ಮುಂಬಯಿ:ಕಾಂಗ್ರೆಸ್ ಸೀಟು ದೊರೆಯದೆ ಅಸಮಾಧಾನಗೊಂಡ ಅಬ್ದುಲ್ ಸತ್ತಾರ್ ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪ್ರಸಕ್ತ ಔರಂಗಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಸಚಿವ ಅಬ್ದುಲ್ ಸತ್ತಾರ್ ಬದಲಿಗೆ ಸುಭಾಷ್ ಝಂಬಾಡ್ ಟಿಕೆಟು ನೀಡದ ಕಾರಣ ಅಸಮಾಧಾನ ವ್ಯಕ್ತಪಡಿಸಿದರು.
ಸತ್ತಾರ್ ಅವರು ಫಡ್ನವೀಸ್ ಅವರನ್ನು ಭೇಟಿ ನೀಡಿದರು. ಇದರಿಂದ ಬಿಜೆಪಿಯಲ್ಲಿ ಸೇರುವ ಬಗ್ಗೆ ಚರ್ಚೆಗಳಿತ್ತು. ಆದರೆ ಮುಖ್ಯಮಂತ್ರಿ ಅವರನ್ನು ಭೇಟಿಯ ಅನಂತರ, ಮಾತನಾಡಿದ ಸತ್ತಾರ್ ಅವರು, ನಾನು ಕಾಂಗ್ರೆಸ್‌ನಲ್ಲಿದ್ದು, ಬಿಜೆಪಿಗೆ ಹೋಗುವ ಬಗ್ಗೆ ಯಾವುದೇ ನಿರ್ಧಾರ ಮಾಡಲಿಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿ ಇದ್ದರು ನಾನು ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇನೆ. ಎಪ್ರಿಲ್ 8ರಂದು ನಾನು ನನ್ನ ನಿರ್ಣಯ ತೆಗೆದುಕೊ ಳ್ಳುತ್ತೇನೆ ಎಂದು ಸತ್ತಾರ್ ಹೇಳಿದರು.
ಬಿಜೆಪಿಗೆ ಹೋಗುವುದಿಲ್ಲ ಆದರೆ ಕಾಂಗ್ರೆಸ್‌ನ ಪ್ರಚಾರದಲ್ಲಿ ಸಹಬಾಗಿ ಆಗೋಲ್ಲ ಎಂದು ಅಬ್ದುಲ್ ಪ್ರತಿಕ್ರಿಯೆ ನೀಡಿದರು. ಪ್ರಕ್ಷೇತರವು ಎಪ್ರಿಲ್ 8ರಂದು ಅಭ್ಯರ್ಥಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಅಬ್ದುಲ್ ಸತ್ತಾರ್ ಅವರು, ಬುಧವಾರ ರಾತ್ರಿ ಫಡ್ನವೀಸ್ ಅವರನ್ನು ಭೇಟಿಯಾದರು. ಬಿಜೆಪಿಗೆ ಸೇರ್ಪಡೆ ಆಗಲು ಅಬ್ದುಲ್ ಸತ್ತಾರ್ ಅವರು ನಿರ್ಧರಿಸಿದ್ದು, ಆತ್ಮಕ್ಕೆ ದ್ರೋಹ ಮಾಡಿದಂತೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಹೇಳಿದರು. ಕಾಂಗ್ರೆಸ್ ನಾಯಕರ ಈ ಹೇಳಿಕೆಯಿಂದ ಅಸಾಮಾಧಾನಗೊಂಡ ಅಬ್ದುಲ್ ಔರಂಗಾಬಾದ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡುವುದಾಗಿ ಹೇಳಿದರು.
ಶಿವಸೇನೆ – ಬಿಜೆಪಿಗೆ ಲಾಭ
ಔರಂಗಾಬಾದ್ ಮತ್ತು ಜಾಲಾ°ದ ಕಾಂಗ್ರೆಸ್ ಅಭ್ಯರ್ಥಿ ನೇಮಿಸದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸತ್ತಾರ್ ಅವರು ಪಕ್ಷೇತರ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಸಿದರೆ ಇದರ ಲಾಭ ಶಿವಸೇನೆ – ಬಿಜೆಪಿ ಮೈತ್ರಿಯ ಅಭ್ಯರ್ಥಿಗೆ ಆಗುವ ಸಾಧ್ಯತೆಯಿದೆ. ಮತ ವಿಭಜನೆಯ ಆಗುವುದರಿಂದ ಕಾಂಗ್ರೆಸ್‌ಗೆ ನಷ್ಟ ಆಗುವ ಸಾಧ್ಯತೆಯಿದೆ. ಔರಂಗಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಸುಭಾಷ್ ಝಂಬಾಡ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಅಬ್ದುಲ್ ಸತ್ತಾರ್ ಅವರನ್ನು ಪಕ್ಷ ನಿರ್ಲಕ್ಷಿಸಿದೆ.