ಶಿಡ್ಲಘಟ್ಟ: ಶಿಡ್ಲಘಟ್ಟ ಕ್ಷೇತ್ರದಲ್ಲಿ ಜನಸೇವೆ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದ್ದು, ಸಮಾಜದಲ್ಲಿರುವ ಎಲ್ಲಾ ಜಾತಿ-ಮತ-ಧರ್ಮಗಳ ಜನರಿಗೆ ಕೈಲಾದಷ್ಟು ಸೇವೆ ಮಾಡುತ್ತಿರುವುದಾಗಿ ಎಬಿಡಿ ಗ್ರೂಪಿನ ಅಧ್ಯಕ್ಷ ರಾಜೀವ್ ಗೌಡ ಹೇಳಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ವಿವಿಧ ಮಸೀದಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯವನ್ನು ಆರಂಭಿಸಿ ಇಂದಿಗೂ ಮುಂದುವರಿಸಲಾಗಿದೆ ಪವಿತ್ರ ರಂಝಾನ್ ಹಬ್ಬವನ್ನು ಆಚರಣೆ ಮಾಡುತ್ತಿರುವ ಬಡ ಮುಸ್ಲಿಂ ಸಮುದಾಯಕ್ಕೆ ಫುಡ್ ಕಿಟ್ ವಿತರಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಶಾಂತಿ ಮತ್ತು ಸೌಹಾರ್ದತೆಯ ರಂಝಾನ್ ಹಬ್ಬದಲ್ಲಿ ಮುಸ್ಲಿಂ ಬಾಂಧವರು ಉಪವಾಸ ವ್ರತವನ್ನು ಆಚರಣೆ ಮಾಡಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲರ ಶ್ರೇಯಸ್ಸು ಬಯಸುತ್ತಿದ್ದಾರೆ ಇಂತಹ ಪವಿತ್ರ ಹಬ್ಬವನ್ನು ಆಚರಣೆ ಮಾಡುತ್ತಿರುವ ಮುಸ್ಲಿಂ ಬಾಂಧವರಿಗಾಗಿ ನನ್ನ ಅಳಿಲು ಸೇವೆ ಮಾತ್ರವೆಂದರು.
ಎಬಿಡಿ ಸಂಸ್ಥೆಯ ಸಹಾನಾ ರಾಜೀವ್‌ಗೌಡ, ನಗರಸಭೆಯ ಮಾಜಿ ಉಪಾಧ್ಯಕ್ಷ ಡಿ.ಆರ್.ಯೂಸುಫ್, ಎಸ್.ರಹಮತ್ತುಲ್ಲಾ,ಫಿಲೇಚರ್ ಕ್ವಾಟ್ರಸ್ ಅಕ್ರಂ,ಟಿಎಅಸಿ ಲೇಔಟ್ ಗೌಸಪೀರ್,ದರ್ಗಾ ಮೊಹಲ್ಲಾ ಶಫಿಉಲ್ಲಾ,ಆಮೀರಿಯಾ ಮಸೀದಿಯ ಸಾಧಿಕ್ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸದಸ್ಯತ್ವದಲ್ಲಿ ದ್ವಿತೀಯ ಸ್ಥಾನ : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಕ್ಷೇತ್ರದಲ್ಲಿ 65 ಸಾವಿರ ಜನರಿಗೆ ಡಿಜಿಟಲ್ ಕಾಂಗ್ರೆಸ್ ಸದಸ್ಯತ್ವ ಮಾಡಿ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು, ಅದಕ್ಕಾಗಿ ಪಕ್ಷದ ಯುವ ನಾಯಕರಾದ ರಾಹುಲ್‌ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ವಿಶೇಷ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ಎಬಿಡಿ ಗ್ರೂಪಿನ ಅಧ್ಯಕ್ಷ ರಾಜೀವ್ ಗೌಡ ಹೇಳಿದರು.