Advertisement

ಎಬಿಡಿ ಸ್ಫೋಟದ ಹಿಂದೆ ಯಾರಿದ್ದಾರೆ?

03:06 PM Apr 12, 2017 | |

ಇಂದೋರ್‌: ಹತ್ತನೇ ಐಪಿಎಲ್‌ಗೆ ಎಬಿ ಡಿ ವಿಲಿಯರ್ ಆಗಮನವಾಗಿದೆ. ಬಂದವರೇ ಪಂಜಾಬ್‌ ವಿರುದ್ಧ ಗುಡುಗು-ಸಿಡಿಲಿನಂತೆ ಆರ್ಭಟಿಸಿದ್ದಾರೆ. 

Advertisement

ಸೋಮವಾರ ರಾತ್ರಿಯ ಮುಖಾಮುಖೀಯಲ್ಲಿ ಆರ್‌ಸಿಬಿ ಸೋತರೂ ಏಕಾಂಗಿಯಾಗಿ ಹೋರಾಡಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. 360 ಡಿಗ್ರಿ ಬ್ಯಾಟಿಂಗ್‌ ಮೂಲಕ ಐಪಿಎಲ್‌ಗೆ ಎಂದಿನ “ಎಬಿಡಿ ಸ್ಪರ್ಶ’ವನ್ನಿತ್ತಿದ್ದಾರೆ. 

ಪಂದ್ಯದ ನಡುವಿನ ಬ್ರೇಕ್‌ ವೇಳೆ ವೀಕ್ಷಕ ವಿವರಣಕಾರ ಸಂಜಯ್‌ ಮಾಂಜ್ರೆàಕರ್‌ ಜತೆ ಮಾತಾಡಿದ ಡಿ ವಿಲಿಯರ್, ಪತ್ನಿಯ ಸಲಹೆಗಳೇ ತನ್ನ ಈ ಆಟಕ್ಕೆ ಸ್ಫೂರ್ತಿ ಎಂದರು. “ಕೀಳರಿಮೆ ಹಾಗೂ ಅವಿಶ್ವಾಸದಿಂದ ಹೊರಬರಲು ನನಗೆ ಪತ್ನಿ ಡೇನಿಯಲ್‌ ನೀಡಿದ ಸಲಹೆಗಳೇ ಸ್ಫೂರ್ತಿಯಾದವು. ಹೀಗಾಗಿ ಮೊದಲ ಪಂದ್ಯದಲ್ಲೇ ಎಂದಿನ ಲಯದೊಂದಿಗೆ ನನ್ನ ಸಹಜ ಶೈಲಿಯ ಆಟವಾಡಲು ಸಾಧ್ಯವಾಯಿತು. ಮಾನಸಿಕವಾಗಿ ನಾನು ನಿರಾಳನಾಗಿದ್ದೆ. ನಿಜಕ್ಕೂ ನನ್ನ ಈ ಆಟ ನನಗೇ ಅಚ್ಚರಿ ಉಂಟುಮಾಡಿದೆ’ ಎಂದರು. 

“ರಾತ್ರಿ ಕಳೆಯುವುದರೊಳಗಾಗಿ ಕೆಟ್ಟ ಆಟಗಾರನಾಗಿ ಮೂಡಿಬರುವುದು ಕಷ್ಟವಲ್ಲ. ಆದರೆ ಸುದೀರ್ಘ‌ ವಿರಾಮದ ಬಳಿಕ ನೈಜ ಶೈಲಿಯ ಆಟವನ್ನು ಪ್ರದರ್ಶಿಸುವುದು ಸುಲಭವಲ್ಲ. ಇದಕ್ಕೆ ಮಾನಸಿಕವಾಗಿ ನಾವು ಹೆಚ್ಚು ಗಟ್ಟಿಗರಾಗಬೇಕಾಗುತ್ತದೆ. ಹಾಗೆಯೇ ಕೀಳರಿಮೆಯನ್ನು ಹೊಡೆದೋಡಿಸಬೇಕಾಗುತ್ತದೆ. ಇದೆಲ್ಲ ನನ್ನ ಹೆಂಡತಿಯ ಹಿತವಚನದಿಂದ ಸಾಧ್ಯವಾಯಿತು…’ ಎಂದರು ಡಿ ವಿಲಿಯರ್. 

ಆಕೆ ಏನು ಹೇಳಿದರು ಎಂಬ ಮಾಂಜ್ರೆàಕರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಬಿಡಿ, “ಕೆಲವು ದಿನಗಳಿಂದ ನಾನು ಒಂಥರ ಸೋಮಾರಿಯಾಗಿದ್ದೆ. ಪಂದ್ಯಕ್ಕೂ ಮುನ್ನ ಪತ್ನಿಗೆ ಫೋನ್‌ ಮಾಡಿ ನನ್ನ ಮನಸ್ಥಿತಿಯನ್ನು ತಿಳಿಸಿದೆ. ಆಗ ಅವಳು ತನ್ನ ಮಗನ ಪಕ್ಕ ನಿದ್ರಿಸುತ್ತಿದ್ದಳು. ಕೆಲವು ನಿಮಿಷಗಳ ಬಳಿಕ ಅವಳೇ ಮರು ಕರೆ ಮಾಡಿದಳು. ನಿರಾಳವಾಗಿರಿ, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಗಮನವೆಲ್ಲ ಕ್ರಿಕೆಟ್‌ ಮೇಲೆಯೇ ಇರಲಿ. ನಿಮ್ಮ ಆಟಕ್ಕೆ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ. ನಾನು ಭಾರತದತ್ತ ಪ್ರಯಾಣ ಬೆಳೆಸಿ ನಾಳೆ ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದಳು. ಇದೇ ನನ್ನ ಆಟಕ್ಕೆ ಪ್ರೇರಣೆಯಾಯಿತು…’ ಎಂದರು. ಬೆನ್ನು ನೋವಿನ ಸಮಸ್ಯೆಯಿಂದಾಗಿ ಡಿ ವಿಲಿಯರ್ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ.

Advertisement

ನಾಯಕತ್ವ  ವಹಿಸದ  ಡಿ ವಿಲಿಯರ್
ಇಂದೋರ್‌:
ವಿರಾಟ್‌ ಕೊಹ್ಲಿ ಗೈರಲ್ಲಿ ಎಬಿ ಡಿ ವಿಲಿಯರ್ ಅವರನ್ನು ಆರ್‌ಸಿಬಿ ತಂಡದ ಹಂಗಾಮಿ ನಾಯಕನೆಂದು ಘೋಷಿಸಲಾಗಿತ್ತು. ಆದರೆ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಎಬಿಡಿ ನಾಯಕನ ಪಾತ್ರ ನಿಭಾಯಿಸಲಿಲ್ಲ. ಬದಲಾಗಿ ಶೇನ್‌ ವಾಟ್ಸನ್‌ ಅವರೇ ಕ್ಯಾಪ್ಟನ್‌ ಆಗಿ ಮುಂದುವರಿದರು. 

ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರುಬ ಫ್ರಾಂಚೈಸಿ ಯಾವುದೇ ಅಧಿಕೃತ ಪ್ರಕಟನೆ ನೀಡಿಲ್ಲ. ಕೊಹ್ಲಿ ಬರುವ ತನಕ ವಾಟ್ಸನ್‌ ಅವರೇ ಈ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
 

Advertisement

Udayavani is now on Telegram. Click here to join our channel and stay updated with the latest news.

Next