Advertisement
ಫೆ. 14ರಂದು ನೆರೂಲ್ ಶ್ರೀ ಶನೀಶ್ವರ ಮಂದಿರದಲ್ಲಿ ಮಂದಿರದ ವಿಶ್ವಸ್ಥ ಮಂಡಳಿ ಯವರು ಆಯೋಜಿಸಿದ್ದ ಅಭಿನಂದನ ಸಮಾ ರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಹಿಂತಚಿಂತಕರು, ಸಮಾಜ ಸೇವಕರಾದ ಸಂತೋಷ್ ಡಿ. ಶೆಟ್ಟಿ ಹಾಗೂ ಮಂದಿರದ ವಿಶ್ವಸ್ಥ ಮಂಡಳಿಯವರ, ಭಕ್ತರ ಸಹಕಾರದಿಂದ ನಾನು ಧಾರ್ಮಿಕ, ಸಾಮಾಜಿಕ ಸೇವೆಯನ್ನು ಮಾಡಲು ಸಾಧ್ಯ ವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ನನ್ನ 75ನೇ ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚ ರಿಸಿ ನನಗೆ ಆಶೀರ್ವಾದವನ್ನು ಮಾಡಿದ್ದೀರಿ. ನಿಮಗೆಲ್ಲ ಶ್ರೀ ಶನೀಶ್ವರ ದೇವರು ಹಾಗೂ ಪರಿವಾರ ದೇವರು ಸನ್ಮಂಗಲವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
Related Articles
Advertisement
ಉದ್ಯಮಿ, ಸಮಾಜ ಸೇವಕ ಸುಪ್ರಿ ಹೆರಿಟೇಜ್‌ನ ಶಿವರಾಮ ಜಿ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಹೆಗ್ಡೆ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ಶ್ರೀ ಶನೀಶ್ವರ ಮಂದಿರದ ಜತೆ ಕೋಶಾಧಿಕಾರಿ ಅದ್ಯಪಾಡಿ ಗುತ್ತು ಕರುಣಾಕರ ಎಸ್. ಆಳ್ವ, ಸ್ಥಳೀಯ ನಗರ ಸೇವಕಿ ಮೀರಾ ಪಾಟೀಲ್, ರಮೇಶ್ ಪೂಜಾರಿ ಅವರ ಹಿರಿಯ ಸಹೋದರ ಜೆ. ಎಂ. ಕೋಟ್ಯಾನ್, ರಮೇಶ್ ಪೂಜಾರಿ ಅವರ ಮೊಮ್ಮಗಳು ನೈಶಾ ಎನ್. ಪೂಜಾರಿ ಅವರು ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭ ರಮೇಶ್ ಪೂಜಾರಿ ಅವರನ್ನು ಶ್ರೀ ಶನೀಶ್ವರ ಮಂದಿರದ ವಿಶ್ವಸ್ಥ ಮಂಡಳಿಯ ಪರವಾಗಿ ಬಂಗಾರದ ಬಳೆ ತೊಡಿಸಿ, ಶಾಲು ಹೊದೆಸಿ, ಸಮ್ಮಾನ ಪತ್ರವನ್ನಿತ್ತು
ಸಮ್ಮಾನಿಸಲಾಯಿತು. ಶ್ರೀ ಅಯ್ಯಪ್ಪ ಭಕ್ತ ವೃಂದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಳ್ಳಿಯ ಕವಚ ಹೊದಿಕೆಯ ಊರುಗೋಲು ನೀಡಿ ಶುಭ ಹಾರೈಸಿದರು. ರಂಗಭೂಮಿ ಫೈನ್ ಆರ್ಟ್ಸ್ ನವಿಮುಂಬಯಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ, ನೆರೂಲ್ ಶ್ರೀ ಅಯ್ಯಪ್ಪ ಕ್ಷೇತ್ರ, ಶ್ರೀ ಬಾಲಾಜಿ ಮಂದಿರ ನೆರೂಲ್, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ, ಕನ್ನಡ ಸಂಘ ನವಿಮುಂಬಯಿ, ಹೆಗ್ಗಡೆ ಸೇವಾ ಸಂಘ ಮುಂಬಯಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿ, ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸಮಿತಿ, ಸದ್ಗುರು ಶ್ರೀ ನಿತ್ಯಾನಂದ ಸೇವಾ ಸಮಿತಿ ಸಿಬಿಡಿ ಬೇಲಾಪುರ, ಕರ್ನಾಟಕ ಸಂಘ ಖಾರ್‌ಘರ್, ಕರ್ನಾಟಕ ಸಂಘ ಪನ್ವೇಲ್, ಅರ್ಚಕ ವೃಂದ ಶ್ರೀ ಶನೀಶ್ವರ ಮಂದಿರ ನೆರೂಲ್ ಹೀಗೆ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಮೇಶ್ ಪೂಜಾರಿ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ನೆರೂಲ್ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಗೌರವಾಧ್ಯಕ್ಷ ರವಿ ಆರ್. ಶೆಟ್ಟಿ, ಮಾಜಿ ಅಧ್ಯಕ್ಷ ಸಂಜೀವ ಎನ್. ಶೆಟ್ಟಿ, ಪನ್ವೇಲ್ ಮನಪಾದ ಸ್ಥಾಯೀ ಸಮಿತಿಯ ಅಧ್ಯಕ್ಷ ಸುರೇಶ್ ಜಿ. ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್, ಸುಪ್ರೀಂ ಹೆರಿಟೇಜ್ ಶಿವರಾಮ್ ಜಿ. ಶೆಟ್ಟಿ, ಸದ್ಗುರು ಶ್ರೀ ನಿತ್ಯಾನಂದ ಸೇವಾ ಸಮಿತಿ ಸಿಬಿಡಿ ಭಾಸ್ಕರ್ ಶೆಟ್ಟಿ, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಶಂಕರ್ ಹೆಗ್ಡೆ, ಸ್ಥಳೀಯ ನಗರ ಸೇವಕಿ ಮೀರಾ ಪಾಟೀಲ್, ಹಿರಿಯ ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ ಅಧ್ಯಕ್ಷ ಹರೀಶ್
ಶೆಟ್ಟಿ ಪಡುಬಿದ್ರೆ, ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ಮಹಾರಾಷ್ಟ್ರ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ಜಗನ್ನಾಥ್ ಕೋಟ್ಯಾನ್, ಕೆ. ಕೆ. ಶೆಟ್ಟಿ, ಶ್ರೀ ಬಾಲಾಜಿ ಮಂದಿರ ಹರಿಶ್ಚಂದ್ರ ಕಾಳೆ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಶನೀಶ್ವರ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ ಸಮ್ಮಾನ ಪತ್ರ ವಾಚಿಸಿದರು. ಮಂದಿರದ ವಿಶ್ವಸ್ಥ ಅನಿಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ವಿಶ್ವಸ್ಥರಾದ ಪ್ರಭಾಕರ ಹೆಗ್ಡೆ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಶ್ರೀ ಶನೀಶ್ವರ ಮಂದಿರದ ಅಭಿವೃದ್ಧಿಯಲ್ಲಿ ರಮೇಶ್ ಪೂಜಾರಿ ಅವರ ಶ್ರಮ ಅಪಾರವಿದೆ. ಅವರು ಅಂದು ಹುಟ್ಟುಹಾಕಿದ ಸಮಿತಿ ಈಗ ಹೆಮ್ಮರವಾಗಿ ಬೆಳೆದು ಅದರಿಂದ ಕ್ಷೇತ್ರ ನಿರ್ಮಾಣವಾಗಿ ಅದು ಭಕ್ತರ ಪಾಲಿಗೆ ನೆಮ್ಮದಿಯ ತಾಣವಾಗಿ ಬೆಳಗಿದೆ. ನವಿಮುಂಬಯಿ ಪರಿಸರದ ಜನತೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವಲ್ಲಿ ರಮೇಶ್ ಪೂಜಾರಿ ಅವರ ಪಾತ್ರ ಮಹತ್ತರವಾಗಿದೆ. ಇಂದು ರಮೇಶ್ ಪೂಜಾರಿ ಅವರಿಗೆ ಸಂದಿರುವುದು ಅಭಿನಂದನೆಯಲ್ಲ; ಅದು ಭಕ್ತರಿಂದ ಅವರಿಗೆ ಅರ್ಪಣೆಯಾದ ಗುರುದಕ್ಷಿಣೆ.–ಸಂತೋಷ್ ಜಿ. ಶೆಟ್ಟಿ, ಕಾರ್ಯಾಧ್ಯಕ್ಷ, ಶ್ರೀ ಶನೀಶ್ವರ ಮಂದಿರ, ನೆರೂಲ್
ಕಳೆದ 29 ವರ್ಷಗಳಿಂದ ರಮೇಶ್ ಪೂಜಾರಿ ಅವರು ಸಾಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಅವರು ಒಳ್ಳೆಯ ಗುಣ, ವಿಚಾರ, ಶಿಸ್ತನ್ನು ಮೈಗೂಡಿಸಿಕೊಂಡ ವ್ಯಕ್ತಿ. ಯಾವುದೇ ಸಂಸ್ಥೆಯ ಮುಖಂಡ ಸನ್ನಡತೆಯಲ್ಲಿದ್ದರೆ ಅಂತಹ ಸಂಸ್ಥೆ ಏಳ್ಗೆಯಾಗಲು ಸಾಧ್ಯ. ಆಡಂಬರವಿಲ್ಲದ ವ್ಯಕ್ತಿತ್ವದೊಂದಿಗೆ ಎಲ್ಲರೊಂದಿಗೆ ಬೆರೆತು ಬಾಳಿ ಸಂತೋಷ್ ಶೆಟ್ಟಿ ಅವರ ನೇತೃತ್ವದ ತಂಡಕ್ಕೆ ಬೆಂಬಲವನ್ನು ನೀಡಿ ಶನೀಶ್ವರ ಮಂದಿರವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ರಮೇಶ್ ಪೂಜಾರಿ ಅವರು ಶ್ರಮಿಸುತ್ತಿದ್ದಾರೆ. ಉತ್ತಮ ವ್ಯಕ್ತಿತ್ವವುಳ್ಳವರ ಜತೆ ಸೇರಿದರೆ ನಾವೂ ಉತ್ತಮರಾಗುತ್ತೇವೆ.–ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಅಧ್ಯಕ್ಷ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರ