Advertisement

ವಾರಿಯರ್‌ ಲುಕ್‌ನಲ್ಲಿ ಅಭಿಷೇಕ್‌ ಅಂಬರೀಶ್‌

02:27 PM Aug 29, 2022 | Team Udayavani |

ಸದ್ಯ ರೆಬಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಅಭಿನಯದ “ಬ್ಯಾಡ್‌ ಮ್ಯಾನರ್ಸ್‌’ ಸಿನಿಮಾ ಬಿಡುಗಡೆಗೆ ತಯಾರಾಗುತ್ತಿದೆ. ಇದರ ನಡುವೆಯೇ ಅಭಿಷೇಕ್‌ ಅಂಬರೀಶ್‌ ಅಭಿನಯಿಸುತ್ತಿರುವ ನಾಲ್ಕನೇ ಸಿನಿಮಾದ ಮೋಶನ್‌ ಪೋಸ್ಟರ್‌ ರಿಲೀಸ್‌ ಆಗಿದೆ.

Advertisement

ಹೌದು, “ಅಯೋಗ್ಯ’,”ಮದಗಜ’ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಮಹೇಶ್‌ ಕುಮಾರ್‌ ಅಭಿಷೇಕ್‌ ಅಂಬರೀಶ್‌ ನಾಲ್ಕನೇ ಸಿನಿಮಾಗೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

ಇದೇ ಆಗಸ್ಟ್‌ 27 ರಂದು ಸುಮಲತಾ ಅಂಬರೀಶ್‌ ಅವರ ಹುಟ್ಟುಹಬ್ಬದಂದು ಅಭಿಷೇಕ್‌ ಅಂಬರೀಶ್‌ ಅಭಿನಯದ ಇನ್ನೂ ಹೆಸರಿಡದ ಈ ಹೊಸ ಸಿನಿಮಾದ ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ, ಪೋಸ್ಟರ್‌ನಲ್ಲಿ ಅಭಿಷೇಕ್‌ ಅವರ ಕ್ಯಾರೆಕ್ಟರ್‌ ಲುಕ್‌ ಅನ್ನು ಪರಿಚಯಿಸಿದೆ.

ಇನ್ನು ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ನಟ ಅಭಿಷೇಕ್‌ ಅಂಬರೀಶ್‌, ಇದೇ ಮೊದಲ ಬಾರಿಗೆ ಒಬ್ಬ ಸೂಪರ್‌ ಹೀರೋ ಲುಕ್‌ನಲ್ಲಿ ಹಾಲಿವುಡ್‌ ಸಿನಿಮಾಗಳಲ್ಲಿರುವಂತೆ, ವಾರಿಯರ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಇದೊಂದು ಐತಿಹಾಸಿಕ ಕಥಾಹಂದರದ ಪ್ಯಾನ್‌ ಇಂಡಿಯಾ ಸಿನಿಮಾ ಎಂದು ಹೇಳಲಾಗುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್‌ ಆಗಲಿದೆ. ಸಿನಿಮಾದ ಟೈಟಲ್‌, ಇತರ ಕಲಾವಿದರು, ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next