Advertisement

ಆಪ್‌ ಫೀಡ್‌ಬ್ಯಾಕ್‌ ಘಟಕದ ವೆಚ್ಚದ ವಿವರವೇ ಇಲ್ಲ!

02:09 AM Apr 01, 2017 | Karthik A |

ಹೊಸದಿಲ್ಲಿ: ಸರಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ಸಲುವಾಗಿ ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರು ನಿಗಾ ಘಟಕದ ಕೆಳಗೆ ರಹಸ್ಯವಾಗಿ ‘ಫೀಡ್‌ಬ್ಯಾಕ್‌ ಯುನಿಟ್‌’ ಎಂಬ ಹೊಸ ಘಟಕ ಸ್ಥಾಪಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ರಹಸ್ಯ ಕಾರ್ಯಾಚರಣೆ ನಡೆಸಿ ಟೈಮ್ಸ್‌ ನೌ ವರದಿ ಪ್ರಸಾರ ಮಾಡಿದ್ದು, ಫೀಡ್‌ಬ್ಯಾಕ್‌ ಯುನಿಟ್‌ಗಳನ್ನು ಕೂಡಲೇ ಮುಚ್ಚುವಂತೆ ಸರಕಾರಕ್ಕೆ ಲೆ.ಗವರ್ನರ್‌ ಅನಿಲ್‌ ಬೈಜಾಲ್‌ ಸೂಚಿಸಿದ್ದಾರೆ.

Advertisement

ಈ ಫೀಡ್‌ಬ್ಯಾಕ್‌ ಘಟಕಕ್ಕೆಂದು 5.5 ಲಕ್ಷದ ನಿಧಿ ತೆಗೆದಿರಿಸಿದ್ದಾಗಿ ಹೇಳಲಾಗಿತ್ತು. ಆದರೆ, ಈ ರಹಸ್ಯ ನಿಧಿಯನ್ನು ಹೇಗೆ ವೆಚ್ಚ ಮಾಡಲಾಗಿದೆ ಎಂಬ ಯಾವ ದಾಖಲೆಗಳೂ ಸಿಕ್ಕಿಲ್ಲ. ಆದರೆ, ಕೈಲಾಶ್‌ ಚಾಂದ್‌ ಎಂಬ ವ್ಯಕ್ತಿಗೆ ಇದರಿಂದ 50 ಸಾವಿರ ರೂ. ನೀಡಿರುವ ದಾಖಲೆಗಳು ನಮ್ಮಲ್ಲಿವೆ ಹಾಗೂ ಖಾಸಗಿ ಶಾಲೆಯೊಂದರ ಬೇಹುಗಾರಿಕೆಗೆ ಈ ಘಟಕದ ಸದಸ್ಯರೊಬ್ಬರಿಗೆ ಹಣ ಸಂದಾಯ ಮಾಡಲಾಗಿದೆ ಎಂದೂ ಟೈಮ್ಸ್‌ ನೌ  ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next