Advertisement
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಬಂಟ್ವಾಳದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಭಾಗವಹಿಸಿದರು.ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲೂಕಿನ ವಿವಿಧ ಹೊಳೆಗಳಿಗೆ ಜಾಕ್‌ವೆಲ್ ನಿರ್ಮಿಸುವ ಮೂಲಕ ಆಯಾ ಊರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ, ಪ್ರಮುಖವಾಗಿ ರಸ್ತೆ, ಸೇತುವೆ ನಿರ್ಮಾಣ, ಮೂಲಸೌಕರ್ಯ ಕಲ್ಪಿಸುವುದು, ಸುಳ್ಯ ನಗರವನ್ನು ದಟ್ಟಣೆಮುಕ್ತ ಮಾಡಲು ಉಬರಡ್ಕ ಮೂಲಕ ಬೈಪಾಸ್ ಕಲ್ಪಿಸುವ ಬಗ್ಗೆ ತಮ್ಮ ಯೋಚನೆಗಳನ್ನು ಅವರು ಉದಯವಾಣಿ ಜತೆ ಹಂಚಿಕೊಂಡರು.
ರಾಜೇಶ್ ನಾೖಕ್ ಉಳಿಪ್ಪಾಡಿ ಮಾತನಾಡಿ, ಕ್ಷೇತ್ರದಲ್ಲಿ ಮುಖ್ಯವಾಗಿ ಮೂಲಸೌಕರ್ಯ, ಕುಡಿಯುವ ನೀರು, ಪ್ರವಾಸೋದ್ಯಮ, ಕೃಷಿಯನ್ನು ಅಭಿವೃದ್ಧಿ ಪಡಿಸಲು ತಮ್ಮಲ್ಲಿರುವ ಯೋಚನೆಗಳನ್ನು ತೆರೆದಿಟ್ಟರು.
ಬಂಟ್ವಾಳದ ಜಕ್ರಿಬೆಟ್ಟು ಅಣೆಕಟ್ಟು ಪೂರ್ಣಗೊಳ್ಳುತ್ತಿದ್ದು, ಅದರಿಂದ ಬಂಟ್ವಾಳ ಹಾಗೂ ಮಂಗಳೂರಿನ ಕುಡಿಯುವ ನೀರಿನ ಬೇಡಿಕೆ ಪೂರೈಕೆಗೆ ಮತ್ತಷ್ಟು ಬಲ ಸಿಗಲಿರುವ ಸಾಧ್ಯತೆಗಳನ್ನು ತಿಳಿಸಿದ ಅವರು, ಬಂಟ್ವಾಳ, ಬಿ.ಸಿ ರೋಡ್ ಪಟ್ಟಣಗಳ ಅಭಿವೃದ್ಧಿಗೆ ಯೋಜನೆ ರೂಪಿಸುವ ಬಗ್ಗೆ, ಕಾರಿಂಜ, ನರಹರಿ ಪರ್ವತ, ಪೊಳಲಿ ಕ್ಷೇತ್ರಗಳು ತಮ್ಮ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅವುಗಳನ್ನು ಸೇರಿಸಿಕೊಂಡು “ಟೆಂಪಲ್ ಟೂರಿಸಂ’ ಯೋಜನೆ ಹಮ್ಮಿಕೊಂಡಿರುವುದಾಗಿ ವಿವರಿಸಿದರು.