ಹೊಸದಿಲ್ಲಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಪ್ರಕಟ ಗೊಂಡ ಭಾರತ ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮುಖ್ಯವಾಗಿ, ಜಿಂಬಾಬ್ವೆ ಪ್ರವಾಸದಲ್ಲಿ ಮಿಂಚಿದ ಅಭಿಷೇಕ್ ಶರ್ಮ ಮತ್ತು ಋತುರಾಜ್ ಅವರನ್ನು ಕೈಬಿಟ್ಟು, ಫಾರ್ಮ್ನಲ್ಲಿಲ್ಲದ ರಿಯಾನ್ ಪರಾಗ್ ಅವರನ್ನು ಸೇರಿಸಿಕೊಂಡದ್ದು ಚರ್ಚೆಗೆ ಕಾರಣವಾಗಿದೆ. ಹಾಗೆಯೇ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಟಿ20ಗೆ ಸೀಮಿತಗೊ ಳಿಸಿ ಏಕದಿನ ಸರಣಿಯಿಂದ ಹೊರಗುಳಿ ಸಿದ್ದು ಕೂಡ ಅಚ್ಚರಿ ಮೂಡಿಸಿದೆ.
ಶಶಿ ತರೂರ್ ಆಕ್ರೋಶ
ಅಭಿಷೇಕ್ ಶರ್ಮ, ಋತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಆಯ್ಕೆಯನ್ನು ಟೀಕಿಸಿದ್ದಾರೆ.
“ಇದೊಂದು ಅಚ್ಚರಿಯ ಆಯ್ಕೆ. ತಮ್ಮ ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ ಸಂಜು ಸ್ಯಾಮ್ಸನ್ ಅವರನ್ನು ಏಕದಿನಕ್ಕೆ ಆರಿಸಿಲ್ಲ. ಜಿಂಬಾಬ್ವೆಯಲ್ಲಿ ಶತಕ ಬಾರಿಸಿದ ಅಭಿಷೇಕ್ ಶರ್ಮ, ಬ್ಯಾಟಿಂಗ್‌ನಲ್ಲಿ ಮಿಂಚಿದ ಋತುರಾಜ್ ಗಾಯಕ್ವಾಡ್ ಕೂಡ ಆಯ್ಕೆಯಾಗಿಲ್ಲ. ಯಶಸ್ಸು ಸಾಧಿಸಿದರೂ ಭಾರತ ತಂಡದಲ್ಲಿ ಮುಂದುವರಿಯುವುದು ಅಸಾಧ್ಯವಾಗಿದೆ. ಆದರೂ ತಂಡಕ್ಕೆ ಶುಭ ಹಾರೈಕೆಗಳು’ ಎಂದು ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ.
ಅಭಿಷೇಕ್ ಶರ್ಮ ಜಿಂಬಾಬ್ವೆ ಎದುರಿನ 2ನೇ ಪಂದ್ಯದಲ್ಲಿ 46 ಎಸೆತಗಳಿಂದ ಶತಕ ಬಾರಿಸಿದ್ದರು. ಅನಂತರ ಇವರನ್ನು 3ನೇ ಕ್ರಮಾಂಕ ದಲ್ಲಿ ಆಡಿಸಲಾಯಿತು. ಋತುರಾಜ್ ಗಾಯಕ್ವಾಡ್ ಕೂಡ ಉತ್ತಮ ಫಾರ್ಮ್ ಹೊಂದಿದ್ದರು. ಇವರಿಬ್ಬರೂ ಟಿ20 ತಂಡಕ್ಕೆ ಆಯ್ಕೆಗೊಳ್ಳುವ ನಿರೀಕ್ಷೆ ದಟ್ಟವಾಗಿತ್ತು. ಆದರೆ ಇವರನ್ನು ಮೀರಿಸಿ ಜಿಂಬಾಬ್ವೆಯ ಟಿ20 ಸರಣಿಯ 3 ಪಂದ್ಯಗಳಲ್ಲಿ ಕೇವಲ 24 ರನ್ ಹೊಡೆದ ರಿಯಾನ್ ಪರಾಗ್ ಸ್ಥಾನ ಪಡೆದಿದ್ದಾರೆ.
ಸಂಜು ಸ್ಯಾಮ್ಸನ್ ತಮ್ಮ ಕೊನೆಯ ಏಕದಿನವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಪಾರ್ಲ್ನಲ್ಲಿ ಆಡಿದ್ದು, ಇದರಲ್ಲಿ ಸೆಂಚುರಿ ಬಾರಿಸಿದ್ದರು.