Advertisement

ಈ ಫ‌ಜೀತಿಗೆ ಪಿಎನ್‌ಬಿ ಕಾರಣ, ಸಾಲ 5,000 ಕೋಟಿ ದಾಟದು: ನೀರವ್‌

03:51 PM Feb 20, 2018 | Team Udayavani |

ಮುಂಬಯಿ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 11,300 ಕೋಟಿ ರೂ. ವಂಚನೆ ಮಾಡಿರುವ ಕಾರಣಕ್ಕೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖಾ ಕ್ರಮಗಳಿಗೆ ಗುರಿಯಾಗಿರುವ ಮತ್ತು ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ, ತಾನು ಬ್ಯಾಂಕಿಗೆ ಪಾವತಿಸಬೇಕಿರುವ ಸಾಲ ಮೊತ್ತ 5,000 ಕೋಟಿ ದಾಟುವುದಿಲ್ಲ ಎಂದು ಹೇಳಿದ್ದಾರೆ.

Advertisement

”ಪಿಎನ್‌ಬಿ ಅಧಿಕಾರಿಗಳ ತೀರ ಅಸಹಜ, ಅತ್ಯಾತುರದ ಕ್ರಮಗಳಿಂದಾಗಿ ತನ್ನ ಪಾಲಿಗೆ ಸಂಧಾನದ ಎಲ್ಲ ದಾರಿಗಳು ಮುಚ್ಚಿದಂತಾಗಿದೆ; ಇದಕ್ಕೆಲ್ಲ ಪಿಎನ್‌ಬಿ ಯೇ ಕಾರಣ; ದಯವಿಟ್ಟು ಬ್ಯಾಂಕ್‌ ಸುಸ್ತಿ ಸಾಲ ತೀರಿಸುವ ನನ್ನ  ಪ್ರಯತ್ನ ಬೆಂಬಲಿಸಿ” ಎಂದು ಫೆ.15-16ರಂದು ಪಿಎನ್‌ಬಿ ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ. 

”ಪಿಎನ್‌ಬಿ ನನ್ನ ಸಾಲ ಬಾಧ್ಯತೆಗಳನ್ನು ತಪ್ಪಾಗಿ ತೋರಿಸಿರುವ ಫ‌ಲವಾಗಿ ಮಾಧ್ಯಮಗಳು ಅತ್ಯಾತುರದ ವರದಿಗಾರಿಕೆಯಲ್ಲಿ ಅದನ್ನು ಬೃಹತ್‌ ಮೊತ್ತವಾಗಿ ಡಂಗುರಬಾರಿಸಿವೆ; ನಿಜಕ್ಕಾದರೆ ನನ್ನ ಸಾಲ ಬಾಕಿ ಮೊತ್ತ 5,000 ಕೋಟಿ ರೂ. ದಾಟುವುದಿಲ್ಲ” ಎಂದು ನೀರವ್‌ ಮೋದಿ ಬರೆದುಕೊಂಡಿದ್ದಾರೆ. 

”ಪಿಎನ್‌ಬಿ ಅಧಿಕಾರಗಳ ಅತ್ಯಾತುರದ ಕ್ರಮದ ಪರಿಣಾಮವಾಗಿ ನನ್ನ ಫೈರ್‌ಸ್ಟಾರ್‌ ಇಂಟರ್‌ನ್ಯಾಶನಲ್‌ ಮತ್ತು ಫೈರ್‌ಸ್ಟಾರ್‌ ಡೈಮಂಡ್‌ ಇಂಟರ್‌ನ್ಯಾಶನಲ್‌ ಕಂಪೆನಿಗಳು ಕಾರ್ಯ ನಿಲುಗಡೆಗೆ ಗುರಿಯಾಗಿವೆ. ಇದರ ಫ‌ಲವಾಗಿ ನನ್ನ ಸಮೂಹದ ಬ್ಯಾಂಕ್‌ ಸುಸ್ತಿ ಸಾಲ ತೀರಿಸುವ ಸಾಮರ್ಥ್ಯಕ್ಕೆ ತೀವ್ರ ಧಕ್ಕೆ ಉಂಟಾಗಿದೆ” ಎಂದು ನೀರವ್‌ ಮೋದಿ ಪತ್ರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next