ಭಟ್ಕಳ: ಭಯೋತ್ಪಾದನಾ ಚಟುವಟಿಕೆಯನ್ನು ನಡೆಸುತ್ತಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದನೆಂದು ಶಂಕಿಸಿ ಬಂಧಿಸಲಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ಧಿಬಾಪಾ ಈತನನ್ನು ದೆಹಲಿ ನ್ಯಾಯಾಲಯ ಬಿಡುಗಡೆಗೊಳಿಸಿದ ಕುರಿತು ತಿಳಿದು ಬಂದಿದೆ.
ಈತನು ನಿಷೇಧಿತ ಭಯೋತ್ಪದಕ ಸಂಘಟನೆಯಾದ ಇಂಡಿಯತ್ ಮುಜಾಹಿದ್ದೀನ್ ಸದಸ್ಯನಾಗಿದ್ದು ೨೦೦೭ರಿಂದಲೂ ದೇಶದಲ್ಲಿನ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನುವ ಆರೋಪದ ಮೇಲೆ ಈತನನ್ನು ೨೦೧೬ನೇ ಇಸವಿಯಲ್ಲಿ ದುಬೈಯಿಂದ ಬರುತ್ತಿದ್ದಾಗ ದೆಹಲಿಯ ಇಂದಿರಾಗಾAಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಬಂಧಿಸಿತ್ತು.
ದುಬೈಯಲ್ಲಿ ಇರುವಾಗ ಅಬ್ದುಲ್ ವಾಹಿದ್ ಸಿದ್ಧಿಬಾಪಾ ಈತನು ನಿಷೇಧಿತ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್‌ಗೆ ಯುವಕರನ್ನು ಸೇರುವಂತೆ ಮನವೊಲಿಸುತ್ತಿದ್ದನು ಎನ್ನುವ ಆರೋಪ ಇವರ ಮೇಲಿತ್ತು. ಅಲ್ಲದೇ ಭಾರತದಲ್ಲಿ ಭಯೋತ್ಪದನಾ ಚಟುವಟಿಕೆಗಳನ್ನು ನಡೆಸಲು ದುಬೈಯಲ್ಲಿ ಹಣ ಸಂಗ್ರಹ ಮಾಡಿದ್ದಾನೆ ಎನ್ನುವ ಆರೋಪ ಕೂಡಾ ಹೊರಿಸಲಾಗಿತ್ತು. ಈ ಕುರಿತು ವಿಚಾರಣೆಯನ್ನು ನಡೆಸಿದ ದೆಹಲಿಯ ಪಾಟಿಯಾಲಾ ಹೌಸ್ ಸೆಷನ್ಸ್ ಕೋರ್ಟ ಈತನ ಮೇಲಿನ ಆರೋಪಗಳು ಸಾಬೀತಾಗದ ಕಾರಣ ಈತನನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿಸಲಾಗಿದೆ.
ಈತನಿಗೆ ಕಾನೂನಿನ ನೆರವನ್ನು ದೆಹಲಿಯ ಜಮೀಯತ್ ಉಲೆಮಾ ಹಿಂದ್ ಕಾನೂನು ನೆರವು ಸಮಿತಿ ನೀಡುತ್ತಿದ್ದು ಈತನ ಪರವಾಗಿ ನ್ಯಾಯವಾದಿ ಎಂ.ಎಸ್. ಖಾನ್ ವಾದಿಸಿದ್ದರು ಎಂದೂ ತಿಳಿದು ಬಂದಿದೆ.
ಇದನ್ನೂ ಓದಿ: ಸಂಕಷ್ಟದಲ್ಲಿ ಅಬ್ಬರಿಸಿದ ತಿಲಕ್ ವರ್ಮ; ಆರ್ ಸಿಬಿಗೆ 172 ರನ್ ಗುರಿ ನೀಡಿದ ಮುಂಬೈ