Advertisement

ಗೌರವ್‌ಗುಪ್ತ ವಿರುದ್ಧ ಎಬಿಸಿ, ಬಿಎಂಟಿಎಫ್ ಗೆ ದೂರು 

01:58 PM Sep 29, 2021 | Team Udayavani |

ಬೆಂಗಳೂರು: ಪಾಲಿಕೆ ಮುಖ್ಯ ಆಯುಕ್ತ ಗೌರವ ಗುಪ್ತ ಕಮಿಷನ್‌ ಪಡೆದು ಗುತ್ತಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಬಿಸಿ) ಮತ್ತು ಬೆಂಗಳೂರುಮೆಟ್ರೊçಪಾಲಿ ಟನ್‌ ಟಾಸ್ಕ್ ಪೋರ್ಸ್‌ (ಬಿಎಂಟಿಎಫ್) ಬಳಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್‌.ಆರ್‌.ರಮೇಶ್‌ ದೂರು ದಾಖಲಿಸಿದ್ದಾರೆ.

Advertisement

ಬಿಬಿಎಂಪಿ ಕಚೇರಿಯಲ್ಲಿ ಬಿಎಂಟಿಎಫ್‌ಗೆ ದೂರ ನೀಡಿದ ಬಳಿಕ ಮಾತನಾಡಿ, ಗೌರವ್‌ ಗುಪ್ತಾಅವರು ನಿಯಮ ಬಾಹಿರವಾಗಿ ಜ್ಯೇಷ್ಠತೆ ಇಲ್ಲದ ಗುತ್ತಿಗೆದಾರರಿಗೆ ಕೋಟ್ಯಂತರ ರೂ.ಗಳನ್ನು ವಿಶೇಷ ಅನುದಾನ ಹೆಸರಿನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಎಸಿಬಿಹಾಗೂ ಬಿಎಂಟಿಎಫ್‌ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.

ಪ್ರಸ್ತುತ ಪಾಲಿಕೆಯ ಸಾವಿರಾರು ಮಂದಿ ಗುತ್ತಿಗೆದಾರರು ಕಳೆದ ಎರಡೂವರೆ ವರ್ಷಗಳಿಂದಲೂ ತಮ್ಮ ಪಾಲಿನ ಹಣ ಬಿಡುಗಡೆಗೆಸರದಿ ಸಾಲಿನಲ್ಲಿ ಜ್ಯೇಷ್ಠತೆಯ ನಿಯಮಗಳಿಗೆಅನುಗುಣವಾಗಿ ಕಾಯುತ್ತಿದ್ದರೂ, ಅವುಗಳ ಬಗ್ಗೆತಲೆ ಕೆಡಿಸಿಕೊಳ್ಳದೆ ಪಾಲಿಕೆಗೆ ಬರುತ್ತಿರುವಹಣವನ್ನು ನೇರವಾಗಿ ವಿಶೇಷ ಅನುದಾನ ಅಥವಾ ಆಯುಕ್ತರ ವಿಭಾಗ ಹೆಸರಿನಲ್ಲಿ ಶೇ.6 ಕಮಿಷನ್‌ ಪಡೆದು, ಹಿರಿತನವಿಲ್ಲದ ಗುತ್ತಿಗೆದಾರರಿಗೆ ಹಣ

ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮುಖ್ಯ ಆಯುಕ್ತರು ಅವಶ್ಯಕತೆ ಇರುವ ಗುತ್ತಿಗೆದಾರರಿಗೆ ವೈದ್ಯಕೀಯ ಚಿಕಿತ್ಸೆಗಳಿಗೆ, ಕುಟುಂಬಸ್ಥರ ವಿವಾಹ ಕಾರ್ಯಗಳಿಗೆ, ಗುತ್ತಿಗೆದಾರರ ಅಕಾಲಿಕ ಮರಣವಾದ ಸಂದರ್ಭಗಳಲ್ಲಿ, ಗುತ್ತಿಗೆದಾರರ ಆಸ್ತಿಗಳನ್ನು ಸಾಲ ನೀಡಿರುವ ಬ್ಯಾಂಕ್‌ ಸಿಬ್ಬಂದಿ ಮುಟ್ಟುಗೋಲು ಹಾಕಿಕೊಳ್ಳುವ ನೋಟಿಸ್‌ಗಳು ಜಾರಿ ಮಾಡಿದ ಸಮಯದಲ್ಲಿ ಮಾತ್ರ ಗುತ್ತಿಗೆದಾರರಿಗೆ ಅವರಿಗೆ ಅವಶ್ಯಕತೆ ಇರುವಷ್ಟು ಹಣವನ್ನು ಬಿಡುಗಡೆ ಮಾಡಲು ಅವಕಾಶವಿರುತ್ತದೆ. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಒಬ್ಬನೇ ಗುತ್ತಿಗೆದಾರರಿಗೆ 15ಕ್ಕೂ ಹೆಚ್ಚು ಬಾರಿ ಹಣವನ್ನುಬಿಡುಗಡೆ ಮಾಡಲಾಗಿದೆ ಎಂದರು.

