Advertisement

ಆರೋಗ್ಯ ಸೇತು ಸುರಕ್ಷಿತ: ಕೇಂದ್ರ ಸ್ಪಷ್ಟನೆ

01:47 AM May 07, 2020 | Sriram |

ಆರೋಗ್ಯ ಸೇತು ಆ್ಯಪ್‌ನಿಂದ ಯಾವುದೇ ಮಾಹಿತಿಯು ಸೋರಿಕೆಯಾಗುವುದಿಲ್ಲ. ಈ ಬಗ್ಗೆ ವಿಪಕ್ಷಗಳು ಮಾಹಿತಿ ಭದ್ರತೆಯ ಬಗೆಗಿನ ಆರೋಪ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಈ ಬಗ್ಗೆ ಸರಕಾರವೇ ಟ್ವೀಟ್‌ ಮಾಡಿದೆ. ಜತೆಗೆ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್‌ ಕೂಡ ಖಚಿತಪಡಿಸಿದ್ದಾರೆ.

Advertisement

“ಆರೋಗ್ಯ ಆ್ಯಪ್‌ನ ಸುರಕ್ಷತೆಯ ಬಗ್ಗೆ ನಿರಂತರವಾಗಿ ಪರೀಕ್ಷೆ ನಡೆಸುಲಾಗುತ್ತಿದೆ. ಫ್ರಾನ್ಸ್‌ನ ಹ್ಯಾಕರ್‌ ಎತ್ತಿರುವ ಆಕ್ಷೇಪಗಳ ಬಗ್ಗೆ ಅವರ ಬಳಿಯೇ ಮಾತನಾಡಿ ಗೊಂದಲಗಳನ್ನು ಬಗೆಹರಿಸಿಕೊಳ್ಳಲಾಗಿದೆ. ಆ್ಯಪ್‌ ಬಳಕೆದಾರರ ಲೊಕೇಶನ್‌ ಆಧಾರಿತ ಮಾಹಿತಿಗಳು ಸರ್ವರ್‌ನಲ್ಲಿ ಸುಭದ್ರವಾಗಿರುತ್ತವೆ’ ಎಂದು ಹೇಳಿದೆ.

ಐವಿಆರ್‌ಎಸ್‌: ಇದೇ ವೇಳೆ ಸ್ಮಾರ್ಟ್‌ ಫೋನ್‌ ಹೊಂದಿಲ್ಲದವರಿಗಾಗಿ ಆರೋಗ್ಯ ಸಚಿವಾಲಯ ಐವಿಆರ್‌ಎಸ್‌ ವ್ಯವಸ್ಥೆ ಜಾರಿ ಮಾಡಿದೆ. 1921 ಸಂಖ್ಯೆಗೆ ಮಿಸ್ಡ್ಕಾಲ್‌ ನೀಡಬೇಕು. ಅನಂತರ ಕಾಲ್‌ಸೆಂಟರ್‌ನಿಂದಲೇ ಮಿಸ್ಡ್ ಕಾಲ್‌ ಕೊಟ್ಟ ವ್ಯಕ್ತಿಗೆ ಕರೆ ಬರುತ್ತದೆ. ಈ ಸಂದರ್ಭದಲ್ಲಿ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಬಹುದು. 11 ಭಾಷೆಗಳಲ್ಲಿ ಸೇವೆ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next