ಬೆಂಗಳೂರು: ತಮಿಳುನಾಡು ವಿರುದ್ದದ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ವೇಗಿ, ಬರ್ತ್ ಡೇ ಬಾಯ್ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಗು ಬೌಲಿಂಗ್ ದಾಳಿ ನಡೆಸಿದ ಮಿಥುನ್ ಐದು ವಿಕೆಟ್ ಪಡೆದು ಮಿಂಚಿದರು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡದ ನಿರ್ಣಯ ಆರಂಭದಲ್ಲೇ ಫಲಿಸಿತು. ಮುರುಳಿ ವಿಜಯ್ ಮತ್ತು ಭಡ್ತಿ ಪಡೆದು ಬಂದ ರವಿಚಂದ್ರನ್ ಅಶ್ವಿನ್ ವಿಕೆಟ್ ಅನ್ನು ತಮಿಳುನಾಡು ಬೇಗನೇ ಕಲೆದುಕೊಂಡಿತು.
ಆರಂಭಿಕ ಆಟಗಾರ ಅಭಿನವ್ ಮುಕುಂದ್ 85 ರನ್ ಗಳಿಸಿದ್ದರೆ, ಬಾಬ ಅಪರಿಜಿತ್ 66 ರನ್ ಗಳಿಸಿದರು.
ಅಂತಿಮ ಓವರ್ ನ 3,4,5 ಎಸೆತಗಳಲ್ಲಿ ಕ್ರಮವಾಗಿ ಶಾರುಖ್ ಖಾನ್, ಎಂ ಮೊಹಮ್ಮದ್, ಮುರುಗನ್ ಅಶ್ವಿನ್ ವಿಕೆಟ್ ಪಡೆದ ಮಿಥುನ್ ಹ್ಯಾಟ್ರಿಕ್ ಸಾಧನೆ ಮಾಡಿದರು.
ಅಂತಿಮವಾಗಿ ತಮಿಳುನಾಡು 252 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.