೇನೆ.– ಅಬೂಬಕ್ಕರ್ ಎ.ಆರ್, ಉದ್ಯಮಿ, ಕಟಪಾಡಿ ಗ್ರಾ.ಪಂ.ಸದಸ್ಯ.