Advertisement

ಕಾಲು ನೋವಾದ ಕಾರಣ ಕಲಾಪಕ್ಕೆ ಗೈರು: ಈಶ್ವರಪ್ಪ ಹೇಳಿಕೆ

04:42 PM Sep 14, 2022 | Team Udayavani |

ಶಿವಮೊಗ್ಗ: ”ನನಗೆ ಕಾಲು ನೋವಾಗಿರುವ ಕಾರಣ ಸದನದ ಕಲಾಪದಲ್ಲಿ ಭಾಗವಹಿಸಿಲ್ಲ ಅಷ್ಟೇ.ಇದರಲ್ಲಿ ಬೇರೆ ವಿಶೇಷ ಏನಿಲ್ಲ. ನೀವು ಹುಡುಕಿದರೂ ಸಿಗುವುದಿಲ್ಲ.ನನಗೂ ಸದನದಲ್ಲಿ ಭಾಗವಹಿಸಬೇಕು ಎಂಬ ಆಸೆ ಇದೆ,ಆದರೆ ವೈದ್ಯರು ರೆಸ್ಟ್ ಮಾಡಿ ಅಂದಿದ್ದಾರೆ” ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಸರಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಸಿದ್ದರಾಮಯ್ಯ ಸಮರ್ಥವಾಗಿ ಟೀಕೆ ಮಾಡುತ್ತಿದ್ದಾರೆ ಅನ್ನುವ ಅಂಶ ರಾಜ್ಯದ ಜನತೆಗೆ ಅನ್ನಿಸುತ್ತಿಲ್ಲ.ಗಂಟಲಿನಿಂದ ಜೋರಾಗಿ ವಾಗ್ದಾಳಿ ಮಾಡಿದ್ರೆ ಜನ ಒಪ್ಪುವುದಿಲ್ಲ.ನಾವು ಭ್ರಷ್ಟಾಚಾರ ಬಿಚ್ಚಿಡುತ್ತೇವೆ, ಬಿಚ್ಚಿಡುತ್ತೇವೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದರು. ಇವತ್ತಿನವರೆಗೂ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ.40% ಅಂತ ಕೆಂಪಣ್ಣ ಹೇಳಿದರೂ, ಆದರೆ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ.ಒಬ್ಬನೇ ಒಬ್ಬ ಸಚಿವನ ವಿರುದ್ದ ದಾಖಲೆ ಬಿಡುಗಡೆ ಮಾಡಿದರೆ ಉತ್ತರ ಕೊಡುತ್ತೇವೆ. ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಅನ್ನುವ ಅನುಮಾನ ರಾಜ್ಯದ ಜನರದ್ದಾಗಿದೆ” ಎಂದರು.

”ಸಿದ್ದರಾಮಯ್ಯ ಅವರು ಬೋಟ್ ನಲ್ಲಿ ತೇಲಿಕೊಂಡು ಹೋಗಿದ್ದನ್ನು ನೋಡಿದೆ. ಒಂದೂವರೆ ಅಡಿ‌ ನೀರು ನನ್ನ ಮೊಮ್ಮಗ ಆ ನೀರಿನಲ್ಲಿ ನಡೆದುಕೊಂಡು ಹೋಗುತ್ತಾನೆ. ಇವರು ಒಂದೂವರೆ ಅಡಿ ನೀರಲ್ಲಿ ಬೋಟಲ್ಲಿ ನಿಂತುಕೊಂಡು ನಾನು ವಿಪಕ್ಷ ನಾಯಕನಾಗಿ ವೀಕ್ಷಣೆ ಮಾಡಿದೆ ಅಂತ ತೋರಿಸಲು ಮಾಡಿದ ನಾಟಕ ”ಎಂದರು.

