ನವದೆಹಲಿ: 1975ರಲ್ಲಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿರುವುದು ಖಂಡಿತವಾಗಿ ತಪ್ಪು ನಿರ್ಣಯ. ಆದರೆ ಕಾಂಗ್ರೆಸ್ ಪಕ್ಷವು ಭಾರತದ ಸಾಂವಿಧಾನಿಕ ಚೌಕಟ್ಟನ್ನು ಎಂದಿಗೂ ವಶಪಡಿಸಿಕೊಳ್ಳಲು ಪ್ರಯತ್ನಿಸಲಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ ಬಸು ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತುರ್ತುಪರಿಸ್ಥಿತಿ ಅತ್ಯಂತ ತಪ್ಪಾದ ನಿರ್ಣಯ. ನನ್ನ ಅಜ್ಜಿ (ಇಂದಿರಾಗಾಂಧಿ) ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಾಗ್ಯೂ ಅಂದಿನ ತುರ್ತುಪರಿಸ್ಥಿತಿ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ತುರ್ತುಪರಿಸ್ಥಿತಿಗಿಂತ ಮೂಲಭೂತವಾಗಿ ಭಿನ್ನವಾಗಿದೆ. ಮಾತ್ರವಲ್ಲದೆ ಆರ್ ಎಸ್ ಎಸ್ ಇಂದು ಸ್ವತಂತ್ರ ಸಂಸ‍್ಥೆಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು.
ಇದನ್ನೂ ಓದಿ: ನಿತ್ಯಭವಿಷ್ಯ: ಈ ರಾಶಿಯವರು ಇಂದು ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ವಹಿಸಿ !
ಕಾಂಗ್ರೆಸ್ ಪಕ್ಷ ಯಾವುದೇ ಹಂತದಲ್ಲೂ ಭಾರತದ ಸಾಂವಿಧಾನಿಕ ಚೌಕಟ್ಟನ್ನು ವಶಪಡೆಯಲು ಪ್ರಯತ್ನಿಸಲಿಲ್ಲ. ನಾವು ಅಂತಹ ಕಾರ್ಯ ಮಾಡಲು ಬಯಸಿದ್ದರೂ, ನಮಗದು ಸಾಧ್ಯವಿಲ್ಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಮೂಲಭೂತ ವ್ಯವಸ್ಥೆಗೆ ವಿಭಿನ್ನವಾಗಿ ದೇಶದ ಸಾಂವಿಧಾನ ವ್ಯವಸ್ಥೆಗೆ ಜನರನ್ನು ತುಂಬುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಹ ರಾಹುಲ್ ಗಾಂಧಿ, 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು ತಪ್ಪು ನಿರ್ಣಯ ಎಂದು ತಿಳಿಸಿದ್ದರು. ಮಾತ್ರವಲ್ಲದೆ 1975ರ ತುರ್ತುಪರಿಸ್ಥಿತಿ ಹೇರಿರುವ ತಮ್ಮ ನಿರ್ಣಯದ ಕುರಿತಾಗಿ ಸ್ವತಃ ಇಂದಿರಾಗಾಂಧಿಯವರೇ ಮಹಾರಾಷ್ಟ್ರ ರ್ಯಾಲಿಯೊಂದರ ಸಮಯದಲ್ಲಿ ಕ್ಷಮೆ ಯಾಚಿಸಿದ್ದರು ಎಂದು ತಿಳಿಸಿದ್ದರು.
ಇದನ್ನೂ ಓದಿ: ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO