Advertisement

ಅಬ್ಬಕ್ಕ ನಮೆಗೆಲ್ಲರಿಗೂ ಪ್ರೇರಣಾ ಶಕ್ತಿ: ಯು.ಟಿ. ಖಾದರ್‌

03:45 AM Feb 05, 2017 | Team Udayavani |

ಉಳ್ಳಾಲ: ತಂತ್ರಜ್ಞಾನ, ಶಿಕ್ಷಣ ಇಲ್ಲದ ಕಾಲದಲ್ಲಿ ಪೋರ್ಚುಗೀಸರು ಆಕ್ರಮಣ ಮಾಡಿದಾಗ ಜನಸಾಮಾನ್ಯರ ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ರಾಣಿ ಅಬ್ಬಕ್ಕ ನಮೆಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದು, ಮುಂದಿನ ದಿನಗಳಲ್ಲಿ ಹಂಪಿ, ಸಂಗೊಳ್ಳಿ ರಾಯಣ್ಣ ಸಹಿತ ರಾಜ್ಯದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಉತ್ಸವದಂತೆಯೇ ಅಬ್ಬಕ್ಕ ಉತ್ಸವ ನಡೆಸಲಾಗುವುದು ಎಂದು ಸಚಿವ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಅವರು ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ವೀರರಾಣಿ ಅಬ್ಬಕ್ಕ ಉತ್ಸವ-2017 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮಸ್ಯೆ ಬಂದಾಗ ಜನರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಜೀವದ ಹಂಗು ತೊರೆದು ಹೋರಾಟ ನಡೆಸಿದ ಅಬ್ಬಕ್ಕಳ ವಿಚಾರ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು. ಆಧುನಿಕ ತಂತ್ರಜ್ಞಾನ, ಶಿಕ್ಷಣ ಇದ್ದರೂ ಮಾನವೀಯತೆ ಮರೆಯುತ್ತಿರುವುದು ಖೇದಕರ ಎಂದರು.

ಎಂಟು ಕೋಟಿ ರೂ. ವೆಚ್ಚದಲ್ಲಿ ಅಬ್ಬಕ್ಕ ಭವನ
ವೀರರಾಣಿ ಅಬ್ಬಕ್ಕ ಉತ್ಸವವನ್ನು ದೇಣಿಗೆ ಸಂಗ್ರಹಿಸಿ ನಡೆಸಿರುವುದನ್ನು ಮರೆಯಲಾಗದು. ಉತ್ಸವ ಸಂದರ್ಭದ ಬೇಡಿಕೆಯಂತೆ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಈಗ ಆಯೋಜನೆ ಪೂರ್ಣಗೊಳಿಸಲು 8 ಕೋಟಿ ರೂ. ಅವಶ್ಯವಿದ್ದು, ಮುಂದಿನ ದಿನಗಳಲ್ಲಿ 8 ಕೋಟಿ ರೂ. ವೆಚ್ಚದ ಭವ್ಯ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಲಿದೆ ಎಂದು ಸಚಿವ ಖಾದರ್‌ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರವಿವಾರ ನಡೆಯಲಿರುವ ವಿವಿಧ ಗೋಷ್ಠಿಗಳನ್ನು ಮೂಡಾ ಅಧ್ಯಕ್ಷ ಸುರೇಶ್‌ ಬಳ್ಳಾಲ್‌ ಉದ್ಘಾಟಿಸಿದರು.

Advertisement

ಕಾರ್ಯಕ್ರಮದಲ್ಲಿ ಮಂಗಳೂರು ತಹಶೀಲ್ದಾರ್‌ ಮಹದೇವಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ರವಿಕುಮಾರ್‌, ದ.ಕ. ಕ್ರೀಡಾಧಿಕಾರಿ ಪ್ರದೀಪ್‌ ಡಿ’ಸೋಜಾ, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ಶೌಕತ್‌ ಅಲಿ, ಉಪಾಧ್ಯಕ್ಷೆ ಲಲಿತಾ ಎಸ್‌. ರಾವ್‌, ಪಜೀರ್‌ ಗ್ರಾ.ಪಂ. ಅಧ್ಯಕ್ಷ ಸೀತಾರಾಮ ಶೆಟ್ಟಿ, ತಾ.ಪಂ. ಸದಸ್ಯೆ ಪದ್ಮಾವತಿ ಪೂಜಾರಿ, ಉಳ್ಳಾಲ ಬ್ಲಾಕ್‌ ಕಾಂಗ್ರಸ್‌ ಸಮಿತಿ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಅಸೈಗೋಳಿ, ಜಿ. ಪಂ. ಉಪ ಕಾರ್ಯದರ್ಶಿ ಡಿ. ಉಮೇಶ್‌, ಸ್ಥಳೀಯ ಹಿರಿಯರಾದ ರಘುರಾಮ ಕಾಜವ ಪಟ್ಟೋರಿ, ಸಂಕಪ್ಪ ಕರ್ಕೇರಾ ತಾ.ಪಂ. ಮಾಜಿ ಸದಸ್ಯ ಸುರೇಶ್‌ ಚೌಟ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ, ಸದಾನಂದ ಬಂಗೇರ, ಸಮಿತಿ ಉಪಾಧ್ಯಕ್ಷ ನಮಿತಾ ಶ್ಯಾಂ, ಸುವಾಸಿನಿ ಬಬ್ಬುಕಟ್ಟೆ, ತೋನ್ಸೆ ಪುಷ್ಕಳ್‌ ಕುಮಾರ್‌, ಆನಂದ ಅಸೈಗೋಳಿ, ಪಿ.ಡಿ. ಶೆಟ್ಟಿ, ತಾರನಾಥ ರೈ, ಲೋಕನಾಥ ರೈ, ನಿರ್ಮಲ ಕುಮಾರ್‌, ತ್ಯಾಗಂ ಹರೇಕಳ, ಹರೇಕಳ ಲಕ್ಷ್ಮಿ ನಾರಾಯಣ ರೈ ಉಪಸ್ಥಿತರಿದ್ದರು.

ವೀàರರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ ಉಳ್ಳಾಲ್‌ ಸ್ವಾಗತಿಸಿದರು. ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಸಂಚಾಲಕ ಅಬ್ದುಲ್‌ ಅಜೀಝ್ ಹಕ್‌ ವಂದಿಸಿದರು.

ಗಣ್ಯ ಅತಿಥಿಗಳು ಗೈರು
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಸೇರಿದಂತೆ ಗಣ್ಯ ಅತಿಥಿಗಳ ಹೆಸರಿದ್ದರೂ ಸಚಿವ ಯು.ಟಿ. ಖಾದರ್‌ ಹೊರತುಪಡಿಸಿ ಉಳಿದವರು ಗೈರು ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next