Advertisement

ಸಂಪೂರ್ಣ ಹದಗೆಟ್ಟ ಹೆಬ್ರಿ ಕಾಲೇಜು ರಸ್ತೆ: ಸಂಚಾರಕ್ಕೆ ಸಮಸ್ಯೆ

01:10 AM Jul 28, 2019 | sudhir |

ಹೆಬ್ರಿ: ಹೆಬ್ರಿ ಕಾಲೇಜಿಗೆ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.

Advertisement

ಹೆಬ್ರಿ ಮೂರು ರಸ್ತೆ ಮಾರ್ಗವಾಗಿ ಉಡುಪಿ ರಸ್ತೆಗೆ ಸಂಪರ್ಕಿಸುವ ಜಿ.ಪಂ. ರಸ್ತೆ ಇದಾಗಿದ್ದು ಹೊಂಡ ಗುಂಡಿಗಳ ನಡುವೆ ರಸ್ತೆ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿಗಳಿಗೂ ಸಮಸ್ಯೆ

ಈ ಮಾರ್ಗದಲ್ಲಿ ದಿನನಿತ್ಯ ಹೈಸ್ಕೂಲ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಒಡಾಡುತ್ತಿದ್ದು ವಾಹನ ಸವಾರರರು ಹೊಂಡಗಳ ನಡುವೆ ಚಲಿಸುವಾಗ ನಿಯಂತ್ರಣ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಸಮೀಪದಲ್ಲಿಯೇ ಸರಕಾರಿ ಆಸ್ಪತ್ರೆ ಕೂಡ ಇದ್ದು ಅಲ್ಲಿಗೆ ತೆರಳುವ ರೋಗಿಗಳಿಗೂ ಸಮಸ್ಯೆಯಾಗುತ್ತಿದೆ.

ಪ್ರತಿಭಟನೆ ಎಚ್ಚರಿಕೆ

Advertisement

ಸಂಬಂಧಪಟ್ಟ ಇಲಾಖೆ ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸ ಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ

ಚುನಾವಣೆಗೂ ಮುನ್ನ ಭರವಸೆ

ಈ ಭಾಗದ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದರೆ ಜಿ.ಪಂ. ಗಮನಕ್ಕೆ ತನ್ನಿ ಎಂದು ಹೇಳುತ್ತಾರೆ. ಅನಂತರ ರಕ್ಷಣಾ ವೇದಿಕೆ ವತಿಯಿಂದ ಜಿ.ಪಂ. ಜನಪ್ರತಿನಿಧಿಗಳಲ್ಲಿ ಸಮಸ್ಯೆ ಬಗ್ಗೆ ಹೇಳಿದಾಗ ಅನುದಾನ ಬಿಡುಗಡೆಯಾಗಿದೆ ಶೀಘ್ರ ಕಾಮಗಾರಿ ಆಗುತ್ತದೆ ಎಂದು ಹೇಳುತ್ತಾರೆ. ಚುನಾವಣೆ ಮೊದಲೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಸಮಸ್ಯೆ ಇನ್ನೂ ಹಾಗೆ ಇದೆ.
– ರವಿ ಹೊಸೂರು, ಸ್ಥಳೀಯ ನಿವಾಸಿ
Advertisement

Udayavani is now on Telegram. Click here to join our channel and stay updated with the latest news.

Next