ಲಾಂಗ್‌ಯಾನ್: ಅಂದುಕೊಂಡದ್ದನ್ನು ಸಾಧಿಸುವುದರಲ್ಲಿ ಚೀನೀಯರದ್ದು ಎತ್ತಿದಕೈ. ಅದರಲ್ಲೂ ತಂತ್ರಜ್ಞಾನ, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಮಾನವ ಸಂಪನ್ಮೂಲವನ್ನು ಬಳಸಿಕೊಂಡಿರುವ ರೀತಿ ಅಚ್ಚರಿ ಮೂಡಿ ಸು ವಂಥದ್ದು. ಇದೀಗ ಇಂಥದ್ದೇ ಸಾಧನೆ ಯೊಂ ದನ್ನು ಚೀನ ಮಾಡಿದೆ. 1500 ಚೀನಿಗರು ಎಂಟು ಗಂಟೆಗಳ ಅವಧಿಯಲ್ಲಿ ರೈಲ್ವೇ ನಿಲ್ದಾಣವನ್ನೇ ನಿರ್ಮಿಸಿ ವಿಶ್ವದ ಗಮನ ಸೆಳೆದಿದ್ದಾರೆ.
“ಹೈ ಸ್ಪೀಡ್ ರೈಲ್ ಲಿಂಕ್’ ಯೋಜನೆಯ ಅಡಿಯಲ್ಲಿ ಈ ಕಾಮಗಾರಿ ನಡೆದಿದೆ. ಫುಜಿಯಾನ್ ಪ್ರಾಂತ್ಯದ ಲಾಂಗ್‌ಯಾನ್‌ನಲ್ಲಿ ಈ ರೈಲ್ವೇ ನಿಲ್ದಾಣ ನಿರ್ಮಾಣಗೊಂಡಿದೆ. ಗಂಟೆಗೆ 200 ಕಿಲೋಮೀಟರ್ ವೇಗದಲ್ಲಿ ಓಡುವ ರೈಲು ಮಾರ್ಗ ನಿರ್ಮಾಣವೂ ಇದೇ ಯೋಜನೆಯ ಅಡಿಯಲ್ಲಿಯೇ ನಡೆಯುತ್ತಿದೆ. ಜನವರಿ 19ರಂದು ರಾತ್ರಿ ಕಾಮಗಾರಿ ಆರಂಭಿಸಿ ಬೆಳಕು ಮೂಡುವ ಹೊತ್ತಲ್ಲಿ ರೈಲ್ವೇ ನಿಲ್ದಾಣ ತಲೆ ಎತ್ತಿನಿಂತಿತ್ತು. ಎಂದಿಗಿಂತ 7 ರೈಲುಗಳು ಹೆಚ್ಚುವರಿಯಾಗಿ ಓಡಾಡಲು ಹೊಸ ಮಾರ್ಗ ಸೃಷ್ಟಿಯಾಗಿತ್ತು.
ಯಾಕೆ ಪಟಾಪಟ್ ಕಾಮಗಾರಿ?: ಇಷ್ಟು ಕಡೆಮೆ ಅವಧಿಯಲ್ಲಿ ಕಾಮಗಾರಿ ಮುಗಿಸಲೂ ಕಾರಣವಿದೆ. ಈ ನಿಲ್ದಾಣದ ಮೂಲಕ ಹಾದುಹೋಗುವ ಮಾರ್ಗ ಬಹಳ ಮಹತ್ವದ್ದಾಗಿದೆ. ಅಲ್ಲದೆ ಚೀನಾದ ಬ್ಯುಸಿ ರೈಲ್ವೆ ಮಾರ್ಗಗಳಲ್ಲಿ ಇದೂ ಒಂದಾಗಿತ್ತು. ಈಗ ಇನ್ನೊಂದು ಮಾರ್ಗ ಸೇರ್ಪಡೆಯಾದ ಹಿನ್ನೆಲೆಯಲ್ಲಿ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಹೆಚ್ಚು ಕಡಿಮೆ ಜಂಕ್ಷನ್ ಮಾದರಿಯಲ್ಲೇ ರೈಲ್ವೇ ನಿಲ್ದಾಣ ನಿರ್ಮಾಣಗೊಂಡಿದೆ.
“ಹೈ ಸ್ಪೀಡ್ ರೈಲ್ ಲಿಂಕ್’ ಯೋಜನೆಯ ಅಡಿಯಲ್ಲಿ ನಡೆದ ಕಾಮಗಾರಿ
ಜ.19ರಂದು ರಾತ್ರಿ ಆರಂಭ ಆಗಿದ್ದ ಕಾಮಗಾರಿ ಬೆಳಕು ಮೂಡುವ ಮೊದಲೇ ಪೂರ್ಣ