Advertisement

ಜಿಯೋದ ಶೇ 1.85 ಪಾಲನ್ನು 9,000 ಕೋಟಿಗೆ ಖರೀದಿಸಿದ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ

03:36 PM Jun 05, 2020 | Mithun PG |

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಜಿಯೋ ಪ್ಲಾಟ್‌ ಫಾರ್ಮ್‌ಗಳಿಗಾಗಿ ಹೂಡಿಕೆಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ. ಇದೀಗ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಜಿಯೋದ ಶೇ 1.85 ರಷ್ಟು ಪಾಲನ್ನು 9,093  ಕೋಟಿ ರೂ. ಗಳಿಗೆ  ಖರೀದಿಸಿದೆ ಎಂದು  ಆರ್ ಐ ಎಲ್ ತಿಳಿಸಿದೆ.

Advertisement

ಗಮನಾರ್ಹ ಸಂಗತಿಯೆಂದರೇ ಕಳೆದ 6 ವಾರಗಳಲ್ಲಿ ಜಿಯೋದಲ್ಲಿ ಹೂಡಿಕೆ ಮಾಡಿದ 6 ಸಂಸ್ಥೆ ಇದಾಗಿದೆ. ಜಿಯೋದಲ್ಲಿ  ಮುಬದಲಾ ಹೂಡಿಕೆ ಮಾಡುವ ಮೂಲಕ ಮಾರ್ಚ್ 2021 ರ ವೇಳೆಗೆ ಆರ್‌ಐಎಲ್ ಅನ್ನು ನಿವ್ವಳ ಸಾಲ ಮುಕ್ತ ಕಂಪನಿಯನ್ನಾಗಿ ಮಾಡುವ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ ಎಂದೇ ವಿಶ್ಲೇಷಿಲಾಗಿದೆ.

ಮುಖೇಶ್ ಅಂಬಾನಿಯ ಒಡೆತನದ ಜಿಯೋ ಸಂಸ್ಥೆಯ ಮೇಲೆ ಸತತ ಜಾಗತಿಕ ಹೂಡಿಕೆಯ ಒಟ್ಟು ಮೌಲ್ಯ  87,655.35 ಕೋಟಿ ರೂ.  ಎಂದು ತಿಳಿದುಬಂದಿದೆ. ಪ್ರಥಮಬಾರಿಗೆ ಫೇಸ್​ಬುಕ್​ ಜಿಯೋದ ಷೇರನ್ನು ಶೇ.9.99 ಪಾಲನ್ನು ಖರೀದಿಸಿತ್ತು.

ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1 ಪಾಲನ್ನು 5,655.75 ಕೋಟಿ ರೂ.ಗೆ ಖರೀದಿಸಿತ್ತು. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿತ್ತು. ನಂತರ ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್​ ಅಟ್ಲಾಂಟಿಕ್​  ಹಾಗೂ ಶೇ. 2.32 ಪಾಲನ್ನು 11,367 ಕೋಟಿ ರೂಪಾಯಿಗೆ ಕೆಕೆಆರ್​ ಖರಿದಿಸಿತ್ತು.

ಈ ಬಗ್ಗೆ ಮಾತನಾಡಿದ ಮುಖೇಶ್  ಅಂಬಾನಿ, ಅಬುಧಾಬಿ ಸಂಸ್ಥೆ ಜಿಯೋ ಮೇಲೆ ಹೂಡಿಕೆ ಮಾಡುತ್ತಿರುವ ವಿಚಾರ ಖುಷಿ ತಂದಿದೆ. ಡಿಜಿಟಲ್​ ಇಂಡಿಯ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲು ಈ ಹೂಡಿಕೆ ಸಹಕಾರಿಯಾಗಲಿದೆ ಎಂದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next