Advertisement

ಮುಖ್ಯಮಂತ್ರಿಗಳಿಗೂ ದೂರು ನೀಡುವೆ:

ಹಲವಾರು ಮಂದಿ ಹಿರಿತನವಿಲ್ಲದ ಗುತ್ತಿಗೆದಾರರಿಗೆ ನಿಯಮ ಬಾಹಿರವಾಗಿ ಜ್ಯೇಷ್ಠತೆ ನಿಯಮಗಳನ್ನು ಗಾಳಿಗೆ ತೂರಿ, ಸುಮಾರು 69 ಕೋಟಿ ರೂ. ಹಣವನ್ನು ಕೇವಲ ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡಿರುತ್ತಾರೆ. ಈ ಮೂಲಕ ಕೋಟ್ಯಂತರ ರೂ. ಭ್ರಷ್ಟಾಚಾರವನ್ನು ಕಿಕ್‌ ಬ್ಯಾಕ್‌ ಪಡೆಯುವುದರ ಮೂಲಕ ಮಾಡುರುವುದು ಅತ್ಯಂತ ಸ್ಪಷ್ಟವಾಗಿದೆ. ಈಸಂಬಂಧ ಗೌರವ್‌ ಗುಪ್ತಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮತ್ತು ಬಿಎಂಟಿಎಫ್‌ ಅಧೀಕ್ಷಕರ ಕಚೇರಿಯಲ್ಲಿ ಅಧಿಕಾರ ದುರುಪಯೋಗ, ವಂಚನೆ,ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಮುಖ್ಯಮಂತ್ರಿಗಳಿಗೂ ಈ ಕುರಿತು ಪೂರ್ಣ ದಾಖಲೆಗಳ ಸಹಿತ ದೂರು ನೀಡಲಾಗುವುದು ಎಂದು ರಮೇಶ್‌ ಹೇಳಿದರು.

ಅಗತ್ಯ ಕ್ರಮ: ಬಿಬಿಎಂಪಿ ಸ್ಪಷ್ಟನೆ :  ಪಾಲಿಕೆಯ ಎಲ್ಲಾ ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಬಿಲ್‌ ಪಾವತಿಸುವಕುರಿತು ಸಮರೋಪಾದಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ದೂರಿನ ಕುರಿತು ಪಾಲಿಕೆ ಮುಖ್ಯ ಆಯುಕ್ತರು ಗೌರವ ಗುಪ್ತ ಸ್ಪಷ್ಟನೆ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೆಲಸಗಳು ವ್ಯತ್ಯಯವಾದರೂ 600 ಕೋಟಿಗೂ ಹೆಚ್ಚು ಬಿಲ್‌

ಪಾವತಿಸಲಾಗಿದೆ. ದಸರಾಗಿಂತ ಮುಂಚೆ 389 ಕೋಟಿ ರೂ. ಬಿಲ್‌ ಬಾಕಿ ಪಾವತಿಸಲುಕ್ರಮಕೈಗೊಳ್ಳಲಾಗಿದೆ ಎಂದರು. ಇನ್ನು ಕೊರೊನಾ ವೇಳೆ ಸೌಲಭ್ಯಗಳಿಗೆಅನುಗುಣವಾಗಿ ಗುತ್ತಿಗೆದಾರರಿಗೆ ಬಿಲ್‌ಪಾವತಿ ಮಾಡಲಾಗಿದೆ. ಕಮಿಷನ್‌ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next