Advertisement

ಹೊಟ್ಟೆಯ ಆರೋಗ್ಯ ಕೆಡಬಾರದು…

04:32 AM May 26, 2020 | Lakshmi GovindaRaj |

ಜನ ದಿನವಿಡೀ ದುಡಿಯುವುದು ಹೊಟ್ಟೆಪಾಡಿಗಾಗಿ. ಹೊಟ್ಟೆಯ ಹಸಿವು ತಣಿಸಲಿಕ್ಕಾಗಿ. ಹಸಿವು ಅನ್ನೋದು ಇಲ್ಲದೇ ಇದ್ದಿದ್ದರೆ, ಜಗತ್ತು ನಿಂತ ನೀರಾಗುತ್ತಿತ್ತು. ದಾಸರು, “ಎಲ್ಲಾರು ಮಾಡುವುದು  ಹೊಟ್ಟೆಗಾಗಿ…’ ಅಂತ ಅದಕ್ಕೇ ಹೇಳಿದ್ದು.  ಹೊಟ್ಟೆಯನ್ನು ಸರಿಯಾಗಿ ಇಟ್ಟುಕೊಳ್ಳುವ ದಾರಿಗಳು ಹಲವು… ಹೊಟ್ಟೆ ಜಾಸ್ತಿಯಾದರೆ ಬೊಜ್ಜು. ಒಳಗೆ ಸಮಸ್ಯೆ ಅಂದರೆ ಅಲ್ಸರ್‌, ಗ್ಯಾಸ್ಟ್ರಿಕ್‌ ಶುರುವಾಗುತ್ತದೆ. ಎಲ್ಲದಕ್ಕೂ ಮದ್ದು ಅಂದರೆ, ಎಳನೀರು. ಹೊಟ್ಟೆಯೊಳಗಿನ  ಅಲ್ಸರ್‌  ಕಡಿಮೆ ಮಾಡುವ ಔಷಧೀಯ ಗುಣ ಇದಕ್ಕಿದೆ. ಇದು, ಹೊಟ್ಟೆಯೊಳಗಿನ ಹುಳಗಳನ್ನು ಕೊಲ್ಲುತ್ತದೆ.

Advertisement

ಎಳನೀರಿಗೆ ಗ್ಲುಕೋಸ್‌ ಹಾಕಿಕೊಂಡು ಕುಡಿದರೆ, ಸುಸ್ತು ಕಡಿಮೆಯಾಗುತ್ತದೆ. ಜೇನುತುಪ್ಪ ಬಳಸಿದರೂ ಇದೇ ಪರಿಣಾಮ ನಿರೀಕ್ಷಿಸಬಹುದು. ಕ್ಯಾಲೊರಿ ಜಾಸ್ತಿ ಮಾಡಿಕೊಂಡರೂ ಹೊಟ್ಟೆ ಉರಿ, ಅಲ್ಸರ್‌ನಂಥ  ಸಮಸ್ಯೆ ಬರುವುದಿಲ್ಲ. ಅದಕ್ಕಾಗಿ ಬಾದಾಮಿ ಬಳಸಬೇಕು. ಇನ್ನು, ಬಾಳೆಹಣ್ಣಿನ ಸೇವನೆಯಿಂದ ಹೊಟ್ಟೆಯನ್ನು ತಂಪಾಗಿಡಲು ಸಾಧ್ಯವಿದೆ.  ಬಾಳೆಹಣ್ಣಿನಲ್ಲಿ ಎನ್ವಿ ಬ್ಯಾಕ್ಟೀರಿಯಲ್‌ ಅಂಶ ಇರುವುದರಿಂದ, ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next