Advertisement

3 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಜಯ?

06:00 AM Aug 14, 2018 | Team Udayavani |

ಹೊಸದಿಲ್ಲಿ: ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆ ಚುನಾವಣೆ ವರ್ಷಾಂತ್ಯದಲ್ಲಿ ನಡೆಯಲಿದೆ. ಅದಕ್ಕೆ ಪೂರ್ವ ಭಾವಿಯಾಗಿ “ಎಬಿಪಿ ನ್ಯೂಸ್‌’ ಮೂರು ರಾಜ್ಯಗಳ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಅದರಲ್ಲಿ ಕಾಂಗ್ರೆಸ್‌ ಜಯಗಳಿಸಲಿದೆ ಎಂದು ಪ್ರಸ್ತಾಪಿಸಲಾಗಿದೆ. ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ ಕಾಂಗ್ರೆಸ್‌ 117, ಬಿಜೆಪಿ 106,  ಇತರರಿಗೆ 7 ಸ್ಥಾನ, ರಾಜಸ್ಥಾನದ 200 ಸ್ಥಾನಗಳ ಪೈಕಿ ಕಾಂ ಗ್ರೆಸ್‌ 130, ಬಿಜೆಪಿ 57, ಇತರರಿಗೆ 13, ಛತ್ತೀಸ್‌ಗಡದ 90 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ 54, ಬಿಜೆಪಿಗೆ 33, ಇತರರು 3 ಸ್ಥಾನಗಳಲ್ಲಿ ಜಯ ಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

Advertisement

ರಾಜಸ್ಥಾನದಲ್ಲಿ ಸಿಎಂ ಯಾರಾಗಬೇಕು ಎಂಬ ಪ್ರಶ್ನೆಗೆ, ಕಾಂಗ್ರೆಸ್‌ ನಾಯಕ ಅಶೋಕ್‌ ಗೆಹೊÉàಟ್‌ ಪರ ಶೇ.41ರಷ್ಟು ಮಂದಿ ಮತ ಹಾಕಿದ್ದಾರೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಯವರಿಗೆ ಶೇ.55, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಶೇ. 22ರಷ್ಟು ಮಂದಿ ಒಲವು ತೋರಿದ್ದಾರೆ. ಮೂರು ರಾಜ್ಯದ ವಿಧಾನಸಭೆಯ ಅವಧಿ ಕ್ರಮವಾಗಿ ಜ.5, 7, 20ರಂದು ಮುಕ್ತಾಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next