Advertisement

ಇಂದು ರಚಿತಾ ರಾಮ್‌ - ಅಭಿಷೇಕ್‌ ಬರ್ತ್‌ ಡೇ

10:53 AM Oct 03, 2021 | Team Udayavani |

ಇಂದು ಸ್ಯಾಂಡಲ್‌ವುಡ್‌ನ‌ ಇಬ್ಬರು ತಾರೆಯರಾದ ನಟಿ ರಚಿತಾ ರಾಮ್‌ ಮತ್ತು ಅಭಿಷೇಕ್‌ ಅಂಬರೀಶ್‌ ಅವರಿಗೆ ಜನ್ಮದಿನದ ಸಂಭ್ರಮ. ಈ ಇಬ್ಬರೂ ತಾರೆಯರ ಜನ್ಮದಿನ ಪ್ರಯುಕ್ತ ಅವರು ಅಭಿನಯಿಸುತ್ತಿರುವ ಮುಂಬರುವ ಸಿನಿಮಾಗಳ ಟೈಟಲ್‌, ಟೀಸರ್‌, ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಲು ಆಯಾಯ ಚಿತ್ರತಂಡಗಳು ಸಿದ್ಧತೆ ಮಾಡಿಕೊಂಡಿವೆ.

Advertisement

ಇನ್ನು ಈ ಇಬ್ಬರೂ ತಾರೆಯರಿಗೂ ಸೋಶಿಯಲ್‌ ಮೀಡಿಯಾದಲ್ಲೂ ಅಭಿಮಾನಿಗಳು ಮುಂಚಿತವಾಗಿಯೇ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.

ರಚಿತಾ ಬರ್ತ್‌ಡೇ ಸ್ಪೆಷಲ್‌ ಸಾಂಗ್‌ ಗಿಫ್ಟ್

ಸ್ಯಾಂಡಲ್‌ವುಡ್‌ನ‌ ಗುಳಿಕೆನ್ನೆ ಹುಡುಗಿ ರಚಿತಾ ರಾಮ್‌ ಬರ್ತ್‌ಡೇ ಪ್ರಯುಕ್ತ, ರಚಿತಾ ಅಭಿನಯಿಸುತ್ತಿರುವ “ಲವ್‌ ಯು ರಚ್ಚು’ ಚಿತ್ರದ “ನೋಡುತಾ ನನ್ನನೇ…’ ಹಾಡು ಇಂದು ಬೆಳಿಗ್ಗೆ 11 ಗಂಟೆಗೆ “ಆನಂದ ಆಡಿಯೋ’ ಯು-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ “ಶಬರಿ’ ಚಿತ್ರತಂಡ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಲು ಪ್ಲಾನ್‌ ಹಾಕಿಕೊಂಡಿದೆ.

ಅಭಿಷೇಕ್‌ ಬರ್ತ್‌ಡೇ

Advertisement

ರೆಬಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಹುಟ್ಟುಹಬ್ಬದ ಪ್ರಯುಕ್ತ, ಅಭಿಷೇಕ್‌ ಅಭಿನಯಿಸುತ್ತಿರುವ “ಬ್ಯಾಡ್‌ ಮ್ಯಾನರ್’ ಚಿತ್ರದ ಮತ್ತೂಂದು ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೆ ಅಭಿಷೇಕ್‌ ಅಂಬರೀಶ್‌ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿರುವ, ಇನ್ನೂ ಎರಡು ಹೊಸಚಿತ್ರಗಳು ಮಾತುಕಥೆಯ ಹಂತದಲ್ಲಿದ್ದು, ಈ ಸಿನಿಮಾಗಳ ಬಗ್ಗೆಯೂ ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next