Advertisement
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಕಿತ್ತಾಟ, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಇರುವ ಪ್ರಮುಖ ಮೂರು ಪಕ್ಷಗಳು ಪರಸ್ಪರ ಆರೋಪ, ಹಗರಣಗಳ ಪ್ರಸ್ತಾಪಗಳ ಮೂಲಕ ಜನರ ಸಮಸ್ಯೆ, ನೈಜ ವಿಷಯಗಳನ್ನು ಮರೆಮಾಚಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಲೇ ಕಿತ್ತಾಟ ಶುರುವಾಗಿದೆ. ಮತದಾರರ ತೀರ್ಪು ಮೊದಲೇ ಸಿಎಂ ನಾನೇ ಎಂಬುದು ಜನತೆಗೆ ಮಾಡುವ ಅವಮಾನವಾಗಿದೆ ಎಂದರು.
Related Articles
Advertisement
ಕೇಂದ್ರ ಸರಕಾರ 25 ಕೆ.ಜಿ ಒಳಗಿನ ಆಹಾರ ಧಾನ್ಯಗಳ ಖರೀದಿಗೆ ಜಿಎಸ್ ಟಿ ವಿಧಿಸುತ್ತಿದೆ. ಅಲ್ಲಿಗೆ ತಾನು ಶ್ರೀಮಂತರ ಪರ ಸರಕಾರ ಎಂಬುದನ್ನು ಸಾಬೀತು ಪಡಿಸಿದೆ ಎಂದರು.
ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ: E.D ಅಧಿಕಾರಿಗಳಿಂದ ಸೋನಿಯಾ ವಿಚಾರಣೆ, ಕಾಂಗ್ರೆಸ್ ಪ್ರತಿಭಟನೆ
ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ದುರಹಾಂಕಾರ ಆಡಳಿತದ ಪ್ರತೀಕವಾಗಿದೆ ಎಂದು ಟೀಕಿಸಿದರು.
ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಒಂದೋ ಠೇವಣಿ ಕಳೆದುಕೊಂಡು ಬಿಡುತ್ತದೆ ಇಲ್ಲವೆ ಎದುರಾಳಿಗಳ ಠೇವಣಿಯನ್ನು ಹಿಡಿಯಾಗಿ ಕಳೆದು ಬಿಡುತ್ತದೆ. ಕಿಚಡಿ ಸರಕಾರಕ್ಕೆ ಅವಕಾಶ ನೀಡದು. ದೆಹಲಿ,ಪಂಜಾಬ್ ನಲ್ಲಿ ಇದೆ ಆಗಿದೆ ಎಂದರು.
ಕೇಂದ್ರ ಸರಕಾರದ ಅಗ್ನಿಪಥ ಯೋಜನೆಯನ್ನು ವೈಯಕ್ತಿಕವಾಗಿ ಬೆಂಬಲಿಸುತ್ತೇನೆ. ಆದರೆ ಅದರ ಅನುಷ್ಠಾನ, ನಾನೇ ಮಾಡಿದೆ ಎಂಬ ಧೋರಣೆ, ಯುವಕರನ್ನು ದಾರಿ ತಪ್ಪಿಸುವ ಯತ್ನವನ್ನು ವಿರೋಧಿಸುತ್ತೇನೆ.
ಬೇರೆ ದೇಶಗಳಲ್ಲಿ ಇಂತಹ ಯೋಜನೆಗಳಿವೆ. ಅಗ್ನಪಥ ಯೋಜನೆ ಇಂಟ್ರನ್ ಶಿಪ್ ಎಂದು ಹೇಳಿ ಯುವಕರ ನೇಮಕಕ್ಕೆ ಮುಂದಾಗಬೇಕಿತ್ತು. ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಬಿಂಬಿಸಲು ಹೋಗಿ ತಪ್ಪು ಮಾಡಿದರು ಎಂದರು.
ಪಕ್ಷ ಸೂಚಿಸಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ದ ಎಂದರು.