Advertisement

ಪುರಸಭೆಯಿಂದ ಹಳ್ಳಿಗಳನ್ನು ಕೈಬಿಡಿ

06:15 PM Oct 19, 2021 | Nagendra Trasi |

ಶಿರಾಳಕೊಪ್ಪ: ಪುರಸಭೆಗೆ ಸೇರ್ಪಡೆಯಾಗಿರುವ ಹಳ್ಳಿಗಳ ಜನರಿಗೆ ಬಗರಹುಕುಂ, ಅರಣ್ಯ ಹಕ್ಕು ಕಾಯ್ದೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಪುರಸಭೆಯಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಗ್ರಾಮಗಳನ್ನು ಕೈಬಿಟ್ಟು ಶಿರಾಳಕೊಪ್ಪ ಪುರಸಭೆ ಮಾಡಬೇಕು ಎಂದು ಪುರಸಭೆ ವಿಪಕ್ಷ ನಾಯಕ ತಡಗಣಿ ರಾಜಣ್ಣ ಒತ್ತಾಯಿಸಿದರು.

Advertisement

ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆದ ತುರ್ತುಸಭೆಯಲ್ಲಿ ಅವರು ಮಾತನಾಡಿದರು. ಯಾವ ಸದಸ್ಯರಿಗೂ ಚುನಾವಣೆ ಮಾಡುವ ಇಚ್ಛೆ ಇಲ್ಲ. 2021ರ ಜನಗಣತಿ ಆಧರಿಸಿ ಪಟ್ಟಣದಲ್ಲೇ 23 ವಾರ್ಡ್‌ಗಳನ್ನಾಗಿ ಮಾಡಿ ಇರುವ ಸದಸ್ಯರನ್ನು ಮುಂದುವರಿಸುವುದು ಸೂಕ್ತ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.

ಶಿರಾಳಕೊಪ್ಪವನ್ನು ತಾಲೂಕು ಕೇಂದ್ರ ಮಾಡಬೇಕು. ಈ ಮೂಲಕ ತಾಳಗುಂದ, ಉಡುಗಣಿ ಭಾಗದ ಜನರಿಗೆ ಅನುಕೂಲ ಮಾಡಿಕೊಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು. ಪುರಸಭಾ ಸದಸ್ಯ ಪಿ. ಜಾಫರ್‌ ಮಾತನಾಡಿ,ಪುರಸಭೆ ಸದಸ್ಯರ ಗಮನಕ್ಕೆ ಬಾರದೇ ವಾಡ್‌ ìಗಳ ಪುನರ್‌ವಿಂಗಡಣೆ ಮಾಡಲಾಗುತ್ತಿದೆ. ನಮ್ಮ ಹಕ್ಕು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಿದೆ. ಪಟ್ಟಣದಲ್ಲಿ ಸಾಕಷ್ಟು ಸಂಖ್ಯೆಯ ಜನರು ಇರುವಾಗ ಹಳ್ಳಿಗಳನ್ನು ಸೇರಿಸುವ ಅಗತ್ಯವಿರಲಿಲ್ಲ ಎಂದರು.

ಸದಸ್ಯ ಮುದಾಸಿರ್‌ ಮಾತನಾಡಿ, 2011ರ ಜನಗಣತಿ ಆಧಾರದಲ್ಲಿ ಪುರಸಭೆ ಮಾಡಲಾಗಿದೆ. ಅದನ್ನು 2021ರ ಜನಗಣತಿ ಆಧಾರದಲ್ಲಿ ಮಾಡಿದರೆ ಪಟ್ಟಣದಲ್ಲಿಯೆ 23 ವಾರ್ಡ್‌ ಮಾಡುವಷ್ಟು ಜನಸಂಖ್ಯೆ ಲಭ್ಯವಾಗುತ್ತದೆ ಎಂದರು. ಮುಖ್ಯಾಧಿಕಾರಿ ಹೇಮಂತ ಡೊಳ್ಳಿ ಮಾತನಾಡಿ, ಪಪಂ ಅನ್ನು ಸರ್ಕಾರ ಪುರಸಭೆಯಾಗಿ ಮಾರ್ಪಡಿಸಿ ಗೆಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಪುರಸಭೆಯ ಹೆಸರಿನಲ್ಲಿ ಸಾಮಾನ್ಯ ಸಭೆಗಳು ಆಗಿವೆ. ಸದಸ್ಯರು ಗೌರವಧನ ಸಹ ಪಡೆದಿದ್ದಾರೆ ಎಂದೂ ಸಭೆಗೆ ತಿಳಿಸಿದರು.

ಶಿರಾಳಕೊಪ್ಪದ ಅಭಿವೃದ್ಧಿಗಾಗಿ ಸರ್ಕಾರ ಪಪಂ ಅನ್ನು ಕಾನೂನುಬದ್ಧವಾಗಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದೆ. ಸಾಮಾನ್ಯ ಸಭೆಗಳು ಪುರಸಭೆಯ ಹೆಸರಿನಲ್ಲಿ ಜರುಗಿವೆ. ಅದೇ ಸಾಮಾನ್ಯ ಸಭೆಗಳಲ್ಲಿ ಪಪಂ ನಾಮಫಲಕವನ್ನು ಪುರಸಭೆಯ ನಾಮಫಲಕವಾಗಿ ಬದಲಾಯಿಸಲು ಠರಾವು ಮಾಡಲಾಗಿದೆ. ಇಷ್ಟೆಲ್ಲ ಆದ ಮೇಲೆ ಪುರಸಭೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಹಾಗಾಗಿ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಭೆಯ ನಿರ್ಣಯಕ್ಕೆ ತಮ್ಮ ವಿರೋಧವಿದೆ ಎಂದು ಉಪಾಧ್ಯಕ್ಷೆ ರಾಜೇಶ್ವರಿ ವಸಂತಕುಮಾರ್‌ ಲಿಖೀತವಾಗಿ ಪತ್ರ ನೀಡಿದರು.

Advertisement

ನಂತರ ಉಪಾಧ್ಯಕ್ಷೆ ರಾಜೇಶ್ವರಿ ವಸಂತಕುಮಾರ್‌ ಹೊರತು ಪಡಿಸಿ ಉಳಿದ ಸದಸ್ಯರು ಬಹುಮತದಿಂದ ಪುರಸಭೆಗೆ ಸೇರಿರುವ ತಡಗಣಿ, ಕ್ಯಾದಿಕೊಪ್ಪ, ಬೆಲವಂತನಕೊಪ್ಪ ಗ್ರಾಮಗಳನ್ನು ಕೈಬಿಡಬೇಕು. ಶಿಕಾರಿಪುರವನ್ನು ತಾಲೂಕು ಕೇಂದ್ರ ಮಾಡಬೇಕು ಎಂದೂ ನಿರ್ಣಯಿಸಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಕೂಲ್‌ ಸಾಬ್‌, ಸದಸ್ಯರಾದ ಟಿ. ರಾಜು, ಅನಿಲ್‌ ಕುಮಾರ್‌ ಸುರಹೊನ್ನೆ, ಎಂ.ಆರ್‌. ರಾಘವೇಂದ್ರ, ಮಮತಾ, ಸಾಧಿಕ್‌, ಸಲ್ಮಾ ಬೇಗಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next