Advertisement

ವಿದೇಶ ಪ್ರವಾಸ ಕಥನ 8: ಆಕರ್ಷಕ ರಾಜಧಾನಿ ಸಮುದ್ರ ಪರ್ವತಗಳ ವಿಹಂಗಮ ನಾಡು ಮಸ್ಕತ್!

05:33 PM Aug 31, 2024 | Team Udayavani |

ಒಮಾನ್ ರಾಷ್ಟ್ರದ ರಾಜಧಾನಿ ಅನ್ನುವ ಪಟ್ಟ ಮಸ್ಕತ್ ಗೆ ಇದೆ .ಈ ಮಸ್ಕತ್ ಹೇಗಿದೆ ಮತ್ತು ಈ ಮಸ್ಕತ್ ಗೂ ಅಬುಧಾಬಿ ದುಬೈಗೂ ಏನಾದರು ವ್ಯತ್ಯಾಸವಿರಬಹುದಾ ಅನ್ನುವ ಕುತೂಹಲದಿಂದಾಗಿಯೇ ಮಸ್ಕತ್ ನ್ನು ಒಮ್ಮೆ ನೇೂಡಿ ಬರೇೂಣ ಅಂದುಕೊಂಡು ಅಬುಧಾಬಿಯಿಂದ ಒಮಾನ್ ರಾಜಧಾನಿ ಮಸ್ಕತ್ ಕಡೆಗೆ ಹೊರಟೆವು. ಅಬುಧಾಯಿಂದ ಸುಮಾರು 500 ಕಿ.ಮೀ ವಾಯುಯಾನ ದೂರದಲ್ಲಿರುವ ಪ್ರಮುಖವಾದ ನಗರವೇ ಮಸ್ಕತ್.ಅಬುಧಾಬಿ ದುಬೈ ಯಿಂದ ಮಸ್ಕತ್ ಗೆ ವಾಯುಮಾರ್ಗದಲ್ಲೂ ಚಲಿಸ ಬಹುದು, ನೆಲ ಮಾರ್ಗದಲ್ಲಿ ಬಸ್ಸು ಕಾರುಗಳ ಮೂಲಕವುಾ ಪ್ರಯಾಣಿಸಬಹುದು ಅಥವಾ ಹೊರ ದೇಶಗಳಿಂದ ನೇರವಾಗಿ ವಿಮಾನದ ಮೂಲಕವೂ ಮಸ್ಕತ್ ಅಂತರರಾಷ್ಟ್ರೀಯ ವಿಮಾನದ ಮೂಲಕವೂ ಮಸ್ಕತ್ ತಲುಪುವ ವ್ಯವಸ್ಥೆ ಇದೆ.‌

Advertisement

ಅಬುಧಾಬಿಯಿಂದ ಕೇವಲ ಒಂದು ಗಂಟೆಯೊಳಗೆ ವಿಮಾನಯಾನದ ಮೂಲಕ ತಲುಪಬಹುದು. ಒಮಾನ್ ಆಡಳಿತದ ಕೇಂದ್ರ ಸ್ಥಾನವಾದ ಈ ಮಸ್ಕತ್ ಒಮಾನ್ ರಾಷ್ಟ್ರದಲ್ಲಿ ಅತಿ ಹೆಚ್ಚಿನ ಜನನಿಬಿಡ ಪ್ರದೇಶ ಮಾತ್ರವಲ್ಲ ಅರಬ್ಬೀಯಾದ ಪರ್ಯಾಯ ದ್ವೀಪಗಳಲ್ಲಿ ಅತಿ ವಿಸ್ತಾರವಾದ ನಗರವೆನ್ನುವ ಹೆಗ್ಗಳಿಕೆ ಈ ಮಸ್ಕತ್ ಗೆ ಇದೆ. ಪೂರ್ವ ಪಾಶ್ಚಿಮಾತ್ಯ ರಾಷ್ಟ್ರಗಳ ವ್ಯಾಪಾರಕ್ಕೆ ಪ್ರಮುಖ ಬಂದರು ಕೇಂದ್ರ ಅನ್ನುವ ಹೆಗ್ಗಳಿಕೆ ಈ ಮಸ್ಕತ್ ಗಿದೆ.ಹಾಗಾಗಿಯೇ ಒಮಾನ್ ರಾಷ್ಟ್ರಕ್ಕೆ ಅನ್ಯ ರಾಷ್ಟ್ರಗಳ ಜೊತೆ ನಿಕಟವಾದ ವ್ಯಾಪಾರಿ ಸಂಬಂಧವೂ ಮೊದಲನಿಂದಲೂ ಇತ್ತು ಅನ್ನುವುದನ್ನು ನಾವು ಗಮನಿಸಬಹುದು.

