Advertisement

ಉಡುಪಿಯಿಂದ 600 ಮಂದಿ ವಲಸೆ ಕಾರ್ಮಿಕರು

11:36 PM May 15, 2020 | Sriram |

ಉಡುಪಿ: ಮಂಗಳೂರಿನಿಂದ ಬಿಹಾರಕ್ಕೆ ಶುಕ್ರವಾರ ಸಂಜೆ ತೆರಳಿದ ರೈಲಿಗೆ ಉಡುಪಿ ಜಿಲ್ಲೆಯಲ್ಲಿ ಉಳಿದಿದ್ದ 600 ಮಂದಿಯನ್ನು 15 ಕೆಎಸ್ಸಾರ್ಟಿಸಿ ಬಸ್‌ ಮೂಲಕ ಶುಕ್ರವಾರ ಮಧ್ಯಾಹ್ನ ಕಳುಹಿಸಲಾಯಿತು.

Advertisement

ಬಿಹಾರಕ್ಕೆ ಮಂಗಳೂರಿನಿಂದ ರೈಲು ಮೂಲಕ ಕಳುಹಿಸಲಾಯಿತು. ಪರ್ಕಳ ಉಡುಪಿ ಮೊದಲಾದ ಭಾಗದಲ್ಲಿ ಉಳಿದಿದ್ದ ಮಂದಿಯನ್ನು ಎಂಜಿಎಂ ಕಾಲೇಜ್‌ ಮೈದಾನದಿಂದ ಶುಕ್ರವಾರ ಮಧ್ಯಾಹ್ನ 11 ಬಸ್‌ನಲ್ಲಿ ಒಂದು ಬಸ್‌ನಲ್ಲಿ 40 ಮಂದಿಯಂತೆ 440 ಮಂದಿ ಮತ್ತು ಕಾರ್ಕಳದಿಂದ 4 ಬಸ್‌ನಲ್ಲಿ ಒಂದು ಬಸ್‌ಗೆ 40 ಮಂದಿಯಂತೆ 160 ಮಂದಿ ಒಟ್ಟಿಗೆ ಜಿಲ್ಲೆಯಿಂದ 600 ಮಂದಿ ವಲಸೆ ಕಾರ್ಮಿಕರನ್ನು ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಬಿಡಲಾಯಿತು.

ಉಡುಪಿ ಎಂಜಿಎಂ ಕಾಲೇಜಿನ ಮೈದಾ ನದಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಕಡಿಯಾಳಿ ಗಣೇಶೋತ್ಸವ ಸಮಿತಿಯಿಂದ ಮಾಡಲಾಯಿತು.

ಶಾಸಕ ಕೆ.ರಘುಪತಿ ಭಟ್‌, ನೋಡಲ್‌ ಅಧಿಕಾರಿ ದಯಾನಂದ, ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್, ನಗರಸಭಾ ಸದಸ್ಯ ಗಿರೀಶ್‌ ಎಂ. ಅಂಚನ್‌, ಸಮಿತಿ ಪದಾಧಿಕಾರಿಗಳಾದ ಕೆ.ರಾಘವೇಂದ್ರ ಕಿಣಿ, ಮಂಜುನಾಥ ಹೆಬ್ಟಾರ್‌, ವಿನಾಯಕ ಶೇಟ್‌, ವಿಪುಲ್‌ ಪ್ರಭು, ಶರಣ್‌ ಶೆಟ್ಟಿ, ಗಣೇಶ ಆಚಾರ್ಯ, ಸದ್ದಾಮ್‌, ಶಶಾಂಕ ನಾಯಕ್‌, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

ತಪಾಸಣೆ
ಮುನ್ನೆಚ್ಚರಿಕ ಕ್ರಮವಾಗಿ ಥರ್ಮಲ್‌ ಮೀಟರ್‌ ಸ್ಕ್ರೀನಿಂಗ್‌ ಮಾಡುವ ಮೂಲಕ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ, ಸ್ಯಾನಿಟೈಸರ್‌, ಮಾಸ್ಕ್ ನೀಡಲಾಯಿತು. ಜತೆಗೆ ಸಾಮಾಜಿಕ ಅಂತರ ಕಾಯ್ದಿಕೊಂಡು ಪ್ರಯಾಣಿಕರು ಸರತಿಯ ಸಾಲಿನಲ್ಲಿ ಬಸ್‌ ಹತ್ತುವ ದೃಶ್ಯ ಕಂಡು ಬಂತು. ಕೆಲವೆಡೆ ಗುಂಪು ಸೇರಿದಾಗ ಪೊಲೀಸ್‌ ತಂಡ ಸಾಮಾಜಿಕ ಅಂತರ ನಿಯಂತ್ರಿಸುವಲ್ಲಿ ಸಹಕರಿಸಿತು.

Advertisement

15 ಬಸ್‌
ಶುಕ್ರವಾರ ಉಡುಪಿ ಕಾರ್ಕಳದಿಂದ 15 ಬಸ್‌ಗಳು ಸುಮಾರು 600ಮಂದಿ ಬಿಹಾರಿ ರಾಜ್ಯದ ವಲಸೆ ಕಾರ್ಮಿಕರನ್ನು ಮಂಗಳೂರಿನ ಕಂಕನಾಡಿ ಜಂಕ್ಷನ್‌ ರೈಲ್ವೆ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಎಲ್ಲ ತರಹದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಮಾಜಿಕ ಅಂತರ ಮೊದಲಾದ ನಿಯಮಗಳನ್ನು ಪಾಲಿಸಿ ಜನರನ್ನು ಬಸ್‌ನಲ್ಲಿ ಕರೆದೊಯ್ಯಲಾಗಿದೆ.
-ಉದಯಕುಮಾರ ಶೆಟ್ಟಿ, ಉಡುಪಿ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್‌

Advertisement

Udayavani is now on Telegram. Click here to join our channel and stay updated with the latest news.

Next