Advertisement

ಮಹಿಳಾ ವಿಭಾಗದಿಂದ ವೃದ್ಧಾಶ್ರಮದಲ್ಲಿ ಆಟಿಡೊಂಜಿ ದಿನಾಚರಣೆ

02:58 PM Aug 27, 2021 | Team Udayavani |

ವಸಾಯಿ: ಬಂಟರ ಸಂಘ ಮುಂಬಯಿ ಇದರ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದಿಂದ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ ನೇತೃತ್ವದಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಪಾಲ್ಗರ್ ಜಿಲ್ಲೆಯ ಉಷಗಾಂವ್‌ ನಾ ಕಾರ್ಡಿನಲ್‌ ಗ್ರಾಷಿಯಸ್‌ ಇನ್‌ಸ್ಟಿಟ್ಯೂಟ್‌ ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಆಟಿಡೊಂಜಿ ದಿನವನ್ನು ಸರಳ ರೀತಿಯಲ್ಲಿ ಆಚರಿಸಿದರು.

Advertisement

ಬಂಟರ ಸಂಘ ಮುಂಬಯಿ ಪಶ್ಚಿಮ ವಿಭಾಗದ ಸಮನ್ವಯಕ ಶಶಿಧರ. ಕೆ. ಶೆಟ್ಟಿ ಇನ್ನಂಜೆ ಮಾತನಾಡಿ, ಬಹಳ ಅರ್ಥಪೂರ್ಣವಾದ ಈ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ. ಅನಾಥ ವೃದ್ಧೆಯರಿಗೆ ಸಂತೋಷ ಮತ್ತು ಪ್ರೀತಿ ಕೊಡುವ ಮೂಲಕ ನಾಡಿನ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸುವ ಕಾರ್ಯವನ್ನು ಮಹಿಳಾ ವಿಭಾಗ ಮಾಡಿದೆ. ಈ ನಿಟ್ಟಿನಲ್ಲಿ ಮಹಿಳಾ ವಿಭಾಗ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್‌ ಪಾಂಡು ಶೆಟ್ಟಿ ಮಾತನಾಡಿ, ಮಹಿಳಾ ವಿಭಾಗ ನಮ್ಮ ಸಂಪ್ರದಾಯವನ್ನು ಉಳಿಸುವ ಮೂಲಕ ಹಿರಿಯರನ್ನು ಗೌರವಿಸುವ, ಅವರ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ. ನಾವೆಲ್ಲ ಕೂಡಿ ಒಂದೇ ಮನೆಯವರಂತೆ ವೃದ್ಧಾಶ್ರಮಕ್ಕೆ ಭೇಟಿ ನೀಡಿರುವುದು ಸಂತೋಷದ ಸಂಗತಿಯಾಗಿದೆ. ಮಹಿಳಾ ವಿಭಾಗದ ವತಿಯಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮ ನಡೆಯಲಿ. ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಇದನ್ನೂ ಓದಿ:‘ಹೀಗೆ ಬಂದು ಹಾಗೆ ಹೋದ್ರು’..: ಐದು ನಿಮಿಷಕ್ಕೆ ಸೀಮಿತವಾಯ್ತು ಗೃಹ ಸಚಿವರ ಘಟನಾ ಸ್ಥಳ ಭೇಟಿ

ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ ಮಾತನಾಡಿ, ಸಮಾಜ ಬಾಂಧವರ ಕೂಡುವಿಕೆಯಿಂದ ಉತ್ತಮ ರೀತಿಯಲ್ಲಿ ಇಂದಿನ ಕಾರ್ಯಕ್ರಮ ನಡೆದಿದೆ. ನಾವು ಆಯೋಜಿಸಿರುವ ಕಾರ್ಯಕ್ರಮ ಸಾರ್ಥಕತೆ ಹೊಂದಿದೆ. ನಮ್ಮ ನಾಡಿನ ಸಂಸ್ಕೃತಿ ಮೂಲಕ ದೇಶದ ಅಖಂಡತೆ ಉಳಿಯಬೇಕು ಎಂದರು.

Advertisement

ಪ್ರಾದೇಶಿಕ ಸಮಿತಿಯ ಸಂಚಾಲಕ ಜಯಂತ್‌ ಆರ್‌. ಪಕ್ಕಳ, ಉಪಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಕಣಂಜಾರ್‌, ಕಾರ್ಯದರ್ಶಿ ಜಗನಾಥ ಡಿ. ಶೆಟ್ಟಿ ಪಳ್ಳಿ, ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷೆ ಶಶಿಕಲಾ ಶಶಿಧರ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಉಮಾ ಸತೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಕೋಶಾಧಿಕಾರಿ ವೀಣಾ ಶೆಟ್ಟಿ, ಜತೆ ಕಾರ್ಯದರ್ಶಿ ಅರುಣಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಕಾರ್ಯದರ್ಶಿ ಶ್ರದ್ಧಾ ಶೆಟ್ಟಿ, ಯುವ ವಿಭಾಗದ ಉಪಕಾರ್ಯಾಧ್ಯಕ್ಷ ವಿನೀತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಸಂಘ ಮುಂಬಯಿ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಹಿಳೆಯರು ವಿವಿಧ ಬಗೆಯ ಅಡುಗೆಯೊಂದಿಗೆ ಆಟಿಡೊಂಜಿ ದಿನವನ್ನು ವೃದ್ಧಾಶ್ರಮದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡರು. ಮಹಿಳಾ ವಿಭಾಗದಿಂದ ಇದೇ ಸಂದರ್ಭದಲ್ಲಿ ಆಶ್ರಮಕ್ಕೆ ದಿನೋಪಯೋಗಿ ವಸ್ತುಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next