Advertisement

ಭಾರತದಿಂದ ಶೇ.26ರಷ್ಟು ಕೃಷಿ ಉತ್ಪನ್ನ ರಫ್ತು

06:38 PM Mar 31, 2022 | Team Udayavani |

ಮಂಡ್ಯ: ಭಾರತ ಶೇ.26ರಷ್ಟು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆಯಾದರೂ ಕರ್ನಾಟಕದಲ್ಲಿ ಶೇ.5ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕೃಷಿ ಉತ್ಪನ್ನ ರಫ್ತು ಮಾಡಲಾಗುತ್ತಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಎಸ್‌.ರಾಜೇಂದ್ರಪ್ರಸಾದ್‌ ತಿಳಿಸಿದರು.

Advertisement

ತಾಲೂಕಿನ ವಿ.ಸಿ.ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ, ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ವತಿಯಿಂದ ನಡೆದಕೃಷಿಯಂತ್ರೋಪಕರಣಗಳಮೇಳ ಉದ್ಘಾಟಿಸಿ ಮಾತನಾಡಿದರು.ಕೃಷಿ ಉತ್ಪನ್ನಗಳ ರಫ್ತಿಗೆ ಹೆಚ್ಚಿನ ಅವಕಾಶ ಇದ್ದರೂ ಅದನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂದರು.

ಗುಣಮಟ್ಟದ ಬಗ್ಗೆ ಚಿಂತನೆ ನಡೆಸಿ: ಮಂಡ್ಯ ಜಿಲ್ಲೆ ಯಲ್ಲಿ ಬೆಲ್ಲ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ ಗುಣಮಟ್ಟದ ಬೆಲ್ಲ ತಯಾರಿಕೆ ಮಾಡಿ ರಫ್ತು ಮಾಡಲಾಗುತ್ತಿಲ್ಲ. ನಾವು ತಾಂತ್ರಿಕತೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಬೇರೆ ಬೇರೆ ಅವಕಾಶ ಗಳಿದ್ದರೂ ಹೆಚ್ಚಿನ ರಫ್ತು ಮಾಡಲಾಗುತ್ತಿಲ್ಲ. ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು. ಗುಣಮಟ್ಟಕ್ಕೆ ಹೇಗೆ ಆದ್ಯತೆ ನೀಡಬೇಕು ಎಂಬುದರ ಬಗ್ಗೆ ಚಿಂತಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಯಂತ್ರಗಳ ಬಳಕೆ ಇಲ್ಲ: ಕೃಷಿಯಲ್ಲಿ ಹೆಚ್ಚಿನ ಕಾರ್ಮಿ ಕರ ಬಳಕೆಯಿಂದಾಗಿ ಹೆಚ್ಚು ನಷ್ಟ ಅನುಭವಿಸ ಬೇಕಾಗುತ್ತದೆ.ರೈತರಆದಾಯದ್ವಿಗುಣಗೊಳಿಸಬೇಕಾ ದರೆ ಹೆಚ್ಚಿನ ಪ್ರಮಾಣದಲ್ಲಿ ಯಂತ್ರಗಳ ಬಳಕೆ ಆಗಬೇಕಾಗಿದೆ. ಉತ್ತರ ಕರ್ನಾಟಕ ಭಾಗಗಳಲ್ಲಿ ಕಬ್ಬಿನ ಬೆಳೆಗೆ ಹೆಚ್ಚಾಗಿ ಯಂತ್ರ ಬಳಕೆ ಮಾಡಲಾಗುತ್ತಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಯಂತ್ರಗಳ ಬಳಕೆ ಇಲ್ಲ ಎಂಬ ಆರೋಪಗಳೂ ಇವೆ ಎಂದರು.

ಸಲಹೆ ಇದ್ದರೆ ಕೊಡಿ: ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಹಿಡುವಳಿದಾರರಿದ್ದಾರೆ. ಆದರೆ, ಮಂಡ್ಯ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಶೇ.84ರಷ್ಟಿದ್ದಾರೆ. ಇದ ರಿಂದಾಗಿ ಯಂತ್ರಗಳ ಬಳಕೆ ಕಷ್ಟವಾಗಿದೆ. ಇದನ್ನು ಗಮನಿಸಿದ ಕೃಷಿ ವಿದ್ಯಾಲಯಗಳು ಸಣ್ಣ ಸಣ್ಣ ರೈತ ರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯಂತ್ರಗಳ ತಯಾರಿಕೆಗೆ ಮುಂದಾಗಿದೆ. ಈ ಯಂತ್ರಗಳನ್ನು ಉಪ ಯೋಗಿಸುವ ರೈತರು ತಮಗೆ ಯಾವ ರೀತಿಯ ಯಂತ್ರಗಳ ಅಗತ್ಯತೆ ಇದೆ ಎಂಬುದರ ಬಗ್ಗೆಯೂ ಸಲಹೆ ನೀಡಿದ್ದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Advertisement

ಸರ್ಕಾರದಿಂದಲೂ ಯೋಜನೆ: ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರವೂ ಯೋಜನೆ ರೂಪಿಸಿದೆ. ಯಾಂತ್ರೀಕರಣಕ್ಕೆ ಒಳಪಡಿಸುವುದು, ಸಂಸ್ಕ ರಣೆ ಮತ್ತು ಪ್ಯಾಕಿಂಗ್‌ ಎಲ್ಲವೂ ಯಾಂತ್ರೀಕರಣ ವಾಗಬೇಕಿದೆ. ಇದರೊಂದಿಗೆ ಸ್ಥಳೀಯ ಮಾರುಕಟ್ಟೆ ಗಷ್ಟೇಅಲ್ಲದೆ, ರಾಜ್ಯ, ರಾಷ್ಟ್ರಹಾಗೂಅಂತಾರಾಷ್ಟ್ರೀಯ ಮಟ್ಟದಲ್ಲೂ ಸೂಕ್ತ ಮಾರುಕಟ್ಟೆ ಒದಗಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ವೈ.ಜಿ. ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾ ನಿರ್ದೇಶಕ ಡಾ.ಎನ್‌.ದೇವಕುಮಾರ್‌, ಐಸಿಎಆರ್‌ ನಿರ್ದೇಶಕ ಡಾ.ಬಿ.ಎನ್‌.ಎಸ್‌.ಮೂರ್ತಿ, ಕೃಷಿ ಮಹಾವಿದ್ಯಾಲಯದಡಾ.ಎಸ್‌.ಎಸ್‌.ಪ್ರಕಾಶ್‌,ಡಾ.ಕೆ.ವಿ.ಪ್ರಕಾಶ್‌, ಡಾ.ಎಸ್‌ಎಸ್‌. ಓಂಕಾರ್‌, ಡಾ.ಎಂ.ಎಸ್‌.ಶ್ರೀದೇವಿ, ಡಾ.ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next