Advertisement

ಹೆತ್ತವರ ಪ್ರೇರಣೆ ಜೊತೆಗೆ ಕಾಲೇಜಿನ ವಾತಾವರಣ ನನ್ನ ಯಶಸ್ಸಿಗೆ ಸ್ಫೂರ್ತಿ : ಅಭಿಜ್ಞಾ ರಾವ್

07:44 PM Jul 14, 2020 | sudhir |

ಉಡುಪಿ : ಹೆತ್ತವರ ಪ್ರೇರಣೆ ಜೊತೆಗೆ ನಾನು ಕಲಿತ ಕಾಲೇಜಿನ ವಾತಾವರಣ ನನ್ನ ಸಾಧನೆಗೆ ಮೂಲ ಕಾರಣ ಎಂದು ಪಿಯುಸಿ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಅಭಿಜ್ಞಾ ರಾವ್ ಅವರ ಮನದಾಳದ ಮಾತು.

Advertisement

ಉಡುಪಿ ಜಿಲ್ಲೆಯ ನಿವಾಸಿಯಾಗಿರುವ ವಿಠ್ಠಲ್ ರಾವ್ ಮತ್ತು ಆಶಾ ರಾವ್ ಅವರ ಪುತ್ರಿಯಾಗಿರುವ ಅಭಿಜ್ಞಾ ರಾವ್ ಹೇಳುವುದು ಹೀಗೆ:
ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡ ನಾನು ನನ್ನ ಓದಿನ ಸಮಯದಲ್ಲಿ ಯಾವುದೇ ವಿಷಯವನ್ನು ಒತ್ತಡದಲ್ಲಿ ಓದುತ್ತಿರಲಿಲ್ಲ ಬದಲಾಗಿ ದಿನದ ಪಾಠಕ್ಕೆ ಸಂಬಂದಿಸಿದ ವಿಷಯಗಳನ್ನು ಅಂದೇ ಸಂಪೂರ್ಣವಾಗಿ ಓದುತ್ತಿದ್ದೆ ನನ್ನ ಕಾಲೇಜು ಕೃಷ್ಣಾ ಮಠದ ಪರಿಸರದಲ್ಲಿ ಇದ್ದುದರಿಂದ ಕಾಲೇಜಿನ ವಾತಾವರಣ, ಕಾಲೇಜಿನ ಶಿಕ್ಷಕರು ಆಡಳಿತ ಮಂಡಳಿ ಸೇರಿದಂತೆ ಎಲ್ಲರ ಪ್ರೋತ್ಸಾಹದಿಂದ ನನ್ನ ಸಾಧನೆ ಸಾಧ್ಯವಾಯಿತು.

ಇದನ್ನೂ ಓದಿ: ನನ್ನ ನಿರೀಕ್ಷೆಯ ಕನಸು ನನಸಾಗಿದೆ…4th Rank ವಿಜೇತೆ ಕುಂದಾಪುರ ಸ್ವಾತಿ ಪೈ ಮನದಾಳದ ಮಾತು

ಎಸ್ಎಸ್ಎಲ್ ಸಿಯಲ್ಲಿ 625ಕ್ಕೆ 624 ಅಂಕ

ನಾನು ಎಸ್ಎಸ್ಎಲ್ ಸಿ ಕಲಿಯುವಾಗಲು 625 ರಲ್ಲಿ 624 ಅಂಕಗಳನ್ನು ಪಡೆಯುದರೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದೆ ಆಗಲೇ ನನ್ನಲ್ಲಿ ಒಂದು ಛಲ ಹುಟ್ಟಿತ್ತು ಮುಂದೆ ಪಿಯುಸಿಯಲ್ಲಿಯೂ ಒಳ್ಳೆಯ ಅಂಕಗಳನ್ನು ಪಡೆದು ಕಾಲೇಜಿಗೆ ಹಾಗೂ ನಮ್ಮ ಮನೆಯವರಿಗೂ ಒಳ್ಳೆಯ ಹೆಸರು ತರಬೇಕೆಂಬುದು, ಆದರೆ ಅದು ಇಂದು ಎಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗಿದೆ.

Advertisement

ಕೋವಿಡ್ ಸಮಯ ನನಗೆ ವರವಾಯಿತು :
ಎಲ್ಲಾ ಪರೀಕ್ಷೆಗಳು ನಡೆದು ಇನ್ನು ಇಂಗ್ಲೀಷ್ ಪರೀಕ್ಷೆ ಮಾತ್ರ ಬಾಕಿ ಉಳಿದಿತ್ತು ಅಷ್ಟರಲ್ಲಿ ಕೋವಿಡ್ ವ್ಯಾಪಿಸಿದ ಪರಿಣಾಮ ನಮ್ಮ ಇಂಗ್ಲೀಷ್ ಪರೀಕ್ಷೆ ಮುಂದೂಡಲಾಯಿತು ಇದೆ ನನಗೆ ಉತ್ತಮವಾದ ಸಮಯ ಎಂದು ತಿಳಿದು ಆ ಅವಧಿಯನ್ನು ವ್ಯರ್ಥ ಮಾಡದೆ ಪರೀಕ್ಷೆಗೆ ಸಂಬಂಧಿಸಿದ ಹಳೆ ಪ್ರಶ್ನಾ ಪತ್ರಿಕೆಗಳನ್ನು ಅಭ್ಯಾಸ ಮಾಡಿದೆ ಇದರಿಂದ ನನಗೆ ಬಹಳ ಉಪಕಾರಿಯಾಯಿತು.

ಅಕ್ಕನ ಹಾದಿಯಲ್ಲೇ ಸಾಗುವ ಅಸೆ:
ನನ್ನ ಅಕ್ಕ ಇಂಜಿನಿಯರ್ ಮಾಡಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ ಅವಳ ಹಾದಿಯಲ್ಲೇ ನಾನು ಮುಂದುವರೆಯಬೇಕೆಂಬ ಆಸೆ ಹಾಗಾಗಿ ಮುಂದೆ ಇದಕ್ಕೆ ಬೇಕಾದ ಪೂರಕ ಪರೀಕ್ಷೆಗಳನ್ನು ಬರೆದು ಇಂಜಿನಿಯರ್ ಆಗಬೇಕೆಂದಿದ್ದೇನೆ ಎನ್ನುತ್ತಾರೆ ಅಭಿಜ್ಞಾ ರಾವ್ .

Advertisement

Udayavani is now on Telegram. Click here to join our channel and stay updated with the latest news.

Next