ಬಹು ಹಿಂದೆ ಈ ಪ್ರದೇಶಗಳು ಪೇೂರ್ಚುಗಿಸ್ ಪಸಿ೯ಯಾನ್ ರಾಷ್ಟ್ರಗಳ ಅಧೀನವಾಗಿತ್ತು ಅನಂತರದಲ್ಲಿ ಬ್ರಿಟಿಷ್ ವಸಾಹತು ವ್ಯವಸ್ಥೆಗೂ ಒಳ ಪಟ್ಟಿತು. 1951ರಲ್ಲಿ ಬ್ರಿಟಿಷ ನಡುವಿನ ಒಪ್ಪಂದಲ್ಲಿ ಒಮಾನ್ ಸ್ವಾತಂತ್ರ್ಯ ಗಳಿಸಿತ್ತು. ಆದರೆ 1970ರ ನಂತರದಲ್ಲಿ ಮಸ್ಕತ್ ರಾಜಧಾನಿಯಾಗಿ ಗುರುತಿಸಿ ಅತೀ ಹೆಚ್ಚಿನ ಅಭಿವೃದ್ಧಿಯನ್ನು ಕಂಡಿದೆ ಅನ್ನುವುದು ಅಲ್ಲಿನ ಜನರ ಅಭಿಪ್ರಾಯ. ಪೇೂರ್ಚುಗಿಸ್ ಆಡಳಿತ ಕಾಲದಲ್ಲಿ ಅಲ್ಲಿನ ರಕ್ಷಣೆಗಾಗಿ ಕೇೂಟೆಯನ್ನು ನಿಮಿ೯ಸಲಾಗಿತ್ತು.ಅನಂತರದಲ್ಲಿ ಒಮಾನ್ ಸುಲ್ತಾನ್ ಆಡಳಿತದ ಕಾಲದಲ್ಲಿ ಇನ್ನಷ್ಟು ಮೆರುಗು ಈ ಕೇೂಟೆಗಳಿಗೆ ನೀಡಲಾಯಿತು..ಈ ಸಮುದ್ರ ಕಿನಾರೆಯ ಕೇೂಟೆ ನೇೂಡಲು ತುಂಬಾ ಪ್ರೇಕ್ಷಣೀಯ ಸ್ಥಳ..ಇದರಿಂದಾಗಿ ಮಸ್ಕತ್ ಗೆ ಸಮುದ್ರದ ಮೂಲಕ ಬರುವ ಯಾವುದೇ ಸಮಾಜ ಘಾತಕ ಜನ ವಸ್ತು ಪದಾರ್ಥಗಳನ್ನು ಪತ್ತೆ ಹಚ್ಚಲು ಸೂಕ್ತವಾದ ರಕ್ಷಣಾ ಸ್ಥಳವೂ ಹೌದು.

Advertisement

ಇದರ ಎದುರಿಗೆ ಕಾಣ ಬಹುದು ಅತೀ ವಿಸ್ತಾರವಾದ ಸಮುದ್ರ. ಅಲ್ಲಿಯೇ ಕಿಂಗ್ ಸುಲ್ತಾನರ ಮೂರು ಕಿಂಗ್ ಶಿಪ್ ಅವರ ಜಲವಿಹಾರಕ್ಕಾಗಿಯೇ ಸಿದ್ಧಗೊಳಿಸಿ ಇಟ್ಟಿದ್ದಾರೆ. ಇದರ ಪಕ್ಕಕ್ಕೆ ಎತ್ತರದಲ್ಲಿ ಸುಮಾರು ನೂರು ವರುಷಗಳ ಹಳೆಯದಾದ ವ್ಯಾಪಾರಿ ಮಾರುಕಟ್ಟೆ ಇದೆ. ಅತಿ ಹಳೆಯದಾದ ಶಾಪಿಂಗ್ ಸಂಕೀರ್ಣ. ಇದರ ತುತ್ತ ತುದಿಯಲ್ಲಿ ನಿಂತು ಸೆಕೆ ಕಾಲದಲ್ಲಿ ಸಮುದ್ರ ಕಡೆಯಿಂದ ಅತಿ ಸುಂದರವಾದ ವೀಕ್ಷಣಾ ಸ್ಥಳ ತಂಪಾಗಿಸುವ ಸಮುದ್ರದ ಗಾಳಿ ಸವಿಯ ಬಹುದು. ಇದರ ಪಕ್ಕಕ್ಕೆ ತಾಗಿಕೊಂಡೆ ಸುಮಾರು ನೂರು ವರುಷಗಳ ಹಳೆಯದಾದ ಅಂಗಡಿಗಳ ಸಂಕೀರ್ಣವಿದೆ (Mutrh Souq).. ಇದನ್ನು ಮಹಲ್ ಎಂದು ಕರೆಯುವಂತಿಲ್ಲ..ಇದೊಂದು ಸಂಪ್ರದಾಯಿಕ ಹಳೆಯ ಶೈಲಿಯ ವ್ಯಾಪಾರಿ ತಾಣ. ಒಳಗೆ ಕಸೂತಿ ತಯಾರಿ ವಸ್ತುಗಳು ಬಟ್ಟೆಗಳು ಒಮಾನ್ ರಾಷ್ಟ್ರದ ಅತಿ ಅಪರೂಪದ ಕರಕುಶಲ ವಸ್ತುಗಳು ಪ್ರದಶ೯ನ ಮಾರಾಟಕ್ಕೆ ಲಭ್ಯವಿದೆ.