”ಅಕ್ರಮ ಒತ್ತುವರಿಯನ್ನು ಬಿಜೆಪಿ ಸರಕಾರ ತೆರವು ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಇದ್ದಾಗ ಏಕೆ ಮಾಡಲಿಲ್ಲ.ನಲಪಾಡ್ ಅವರ ಸಂಸ್ಥೆಯಿಂದಲೇ ಒತ್ತುವರಿ ಆಗಿದೆ ಅಂತ ಒಪ್ಪಿಕೊಂಡಿದ್ದಾರೆ. ಇಷ್ಟು ವರ್ಷ ಒತ್ತುವರಿಗೆ ಅವಕಾಶ ಮಾಡಿ‌ ಕೊಟ್ಟಿದ್ದೆ ಕಾಂಗ್ರೆಸ್” ಎಂದರು.

”ಪ್ರಭಾವಿ ವ್ಯಕ್ತಿಗಳ ಬಿಟ್ಟು ಬಡವರ ಕಟ್ಟಡ ಹೊಡೆಯುತ್ತಿದ್ದಾರೆ ಎಂಬ ಬಣ್ಣ ಕಟ್ಟುತ್ತಿದ್ದಾರೆ. ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಇದ್ದದ್ದೆ, ಒತ್ತುವರಿ ತೆರವು ಮಾಡಲು ಜನರೇ ಸಹಕಾರ ಕೊಡುತ್ತಿದ್ದಾರೆ.ಹೀಗಾಗಿ ಬೆಂಗಳೂರು ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

Advertisement

”ಕಾಶಿ ವಿಶ್ವನಾಥನ ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದರು. ಹಿಂದೂಗಳಿಗೆ ವರ್ಷದಲ್ಲಿ ಒಂದು ದಿನ ಮಾತ್ರ ಪೂಜೆಗೆ ಅವಕಾಶ ಇತ್ತು.ಆ ಸ್ಥಳದಲ್ಲಿ ಗಣಪತಿ, ಮಾರುತಿ ವಿಗ್ರಹ, ಶೃಂಗಾರ ಗೌರಿ, ಈಶ್ವರಲಿಂಗ ಎಲ್ಲಾ ಇದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಲು ಸಹಕಾರ ಕೊಡುತ್ತಿದ್ದಾರೋ, ಅದೇ ರೀತಿ ಇಲ್ಲಿಯೂ ಸಹ ಮುಸಲ್ಮಾನರು ಸಹಕಾರ ಕೊಡುತ್ತಾರೆ. ಈ ದೇಶ ಶಾಂತಿಯಿಂದ ಇರಬಾರದು ಎಂಬ ಅಪೇಕ್ಷೆ ಇರುವವರು, ನ್ಯಾಯಾಲಯ ನಂಬದೇ ಇರುವವರು ಕೆಲವರು ಅಡ್ಡ ಬರಬಹುದು.ಮುಸಲ್ಮಾನ ಹಿರಿಯರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ” ಎಂದರು.

”ಸಂವಿಧಾನ ಮೀರಿ, ನ್ಯಾಯಾಲಯದ ತೀರ್ಪು ಮೀರಿ ಗಲಾಟೆ ನಡೆಸುವವರಿಗೆ ಬುದ್ದಿ ಹೇಳಬೇಕು.350ಕ್ಕೂ ಹೆಚ್ಚು ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದಾರೆ ಎಂಬ ಮಾಹಿತಿ‌ ಇದೆ. ಅಯೋಧ್ಯೆ, ಕಾಶಿ, ಮಥುರಾ ಮೂರು ಪವಿತ್ರವಾದ ಕ್ಷೇತ್ರಗಳು. ಮುಸಲ್ಮಾನರು ಹೊಸದಾಗಿ ಕಟ್ಟಿದ ಮಸೀದಿಗಳಿಗೆ ಹಿಂದೂಗಳು ತೊಂದರೆ ಕೊದುವುದಿಲ್ಲ. ಹಳೆ ದೇವಸ್ಥಾನ ಹೊಡೆದು ಮಸೀದಿ ಕಟ್ಟಿದ್ದರೆ ಹಿಂದುಗಳು ಯಾವುದೇ ಕಾರಣಕ್ಕೂ ಬಿಡುವುದಿಲ್ಲ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next