Advertisement
ನನ್ನ ಕಣ್ಣು, ಕಿವಿ ಎರಡೂ ಚುರುಕಾದವು. “ಸಿಗ್ರೇಟು ಅನಾಹುತ ಮಾಡುºಡು¤ ಸಾ, ಒಂದ್ ದಿನ್ಕ ಒಂದ್ ಗುಡ್ಡ ಸೇದ್ ಬಿಸಾಕುºಡ್ತಿದ್ದ’ ಎಂದು ಬೇಸರದಿಂದ ನುಡಿದರು. ನನ್ನೊಡನೆಯ ಮಾತುಕತೆಯಲ್ಲಿ ಅವರು ಬಳಸುತ್ತಿದ್ದುದು ಅಭಿಮಾನದ ಏಕವಚನ. ಜನಸಾಮಾನ್ಯರು ರಾಜ್‌ಕುಮಾರನ ಬಗ್ಗೆ ಮಾತಾಡುವ ಹಾಗೆ.
Related Articles
Advertisement
“ಮರೆಯಕ್ಕಾದದ ಸ್ವಾಮಿ! ಕನ್ನಡ! ಅವನ್ ಕಂಡಗ ಕನ್ನಡ ಭಾಷೆನ ಮಾತಾಡªವ್ರ ನಾನು ನೋಡ್ದೆ ಇಲ್ಲ. ಅಷ್ಟು ಸೊಗಸಾಗಿ ಮಾತಾಡ್ತಿದ್ದ ‘.
“ನಿಮ್ಮೂರಿಗೆಲ್ಲ ಬರ್ತಿದ್ರಾ ಅವ್ರು?’
“ನಮ್ಮನೆಗ್ ಬಂದ್ರ ಇದೇ ಪಡಸಾಲೆ ಮ್ಯಾಲೆ ಮಲಿಕ ಬುಡ್ತಿದ್ದ. ಇದೇನ್ ಸ್ವಾಮಿ ನೀವು, ಬನ್ನಿ ಒಳಗ್ ಮಲಿಕ್ಕಳ್ಳಿ ಅಂದ್ರ, ಇಲ್ಲೇ ನನಗ ಸುಕ್ವಾಗಿ ನಿದ್ದ ಬತ್ತದ ತತ್ತಯ್ಯ ಒಂದ್ ಮಂದಲ್ಗಾé ಅಂದ್ಬುಟ್ಟು ದಿಂಬು ಮಂದಲ್ಗ ಈಸ್ಕಂಡು ಅಲ್ಲೇ ಹಾಸ್ಗಂಡು ಮಲಿಕಬುಡ್ತಿದ್ದ.’
ಈ ಸಂಗತಿಗಳು ಇತಿಹಾಸದ ಅಧಿಕೃತ ದಾಖಲೆಗಳಲ್ಲಿ ಸಿಗುವುದಿಲ್ಲ. ಜನಪದದ ಶಕ್ತಿಯೇ ಅಂಥದ್ದು. ಇತಿಹಾಸ ವಂಚಿಸಿದರೂ ಜನಪದ ವಂಚಿಸುವುದಿಲ್ಲ. ತೊಂಭತ್ತು ವರ್ಷದ ಅಜ್ಜ ಮೂವತ್ತೈದು ವರ್ಷಗಳ ಹಿಂದೆಯೇ ಗತಿಸಿದ ಆ ವ್ಯಕ್ತಿಯನ್ನು ನೆನೆಸಿಕೊಂಡು ಅಭಿಮಾನದಿಂದ ಗುಣಗಾನ ಮಾಡುತ್ತಿದ್ದುದೇ ಇದಕ್ಕೆ ಸಾಕ್ಷಿ.
“ತುಗ್ರಿ ಕಾಳಿನ್ ಸಾರು ಅಂದ್ರ ಅವನ್ಗ ಸ್ಯಾನೆ ಇಸ್ಟ, ಟೇಸ್ಟಲ್ಲಿ ಇದು ನಾವ್ ಮಾಡೋ ಮೀನ್ ಸಾರ್ನೂ ಹೊಡಾªಕ್ತದ ಕಯ್ನಾ ಅಂತಿದ್ದ. ಚಪ್ಪರಿಸ್ಕಂಡ್ ತಿನ್ತಿದ್ದ. ಅಂವ ಮನ್ಸ್ ಮಾಡಿದ್ರ ದೊಡೊªಡ್ ಬಂಗ್ಲ ಕಟ್ಟಸ್ಬುಬೌದಾಗಿತ್ತು. ಆದ್ರ ಸಾಯಗಂಟ್ಲೂ ಒಂದ್ ಮನ ಕಟ್ಗನಿಲ್ಲ. ಅದೇ ಹಳ ಮನೇಲೆ ಜೀಂವ ಬುಟ್ಟ…’
ಆ ಅಜ್ಜ ಮಾತು ಮುಂದುವರಿಸಿದರು: “ಅಂವ ತನ್ ಮನ ಜನ್ಕ ಮಾಡ್ತ್ ಒಂದೇ ಒಂದು ಉಪಕಾರ ಅಂದ್ರ ಮೂರ್ ಹೆಣ್ ಮಕ್ಕಳ್ತೋವಿ ಒಳ್ಳೆ ಜಾಗಕ್ಕೆ ಮದುವ ಮಾಡುದ್ದು. ಅದು ಬುಟ್ರ ತನ್ನವ್ರಗಾ ಅಂತ ದುಡ್ಡು ಮಾಡ್ನಿಲ್ಲ, ಆಸ್ತಿ ಮಾಡ್ನಿಲ್ಲ. ಒಬ್ ಮಿನಿಷ್ಟ್ರಾಗಿದ್ರೂವ, ದಾರೀಲಿ ಆರಂಬಕಾರ್ರು, ದನ ಕಾಯೋರು, ಕೂಲಿ ಕಂಬ್ಳ ಮಾಡವ್ರು ಕಂಡ್ರ ಕಾರ್ ನಿಲ್ಲುಸ್ಬುಟ್ಟು ಕಸ್ಟಸುಖ ಇಚಾರಸ್ಬುಟ್ಟು ಮುಂದಕ್ಕೋಯ್ತಿದ್ದ, ಅಂಥ ಧೀಮಂತ ಇನ್ ಸಿಕ್ಕಿನಾ ಸ್ವಾಮಿ’ ಎಂದು ನಿಟ್ಟುಸಿರುಬಿಟ್ಟರು.
ಹೌದು, ನೀವು ಈಗಾಗಲೇ ಊಹಿಸಿರಬಹುದು. ಆ ಅಜ್ಜ ಮಾತಾಡುತ್ತಿದ್ದುದು, ನೀರ್ ಸಾಬ್ ಎಂದೇ ಖ್ಯಾತರಾಗಿದ್ದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ದಿವಂಗತ ಅಬ್ದುಲ್ ನಜೀರ್ ಸಾಬ್ ಅವರ ಬಗ್ಗೆ.
(8-10-2023ರಂದು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದೆ.)
-ಡಾ. ಗವಿ ಸ್ವಾಮಿ, ಗುಂಡ್ಲುಪೇಟೆ