ಮಠದ ಡಾ| ಗಂಗಾಧರ ಮಹಾಸ್ವಾಮೀಜಿ ವಿಶ್ವಾರಾಧ್ಯರ ಜನ್ಮ ಸ್ಥಳ, ತಾಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಶುಕ್ರವಾರ ಸಾವಿರಾರು ಭಕ್ತರ ಜೊತೆ ಪಾದಯಾತ್ರೆ ಪ್ರಾರಂಭಿಸಿದರು.
Advertisement
ಶುಕ್ರವಾರ ಬೆಳಗ್ಗೆ ಗಂವ್ಹಾರದ ಬನ್ನಿ ಬಸವೇಶ್ವರ ಕತೃì ಗದ್ದುಗೆಗೆ ಗೋಟಾರ ರುದ್ರಾ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ,ಪೂಜಾ ಕೈಂಕರ್ಯ ಮುಗಿಸಿದ ನಂತರ ಮಧ್ಯಾಹ್ನ 1:00 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಿ ಗ್ರಾಮದ ಸೀಮಾಂತರ
ಪ್ರದೇಶದಲ್ಲಿ ಭಕ್ತರಾದ ಚನ್ನಪ್ಪಗೌಡ ಬಿರಾದಾರ, ಬಸವಂತರಾಯ ಗೋಳಾ ಅವರ ಪಾದಗಟ್ಟೆಯಲ್ಲಿ ವಿಶ್ರಾಂತಿ ಪಡೆದು, ನಂತರ
ಅಣಬಿ ಗ್ರಾಮಕ್ಕೆ ತೆರಳಿತು.
ನರಿಬೋಳ, ಮುಖಂಡರಾದ ಮಲ್ಲಿನಾಥಗೌಡ ಯಲಗೋಡ, ರಮೇಶಬಾಬು ವಕೀಲ, ಸಿದ್ದಣ್ಣಗೌಡ ಪಾಟೀಲ ಮಳಗ, ರಾಮಶೆಟ್ಟೆಪ್ಪ
ಸಾಹು ಹುಗ್ಗಿ, ಜಿಪಂ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ತಾಪಂ ಸದಸ್ಯ ಗುರುಬಸಪ್ಪ ದೊಡ್ಮನಿ ಹಾಗೂ ಸಾವಿರಾರು ಭಕ್ತರು
ಪಾಲ್ಗೊಂಡಿದ್ದರು. ಪಾದಯಾತ್ರೆ ಹೊರಡುವ ಮಾರ್ಗ
ಪಾದಯಾತ್ರೆ ಸಂಜೆ ಅಣಬಿ ಗ್ರಾಮದಿಂದ ಸಿರವಾಳ ಸೀಮೆಯ ಸೋಮೇಶ್ವರ ಸನ್ನಿಧಾನಕ್ಕೆ ತಲುಪಿತು. ಅಲ್ಲಿಂದ ಭೀಮಾನದಿ ದಾಟಿ ಸನ್ನತಿಯ ಚಂದ್ರಲಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದೆ. ಸನ್ನತಿಯಿಂದ ಜು.22 ರಂದು ಬೆಳಗ್ಗೆ ಪಾದಯಾತ್ರೆ ಹೊರಟು ಕಗನಳ್ಳಿ, ಉಳುವಂಡಗೇರಾ, ಬನ್ನಟ್ಟಿ ಗ್ರಾಮವಾಗಿ ಹಾಗೂ ಹೆಡಗಿಮುದ್ರಿಯಲ್ಲಿ ತಂಗುವುದು. ಜು.23ರಂದು ಅಮಾವಾಸ್ಯೆ
ದಿನದಂದು ಬೆಳಗ್ಗೆ ಶಾಂತ ಶಿವಯೋಗಿ ಮಠದಿಂದ ಸಂಜೆ ವಿಶ್ವರಾಧ್ಯರ ಮುಕ್ತಿತಾಣವಾದ ಅಬ್ಬೆತೂಮಕೂರಿಗೆ ಪಾದಯಾತ್ರೆ ತಲುಪಲಿದೆ.