Advertisement

ವಾಯುಸೇನಾ ದಿನಾಚರಣೆ: ಮಿಗ್-21ನಲ್ಲಿ ಅಭಿನಂದನ್ ಸಾಹಸ ಪ್ರದರ್ಶನ

10:42 AM Oct 09, 2019 | Team Udayavani |

ಹೊಸದಿಲ್ಲಿ: ಭಾರತದ ಹೆಮ್ಮೆಯ ವಾಯುಸೇನಾ ಯೋಧ ಅಭಿನಂದನ್ ವರ್ಧಮಾನ್ ಇಂದು ಮಿಗ್- 21 ಬೈಸನ್ ನಲ್ಲಿ ಹಾರಾಟ ನಡೆಸಿ ಏರ್ ಶೋ ನಡೆಸಿಕೊಟ್ಟರು. ಭಾರತೀಯ ವಾಯುಸೇನೆಯ 87ನೇ ದಿನಾಚರಣೆಯ ಹಿನ್ನಲೆಯಲ್ಲಿ ಗಾಜಿಯಾಬಾದ್ ನ ಹಿಂದನ್ ವಾಯುನೆಲೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

Advertisement

ಅಭಿನಂದನ್ ವರ್ಧಮಾನ್ ಮತ್ತು ತಂಡ ಎವೆಂಜರ್ ಫಾರ್ಮೇಶನ್ ನಲ್ಲಿ ಮೂರು ಮಿರಾಜ್ 2000 ಮತ್ತು ಎರಡು ಎಸ್ ಯು -30 ಯುದ್ದ ವಿಮಾನಗಳಲ್ಲಿ ಹಾರಾಟ ನಡೆಸಿದರು.

ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಬಾಲಾಕೋಟ್ ದಾಳಿಯಲ್ಲಿ ಪಾಕಿಸ್ಥಾನದ ಎಫ್ 16 ಯುದ್ದವಿಮಾನವನ್ನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಹೊಡೆದುರುಳಿಸಿದ್ದರು.

ಕಾರ್ಯಕ್ರಮದಲ್ಲಿ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next