Advertisement

ಉಳ್ಳಾಲದಲ್ಲಿ ಅಬ್ಬಕ್ಕ ಥೀಮ್‌ ಪಾರ್ಕ್‌ಗೆ ಪ್ರಯತ್ನ

11:52 PM Feb 04, 2023 | Team Udayavani |

ಉಳ್ಳಾಲ: ಉಳ್ಳಾಲದ ವೀರರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮನಂತಹ ಸ್ವಾತಂತ್ರÂ ಹೋರಾಟಗಾರರು ನಮ್ಮ ರಾಜ್ಯದ ಮಹಿಳೆಯರಿಗೆ ಪ್ರೇರಣ ಶಕ್ತಿಯಾಗಿದ್ದು, ಉಳ್ಳಾಲದಲ್ಲಿ ಅಬ್ಬಕ್ಕಳ ಶೌರ್ಯವನ್ನು ದೇಶ ವಿದೇಶಗಳಿಗೆ ತಿಳಿಸುವ ನಿಟ್ಟಿನಲ್ಲಿ ಥೀಮ್‌ ಪಾರ್ಕ್‌ ಆಗಬೇಕು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಅಬ್ಬಕ್ಕಳ ಹೆಸರು ಇಡಲು ಪ್ರಧಾನಿಗೆ ಮತ್ತು ಸಂಬಂಧಿತ ಇಲಾಖೆಯ ಸಚಿವರಿಗೆ ಪತ್ರ ಬರೆದು ಒತ್ತಾಯಿಸುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಆಶ್ರಯದಲ್ಲಿ ಶನಿವಾರ ನಡೆದ ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಅವರು ಮಾತನಾಡಿ ಅಬ್ಬಕ್ಕಳ ಉತ್ಸವ ಕೇವಲ ಉಳ್ಳಾಲಕ್ಕೆ ಸೀಮಿತವಾಗಬಾರದು. ರಾಜ್ಯಮಟ್ಟದ ಉತ್ಸವವಾಗಿ ಸ್ವಾತಂತ್ರÂ ಹೋರಾಟಗಾರರ ಉತ್ಸವ ಆಚರಿಸಲು ರಾಜ್ಯ ಸರಕಾರ ಮುಂದಾಗಬೇಕು. ಅಬ್ಬಕ್ಕ ಭವನ ನಿರ್ಮಾಣದ ಸಂದರ್ಭ ಸುಸಜ್ಜಿತ ಥಿಯೇಟರ್‌ ನಿರ್ಮಾಣ ಮಾಡಿ ಅವರ ಸಾಹಸ ಗಾಥೆಯನ್ನು ಚಿತ್ರೀಕರಣದ ಮೂಲಕ ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು. ಇದರೊಂದಿಗೆ ಪಠ್ಯಕ್ರಮದಲ್ಲೂ ಆಬ್ಬಕ್ಕಳ ಸಾಹಸಗಾಥೆಯನ್ನು ಅಳವಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಬ್ಬಕ್ಕಳ ಹೆಸರನ್ನು ಚಿರಸ್ಥಾಯಿಯಾಗಿಸಲು ಕೇಂದ್ರ ಸರಕಾರ ನಿಧಿ ಸಂಚಯನ ಮಾಡಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕ್ರಮ ಕೈಗೊಳ್ಳಬೇಕು ಅಬ್ಬಕ್ಕ ಭವನ ನಿರ್ಮಾಣದ ಕಾರ್ಯಕ್ಕೂ ಚಾಲನೆ ನೀಡಲು ಜಿಲ್ಲಾಡಳಿತ ಮುಂದಾಗಬೇಕು ಎಂದರು.

ವಿಧಾನ ಪರಿಷತ್‌ ನಾಯಕ ಬಸವರಾಜ ಹೊರಟ್ಟಿ ಮಾತನಾಡಿ, ರಾಣಿ ಅಬ್ಬಕ್ಕಳ ಭವನ ನಿರ್ಮಾಣಕ್ಕೆ ಸರಕಾರ ಅನುದಾನ ಬಿಡುಗಡೆ ಮಾಡಿದರೂ ಯಾವ ಕಾರಣಕ್ಕೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ ಎನ್ನುವ ವಿಚಾರವನ್ನು ಸಂಬಂಧಿತ ಇಲಾಖೆಯೊಂದಿಗೆ ಚರ್ಚಿಸುತ್ತೇನೆ ಎಂದರು.

ಕರ್ನಾಟಕ ವಿಧಾನಪರಿಷತ್‌ ಸದಸ್ಯ ಹಾಗೂ ಭರವಸೆ ಸಮಿತಿಯ ಅಧ್ಯಕ್ಷ ಬಿ.ಎ. ಫಾರೂಕ್‌ ಆಶಯ ಭಾಷಣ ನೆರವೇರಿಸಿದರು.

Advertisement

ಕಾಂತಾರ ಚಲನಚಿತ್ರ ಖ್ಯಾತಿಯ
ನಟಿ ವಿದುಷಿ ಮಾನಸಿ ಸುಧೀರ್‌ ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾನೀರ್‌ನ ದಯಾಮಾತೆಯ ದೇವಾಲಯದ ಧರ್ಮಗುರು ವಂ| ಫಾ| ವಿಕ್ಟರ್‌ ಡಿಮೆಲ್ಲೊ ಶುಭಾಶಂಸನೆಗೈದರು.

ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ. ಆರ್‌., ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಕವಿತಾ, ಪ್ರಮುಖರಾದ ರವೀಂದ್ರನಾಥ್‌ ರೈ, ಸದಾಶಿವ ಉಳ್ಳಾಲ್‌, ಕೃಷ್ಣಪ್ಪ ಸಾಲ್ಯಾನ್‌, ಗಂಗಾಧರ ಉಳ್ಳಾಲ್‌, ಸದಾನಂದ ಬಂಗೇರ, ಹೈದರ್‌ ಪರ್ತಿಪ್ಪಾಡಿ, ಚೆನ್ನಕೇಶವ, ನಝೀರ್‌ ಉಳ್ಳಾಲ್‌, ಭವಾನಿ ಕಾಪಿಕಾಡು, ಜಬ್ಟಾರ್‌, ಆನಂದ ಕೆ. ಅಸೈಗೋಳಿ, ದೇವಕಿ ಆರ್‌. ಉಳ್ಳಾಲ್‌, ಆಲಿಯಬ್ಬ ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್‌ ಸ್ವಾಗತಿಸಿದರು. ಸ್ವಾಗತಾಧ್ಯಕ್ಷ ಜಯರಾಮ ಶೆಟ್ಟಿ ಕೆ.ಪ್ರಸ್ತಾವನೆಗೈದರು. ನಿವೃತ್ತ ಶಿಕ್ಷಕ ವಾಸುದೇವ ರಾವ್‌ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next