Advertisement
ಒಮಾನ್ ಬಿಲ್ಲವಾಸ್ ಕೂಟದ ವತಿಯಿಂದ ಮಸ್ಕತ್‌ನ ರೂವಿ ಅಲ್ ಫಲಾಜ್ ಹೊಟೇಲ್ ಗ್ರ್ಯಾಂಡ್ ಸಭಾಂಗಣದಲ್ಲಿ ಎ. 19ರಂದು ಅಪರಾಹ್ನ 3.15ರಿಂದ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಕಾರಣಿಕದ ನಿತಿನ್ ತೆಂಕಕಾರಂದೂರು ವಿರಚಿತ, ಯೋಗೀಶ್ ಕುಮಾರ್ ಚಿಗುರುಪಾದೆ ಪದ್ಯ ರಚನೆಯ 225ನೇ ಪ್ರಯೋಗದ ಪ್ರದರ್ಶನ ನಡೆಯಲಿದೆ.
ಈಗಾಗಲೇ ವಿದೇಶದಲ್ಲಿ ಅನೇಕ ಯಕ್ಷಗಾನ ಪ್ರದರ್ಶನ ನೀಡಿದ್ದರೂ ಅದು ಬೇರೆ ಮೇಳಗಳ ಆಯ್ದ ಕಲಾವಿದರ ಒಗ್ಗೂಡುವಿಕೆಯೊಂದಿಗೆ ನೀಡಿರುವ ಪ್ರದರ್ಶನ. ಆದರೆ ಒಂದು ಮೇಳ ಪೂರ್ಣ ಪ್ರಮಾಣದಲ್ಲಿ ಈ ತನಕ ಪಾಲ್ಗೊಂಡಿಲ್ಲ. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಮಾರ್ಗದರ್ಶನದಲ್ಲಿ ಮೇಳ ಮೊದಲ ಬಾರಿಗೆ ಎಂಬಂತೆ ಪೂರ್ಣ ತಂಡವಾಗಿ ತೆರಳುತ್ತಿದೆ. ಊರಿನಲ್ಲಿ ಯಕ್ಷಗಾನ ಆಗುವ ರೀತಿಯಲ್ಲೇ ವಿದೇಶಿ ನೆಲದಲ್ಲಿ ತ್ರಿಕಾಲಪೂಜೆ, ಚೌಕಿ ಪೂಜೆ ಸಹಿತ ರಂಗಸ್ಥಳ ನಿರ್ಮಿಸಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಗಿರೀಶ್ ರೈ ಕಕ್ಕೆಪದವು ಮತ್ತು ನಿರಂಜನ ಪೂಜಾರಿ ಬಡಗಬೆಳ್ಳೂರು ಅವರ ಭಾಗವತಿಕೆ ಇರಲಿದೆ ಎಂದು ಪ್ರಶಾಂತ್ ಪೂಜಾರಿ ವಿವರಿಸಿದ್ದಾರೆ.