ಮಸ್ಕತ್ ನಗರವನ್ನು ಅಲ್ಲಿನ ಸುಲ್ತಾನ್ ರಾಜರು ಯಾವ ರೀತಿಯಲ್ಲಿ ಕಟ್ಟಿದ್ದಾರೆ ಅಂದರೆ ಅಲ್ಲಿನ ಗುಡ್ಡಗಾಡು ಪರ್ವತ ಸಮುದ್ರ ಪರಿಸರಕ್ಕೆ ಒಪ್ಪುವಂತೆ ಅತ್ಯಂತ ಸಾಂಪ್ರದಾಯಿಕ ವಾಸ್ತು ವಿನ್ಯಾಸದಲ್ಲಿಯೇ ಅಭಿವೃದ್ಧಿ ಪಡಿಸಿದ್ದಾರೆ..ಅದೇ ಇದೇ ರಾಷ್ಟ್ರಕ್ಕೆ ಹತ್ತಿರವಿರುವ ಅಬುಧಾಬಿ ದುಬೈಯಲ್ಲಿನ ಕಟ್ಟಡಗಳನ್ನು ಮಹಲ್ ಗಳನ್ನು ಗಗನ ಚುಂಬಿಸುವ ಎತ್ತರಕ್ಕೆ ಏರಿಸಿದ್ದರೆ ಅದೇ ಮಸ್ಕಟ್ ಸುಲ್ತಾನ್ ರು ತಮ್ಮ ಭುಮಿಯ ಉದ್ದಗಲಕ್ಕೂ ತಾಗಿಕೊಂಡಿರುವಂತೆ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ… ಕಟ್ಟಡಗಳನ್ನು ಅತಿ ಎತ್ತರಕ್ಕೆ ಕೊಂಡು ಹೇೂಗಲೇ ಇಲ್ಲ.ಅಬುಧಾಬಿ ದುಬೈಯಲ್ಲಿನ ರಾಜ ಪ್ರಭುತ್ವ ಆಡಳಿತ ತಮ್ಮ ನಗರಗಳನ್ನು ಸಮುದ್ರದ ಮೇಲೆ ಕಟ್ಟುವ ಪ್ರಯತ್ನ ಮಾಡಿದ್ದರೆ ಅದೇ ಒಮಾನ್ ಸುಲ್ತಾನ್ ರು ತಮ್ಮ ರಾಜಧಾನಿ ಮಸ್ಕತ್ ಅನ್ನು ಅಲ್ಲಿನ ಗುಡ್ಡ ಬೆಟ್ಟಗಳನ್ನೆ ಅಗೆದು ಪುಡಿಮಾಡಿ ಕಟ್ಟಡ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಿರುವುದು ಅಲ್ಲಿನ ಅಭಿವೃದ್ಧಿ ಪಥದ ದೃಷ್ಟಿಕೇೂನ.

ಮಸ್ಕತ್ ಸೌಂದರ್ಯತೆ ಇರುವುದೇ ಅಲ್ಲಿನ ಮಣ್ಣು ಗುಡ್ಡೆಗಳ ಪರ್ವತ ಶ್ರೇಣಿ ಒಂದೆಡೆ ಆದರೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಬೇೂರ್ಗಗೆರೆದು ನಿಂತಿರುವ ಸಮುದ್ರದ ಅಲೆಗಳು. ಹಳೆಯ ಮಸ್ಕತ್ ಪ್ರದೇಶವಾಗಿ ಇಲ್ಲಿಯೇ ಹೆಚ್ಚಿನ ಅಭಿವೃದ್ಧಿಯ ಸೌಂದರ್ಯತೆ ನೆಲೆ ಕಂಡಿರುವುದು ಸುಲ್ತಾನ್ ರಾಜರ ಅರಮನೆಯ ಸುತ್ತ ಮುತ್ತ ಪ್ರದೇಶಗಳಲ್ಲಿ ಅನ್ನುವುದನ್ನು ಗಮನಿಸ ಬಹುದು. ಸುಲ್ತಾನರ ಅರಮನೆ, ರಾಜರ ಆಡಳಿತ ಸೌಧ, ಕಿಂಗ್ಸ್ ಹೊಟೇಲ್ ,ಓಪೇರಾ ರಾಯಲ್ ಹೌಸ್ ಗಳು ನೇೂಡಲು ಅತ್ಯಂತ ಖುಷಿ ನೀಡುವ ಪ್ರೇಕ್ಷಣೀಯ ಸ್ಥಳಗಳು..ಈ ಕುರಿತಾಗಿಯೇ ಪ್ರತ್ಯೇಕವಾಗಿ ದಾಖಲಿಸಬಹುದಾದಷ್ಟು ಮಾಹಿತಿ ನಮ್ಮ ಮುಂದಿದೆ.

ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next