Advertisement

ಆರೋಗ್ಯ ಸೇತು ಟೀಕಾಕಾರರಿಗೆ ‘ಓಪನ್‌ ಸೋರ್ಸ್‌’ಸವಾಲು

05:25 PM May 28, 2020 | Hari Prasad |

ಹೊಸದಿಲ್ಲಿ: ಕೋವಿಡ್ ಸೋಂಕಿತರ ಇರುವಿಕೆಯನ್ನು ಗುರುತಿಸಬಲ್ಲ ‘ಆರೋಗ್ಯ ಸೇತು’ ಮೊಬೈಲ್‌ ಅಪ್ಲಿಕೇಶನ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಅನೇಕ ತಂತ್ರಜ್ಞಾನ  ಪರಿಣಿತರು, ಆ್ಯಪ್‌ ಡೆವಲಪರ್‌ಗಳು ಆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲ್ಪಡುವವರ ಮಾಹಿತಿಯು ಸುರಕ್ಷಿತವಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು.

Advertisement

ಈ ಆತಂಕಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಆರೋಗ್ಯ ಸೇತು ಮೊಬೈಲ್‌ ಆ್ಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. https://github.com/nic-delhi/AarogyaSetu_Android.git ಎಂಬ ಲಿಂಕ್‌ ಅನ್ನು ಬಳಸಿಕೊಂಡು ಆರೋಗ್ಯ ಸೇತುವಿನ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸಿಕೊಳ್ಳುವಂತೆ ಆ್ಯಪ್‌ ಪರಿಣಿತರಿಗೆ ಸವಾಲೆಸಿದಿದೆ.

ಈಗ ಬಿಡುಗಡೆ ಮಾಡಿರುವ ಓಫ‌ನ್‌ ಸೋರ್ಸ್‌ ಲಿಂಕ್‌ ಆ್ಯಂಡ್ರಾಯ್ಡ್ ಮಾದರಿಯ ಆರೋಗ್ಯ ಸೇತು ಆ್ಯಪ್‌ಗೆ ಸಂಬಂಧಪಟ್ಟಿದ್ದಾಗಿದೆ ಎಂದು ಸರಕಾರ ಹೇಳಿದೆ. ಸದ್ಯಕ್ಕೆ ಆರೋಗ್ಯ ಸೇತು ಬಳಸುತ್ತಿರುವವರಲ್ಲಿ ಶೇ. 98 ಜನರು ಆ್ಯಂಡ್ರಾಯ್ಡ್ ಮಾದರಿಯ ‘ಆರೋಗ್ಯ ಸೇತು’ವನ್ನೇ ಬಳಸುತ್ತಿರುವುದರಿಂದ ಆಂಡ್ರಾಯ್ಡ್ ಮಾದರಿಯ ಓಪನ್‌ ಸೋರ್ಸ್‌ ಲಿಂಕ್‌ ಅನ್ನೇ ಮೊದಲು ಬಿಡುಗಡೆ ಮಾಡಲಾಗಿದೆ.

ಇದನ್ನು ಬಳಸಿಕೊಂಡು ಯಾರಾದರೂ ಸೇತುವಿನ ಸತ್ಯಾಸತ್ಯತೆಯನ್ನು ಪರೀಕ್ಷಿಸಬಹುದು. ಮುಂದಿನ ವಾರ, ಐಒಎಸ್‌ ಮಾದರಿಯ ‘ಆರೋಗ್ಯ ಸೇತು’ ಆ್ಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next