Advertisement

ಕುಕ್ಕುಜೆ ಗ್ರಾಮದ ಅಭಿನಯ ಶೆಟ್ಟಿಗೆ ಒಲಿದ ಏಕಲವ್ಯ ಪ್ರಶಸ್ತಿ

12:01 PM Nov 02, 2020 | sudhir |

ಅಜೆಕಾರು: ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಅಭಿನಯ ಎಸ್‌. ಶೆಟ್ಟಿ ಅವರು ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ದೊಂಡೆರಂಗಡಿಯ ಸುಧಾಕರ ಶೆಟ್ಟಿ – ಸಂಜೀವಿ ದಂಪತಿಯ ಪುತ್ರಿ. ಆಳ್ವಾಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅವರಿಗೆ ಎತ್ತರ ಜಿಗಿತ ಸ್ಪರ್ಧೆಯ ಸಾಧನೆಗಾಗಿ ಈ ಪ್ರಶಸ್ತಿ ಒಲಿದಿದೆ.

Advertisement

ಹರ್ಡಲ್‌ ರೇಸ್‌ ಮೂಲಕ ಕ್ರೀಡಾ ಬಾಳ್ವೆ ಆರಂಭಿಸಿದ್ದ ಅವರು ಕ್ರೀಡಾ ತರಬೇತುದಾರರ ಸಲಹೆಯಂತೆ ಎತ್ತರ ಜಿಗಿತ ಸ್ಪರ್ಧೆಯಲ್ಲಿ ತೊಡಗಿಸಿಕೊಂಡರು. 8ನೇ ತರಗತಿಯಲ್ಲಿದ್ದಾಗ (2012) ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಬಳಿಕ ಅವರು ಹಿಂದಿರುಗಿ ನೋಡಲಿಲ್ಲ.

ಆ ಬಳಿಕ ದಕ್ಷಿಣ ವಲಯ, ಜೂನಿಯರ್‌ ದಕ್ಷಿಣ ವಲಯ, ಅಖೀಲ ಭಾರತ ಮಟ್ಟದ ಕೂಟದಲ್ಲಿ ಬೆಳ್ಳಿ, ಚಿನ್ನ ಗೆದ್ದು ಮಿಂಚಿದರು. 1.75 ಮೀ. ಹಾರುವ ಮೂಲಕ ಎತ್ತರ ಜಿಗಿತದಲ್ಲಿ ಗಮನಾರ್ಹ ನಿರ್ವಹಣೆ ನೀಡುತ್ತ ಸಾಗಿದರು. ಮೂಡುಬಿದಿರೆಯಲ್ಲಿ ನಡೆದ 79ನೇ ಅಖೀಲ ಭಾರತ ಆ್ಯತ್ಲೆಟಿಕ್‌ ಕೂಟದಲ್ಲಿ 1.77 ಮೀಟರ್‌ ಜಿಗಿದು ಬೆಳ್ಳಿಯ ಪದಕ ಗೆದ್ದಿರುವುದು ಉತ್ತಮ ಸಾಧನೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ರಾಷ್ಟ್ರೀಯ ದಾಖಲೆ ಬರೆದ ಸವಣೂರು ನಡುಬೈಲಿನ ಅಭಿಷೇಕ್‌ ಎನ್‌ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

2018ರಲ್ಲಿ ಶ್ರೀಲಂಕಾದಲ್ಲಿ ನಡೆದ ಸೌತ್‌ ಏಷ್ಯನ್‌ ಆ್ಯತ್ಲೆಟಿಕ್ಸ್‌ನಲ್ಲಿ 1.65 ಮೀ. ಜಿಗಿದು ಕಂಚು, ಜಪಾನ್‌ನಲ್ಲಿ ನಡೆದ ಏಷ್ಯನ್‌ ಆ್ಯತ್ಲೆಟಿಕ್ಸ್‌ನಲ್ಲಿ 1.75 ಮೀ. ಜಿಗಿದು ಕಂಚು ಗೆದ್ದ ಅವರು 2019ರಲ್ಲಿ ಇಟೆಲಿಯಲ್ಲಿ ನಡೆದ ವರ್ಲ್ಡ್ ಯುನಿವರ್ಸಿಟಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದಾರೆ.

Advertisement

ತನ್ನ ಮಹೋನ್ನತವಾದ ಕ್ರೀಡಾ ಜೀವನದಲ್ಲಿ ಖ್ಯಾತ ಅಥ್ಲೆಟಿಕ್ ಪಟುವಾಗಿ ರೂಪುಗೊಂಡು ದೇಶ ವಿದೇಶಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಹೆಗ್ಗಳಿಕೆ ಈಕೆಯದ್ದಾಗಿದೆ .

2013-14 ರಲ್ಲಿ ಝಾರ್ಖಂಡ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಈಕೆ 2014-15 ರಲ್ಲಿ ಹೈದರಾಬಾದ್ ನಲ್ಲಿ ಬೆಳ್ಳಿಯ ಪದಕ ,2015-16 ರಲ್ಲಿ ವಿಶಾಖಪಟ್ಟಣಂ ನಲ್ಲಿ ಬೆಳ್ಳಿಯ ಪದಕ ,1016-17 ರಲ್ಲಿ ಪುಣೆಯ ಬಾಲೇವಾಡಿಯಲ್ಲಿ ಜರಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಲ್ಲದೆ ,2017–18 ರಲ್ಲಿ ವಿಜಯವಾದದಲ್ಲಿ ಕಂಚಿನ ಪದಕ ,ಗುಂಟೂರಲ್ಲಿ ಬೆಳ್ಳಿಯ ಪದಕ ,ಕೊಯಮುತ್ತೂರಲ್ಲಿ ಚಿನ್ನದ ಪದಕಗಳಲ್ಲಿ ಗಳಿಸಿಕೊಂಡು ವಿಶಿಷ್ಟ ಸಾಧನೆ ಮಾಡಿದ್ದಾಳೆ.

ಆರನೇ ತರಗತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಸರಕಾರವು ಸಾಧನೆಯನ್ನು ಗುರುತಿಸಿರುವುದು ಸಂತಸ ತಂದಿದೆ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಯ ಕನಸಿದೆ.
– ಅಭಿನಯ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next