ಹೊಸದಿಲ್ಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಎಂಐಆರ್ ಪರೀಕ್ಷೆಯನ್ನು ಭಾನುವಾರ ದೆಹಲಿಯ ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಯಾವುದೇ ಗಂಭೀರ ದೋಷಗಳು ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮೂಲಗಳು ತಿಳಿಸಿರುವಂತೆ ಎಎನ್‌ಐ ವರದಿಯಲ್ಲಿ, ಅಭಿನಂದನ್ ಅವರ ಕೆಳ ಬೆನ್ನುಹುರಿ ಮತ್ತು ಪಕ್ಕೆಲುಬಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ಮಿಗ್ 21 ವಿಮಾನ ಮತ್ತು ಪಾಕ್‌ನ ಎಫ್-16 ವಿಮಾನದ ನಡುವಿನ ಕದನದಲ್ಲಿ ವಿಮಾನದಿಂದ ಕೆಳ ಬೀಳುವ ವೇಳೆ ಬೆನ್ನುಹುರಿ ಮತ್ತು ಪಕ್ಕೆಲುಬಿಗೆ ಗಾಯವಾಗಿರಬಹುದು ಎನ್ನಲಾಗಿದೆ.
ಪಾಕ್ ಸ್ಥಳೀಯರು ಅಭಿನಂದನ್ ಅವರ ಮೇಲೆ ಗಂಭೀರ ಸ್ವರೂಪದಲ್ಲಿ ಹಲ್ಲೆ ನಡೆಸಿದ್ದು, ಈ ವೇಳೆ ಪಕ್ಕೆಲುಬಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ರಿಸರ್ಚ್ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಅಭಿನಂದನ್ ಅವರಿಗೆ ಇನ್ನೂ ಹೆಚ್ಚಿನ ಪರೀಕ್ಷೆಗಳು ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.