Advertisement

ಹರ್ಯಾಣದಲ್ಲಿ ಡಿಜಿಟಲ್‌ ಮತಾಂತರ ಶಿಕ್ಷಾರ್ಹ ಅಪರಾಧ: ಖಟ್ಟರ್‌ ಸರ್ಕಾರದಿಂದ ವಿಧೇಯಕ ಮಂಡನೆ

08:03 PM Mar 03, 2022 | Team Udayavani |

ಚಂಡೀಗಡ: ಆನ್‌ಲೈನ್‌ ಮೂಲಕ ಮರುಳುಗೊಳಿಸಿ ಮತಾಂತರ ಮಾಡುವುದು, ಧಾರ್ಮಿಕ ಸಂಸ್ಥೆಗಳಿಂದ ನಡೆಸಲ್ಪಡುವ ಶಾಲೆಗಳಲ್ಲಿ ಮತಾಂತರಕ್ಕೆ ಪ್ರಚೋದನೆ ಮಾಡುವುದು ಇನ್ನು ಮುಂದೆ ಹರ್ಯಾಣದಲ್ಲಿ ಅಪರಾಧವಾಗಲಿದೆ.

Advertisement

ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಲು ಉದ್ದೇಶಿಸಿರುವ “ಹರ್ಯಾಣ ಮತಾಂತರ ನಿಷೇಧ ವಿಧೇಯಕ 2022’ರಲ್ಲಿ ಈ ಅಂಶಗಳಿವೆ. ಸದ್ಯ ರಾಜ್ಯದ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ಉದ್ದೇಶಿತ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ವಿಧೇಯಕದಲ್ಲಿ ಉಲ್ಲೇಖೀಸಿರುವಂತೆ ಧಾರ್ಮಿಕ ಸಂಸ್ಥೆಗಳಿಂದ ನಡೆಸುವ ಶಾಲೆಗಳಲ್ಲಿ ಮರುಳು ಮಾಡಿ ಮತಾಂತರಗೊಳಿಸುವುದನ್ನೂ ನಿಷೇಧಿಸಲಾಗಿದೆ. ಡಿಜಿಟಲ್‌ ಮಾಧ್ಯಮದ ಮೂಲಕ ಮತಾಂತರಕ್ಕೆ ಪ್ರಯತ್ನ ಮತ್ತು ಒತ್ತಾಯ ಮಾಡುವುದೂ ಶಿಕ್ಷಾರ್ಹ ಅಪರಾಧವಾಗಲಿದೆ.

ವ್ಯಕ್ತಿಯ ಹೆತ್ತವರು ಅಥವಾ ಅವರ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಧರ್ಮವನ್ನೇ ಮರಳಿ ಅನುಸರಿಸುವುದು ಮತಾಂತರ ಎಂಬ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಯಾರೇ ಒಬ್ಬ ಧರ್ಮವನ್ನು ಮರೆಮಾಚಿ ಯುವತಿಯನ್ನು ವಿವಾಹವಾದರೆ ಅಂಥ ಮದುವೆಯನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ, ಆ ರೀತಿಯ ದಾಂಪತ್ಯದಿಂದ ಜನಿಸಿದ ಮಗುವಿಗೆ ಹೆತ್ತವರ ಆಸ್ತಿಯ ಹಕ್ಕು ವರ್ಗಾವಣೆಯಾಗುತ್ತದೆ. ಇದರ ಜತೆಗೆ ಧಾರ್ಮಿಕ ಅಂಶವನ್ನು ಮರೆ ಮಾಚಿದವರಿಗೆ 3 ರಿಂದ 10 ವರ್ಷದವರೆಗೆ ಜೈಲು ಮತ್ತು 3 ಲಕ್ಷ ರೂ. ದಂಡ, ಸಾಮೂಹಿಕ ಮತಾಂತರ ಪ್ರಕರಣಗಳಾಗಿದ್ದಲ್ಲಿ 5 ರಿಂದ 10 ವರ್ಷ ಜೈಲು ಮತ್ತು 4 ಲಕ್ಷ ರೂ. ದಂಡ, ಒಂದು ವೇಳೆ, ಸಂಸ್ಥೆಯೊಂದು ಇಂಥ ಕೃತ್ಯದಲ್ಲಿ ಶಾಮೀಲಾದದ್ದು ಸಾಬೀತಾದರೆ ಅದರ ನೋಂದಣಿ ರದ್ದು ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next