Advertisement

ಭಾರತ ಮೂಲದ ಕ್ಯುರೇಟರ್‌ ಮೋಹನ್‌ ಸಿಂಗ್‌ ಆತ್ಮಹತ್ಯೆ

10:49 PM Nov 07, 2021 | Team Udayavani |

ಅಬುಧಾಬಿ: ಅಬುಧಾಬಿ ಕ್ರಿಕೆಟ್‌ ಸ್ಟೇಡಿಯಂನ ಮುಖ್ಯ ಕ್ಯುರೇಟರ್‌, ಭಾರತೀಯ ಮೂಲದ ಮೋಹನ್‌ ಸಿಂಗ್‌ (45) ಆತ್ಮಹತ್ಯೆಗೆ ಶರಣಾಗಿದ್ದಾರೆ.

Advertisement

ರವಿವಾರದ ನ್ಯೂಜಿಲ್ಯಾಂಡ್‌-ಅಫ್ಘಾನಿಸ್ಥಾನ ಪಂದ್ಯಕ್ಕೂ ಮುನ್ನ ಈ ದುರಂತ ಸಂಭವಿಸಿದೆ.ಹೊಟೇಲಿನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಂಗ್‌ ಶವ ಕಂಡುಬಂದಿದೆ.

ಯುಎಇ ಕ್ರಿಕೆಟ್‌ ಮೂಲಗಳ ಪ್ರಕಾರ ಮೋಹನ್‌ ಸಿಂಗ್‌ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದಾದ ಸಾಧ್ಯತೆ ಇದೆ.

ಕಳೆದ 4 ತಿಂಗಳಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು. ಬೆಳಗ್ಗೆ ನ್ಯೂಜಿಲ್ಯಾಂಡ್‌-ಅಫ್ಘಾನಿಸ್ಥಾನ ಪಂದ್ಯಕ್ಕೆಂದು ರೂಪಿಸಲಾದ ಪಿಚ್‌ ಅನ್ನು ಪರೀಕ್ಷಿಸಿ ಬಂದ ಅವರು ಹೊಟೇಲ್‌ ಕೊಠಡಿಗೆ ಮರಳಿದ್ದರು.

ಇದನ್ನೂ ಓದಿ:ಜಗತ್ತಿನ ದೈತ್ಯ ಕಾರು ಕಂಪನಿ ಟೆಸ್ಲಾದ ಶೇ. 10ರಷ್ಟು ಷೇರು ಮಾರಾಟ?

Advertisement

ಮೋಹನ್‌ ಸಿಂಗ್‌ ನಿಧನಕ್ಕೆ ಅಬುಧಾಬಿ ಕ್ರಿಕೆಟ್‌ ಮತ್ತು ಐಸಿಸಿ ಶೋಕ ವ್ಯಕ್ತಪಡಿಸಿವೆ. ಆದರೆ ಅವರ ಸಾವಿಗೆ ಕಾರಣ ಏನೆಂಬುದನ್ನು ತಿಳಿಸಿಲ್ಲ. ಪೊಲೀಸ್‌ ತನಿಖೆಯ ಬಳಿಕವಷ್ಟೇ ಇದು ತಿಳಿದು ಬರಬೇಕಿದೆ.

ಮೋಹನ್‌ ಸಿಂಗ್‌ ಉತ್ತರಾಖಂಡದವರು. ಬಿಸಿಸಿಐ ಮುಖ್ಯ ಕ್ಯುರೇಟರ್‌ ದಲ್ಜಿತ್‌ ಸಿಂಗ್‌ ಅವರೊಂದಿಗೆ ಮೊಹಾಲಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಅವರು 2000ದ ಆರಂಭದಲ್ಲಿ ಯುಎಇಗೆ ತೆರಳಿ ಅಲ್ಲಿಯೇ ನೆಲೆಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next