Advertisement
ಈ ಚಿತ್ರಕ್ಕಾಗಿ ಅರುಣ್ ಅವರು ನಾಗವಲ್ಲಿಯ ಆತ್ಮ ಇದೆಯಾ ಎಂದು ಸಾಕಷ್ಟು ರೀಸರ್ಚ್ ಮಾಡಿದ್ದಾರಂತೆ. ಅದಕ್ಕಾಗಿಯೇ ಅವರು ತಿರುವನಂತಪುರಕ್ಕೂ ಹೋಗಿ ಬಂದಿದ್ದಾರೆ. ನಾಗವಲ್ಲಿ ಇದ್ದ ಕೇರಳದ ಅನಂತ ಪದ್ಮನಾಭ ಅರಮನೆಗೆ ಭೇಟಿ ನೀಡಿದ್ದಲ್ಲದೇ ಅವಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರಂತೆ. ಅಲ್ಲಿ ಸುಮಾರು ಏಳು ದಿನಗಳ ಕಾಲ ಚಿತ್ರೀಕರಣ ಮಾಡಿರುವ ಅವರು, ಅಲ್ಲಿ ಅರ್ಚಕರಾಗಿರುವ ವರ್ಮ ಅವರ ಜೊತೆಗೂ ಸಾಕಷ್ಟು ಚರ್ಚೆ ಮಾಡಿ, ನಾಗವಲ್ಲಿಯ ಬಗ್ಗೆ ಹಲವು ಮಾಹಿತಿಗಳನ್ನು ಅವರು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ಕೇರಳ ಸರ್ಕಾರದ ಪ್ರಾಚ್ಯಶಾಸ್ತ್ರದ ಪುಸ್ತಕವನ್ನು ಸಹ ತಿರುವಿ ಹಾಕಿ, ಸಾಕಷ್ಟು ಮಾಹಿತಿಯನ್ನು ಕಲೆಹಾಕಿ, ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರಂತೆ.
ನೋಡಬೇಕು. ಇನ್ನು ಇದಕ್ಕೂ ಮುನ್ನ ಚಿತ್ರದ ಹೆಸರು “ಆಪ್ತಮಿತ್ರ 2′ ಎನ್ನುವಂತೆ ಡಿಸೈನ್ ಮಾಡಿಸಲಾಗಿತ್ತು. ರಮೇಶ್ ಯಾದವ್ ಸಹ “ಆಪ್ತಮಿತ್ರರು 2′ ಎಂಬ ಸಿನಿಮಾ ಮಾಡುತ್ತಿರುವುದರಿಂದ, ಚಿತ್ರದ ಹೆಸರನ್ನು “ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಎಂದು ಅರುಣ್ ಬದಲಾಯಿಸಿದ್ದಾರೆ. ಈ ಚಿತ್ರದಲ್ಲಿ ವಿಕ್ರಂ ಕಾರ್ತಿಕ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರಕ್ಕೆ ಎರಡು ಶೇಡ್‌ಗಳಿವೆಯಂತೆ. “ಮೊದಲಾರ್ಧ
ನಾಗವಲ್ಲಿಯ ಆತ್ಮದ ಹುಡುಕಾಟದಲ್ಲಿರುವ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಇನ್ನೊಂದು ಶೇಡ್ ಏನು ಎಂಬುದನ್ನು
ಚಿತ್ರದಲ್ಲೇ ನೋಡಬೇಕು’ ಎಂದರು. ನಾಯಕಿ ನಟಿಸಿರುವ ವೈಷ್ಣವಿ ಚಂದ್ರನ್, ಈ ಚಿತ್ರದಲ್ಲಿ ಮನಶಾಸ್ತ್ರ ವಿದ್ಯಾರ್ಥಿಯಾಗಿ
ಕಾಣಿಸಿಕೊಂಡಿದ್ದಾರೆ. ಅದಲ್ಲದೆ ಫ್ಲಾಶ್‌ಬ್ಯಾಕ್‌ನಲ್ಲಿ ನೃತ್ಯಗಾತಿಯ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರಂತೆ. ಅದೇ ಕಾರಣಕ್ಕೆ,
ಅವರು ಒಂದಿಷ್ಟು ತೂಕ ಹೆಚ್ಚಿಸಿಕೊಂಡು, ಆ ನಂತರ ತೂಕ ಇಳಿಸಿಕೊಂಡರಂತೆ. ಅವರಿಬ್ಬರಲ್ಲದೆ ಈ ಚಿತ್ರದ ಮೂಲಕ ಯುವನ್,
ರಾಕಿ, ಅನಿಲ್ ಮುಂತಾದವರನ್ನು ಪರಿಚಯಿಸಲಾಗುತ್ತಿದೆ. ಈ ಚಿತ್ರಕ್ಕೆ ಶ್ಯಾಮ್ ಎನ್ನುವವರು ಛಾಯಾಗ್ರಹಣ ಮಾಡಿದ್ದು, ತಿರುವನಂತಪುರದ ಅರಮನೆಯಲ್ಲಿ ಚಿತ್ರೀಕರಣ ಮಾಡಿದ್ದು ಅದ್ಭುತ ಅನುಭವ ಎಂದು ಹೇಳಿಕೊಂಡರು.