ನವದೆಹಲಿ: ದೆಹಲಿಯಲ್ಲಿ ಅಪ್ ಮತ್ತು ಬಿಜೆಪಿ ನಡುವೆ ಹೊಸತಾಗಿ ರಾಜಕೀಯ ಜಾಹೀರಾತು ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿ ಜಗಳ ಆರಂಭವಾಗಿದೆ.
ರಾಜಕೀಯ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಹತ್ತು ದಿನಗಳಲ್ಲಿ 163.62 ಕೋಟಿ ರೂ. ಪಾವತಿ ಮಾಡಿ. ಇಲ್ಲದಿದ್ದರೆ ನವದೆಹಲಿಯಲ್ಲಿ ಇರುವ ಆಪ್‌ನ ಕಚೇರಿ, ಇತರೆ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ವಾರ್ತಾ ಮತ್ತು ಪ್ರಚಾರ ಸಚಿವಾಲಯದಿಂದ ಆಪ್‌ಗೆ ನೋಟಿಸ್ ನೀಡಲಾಗಿದೆ.
ಸರ್ಕಾರಿ ಜಾಹೀರಾತುಗಳು ಎಂಬಂತೆ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಜಾಹೀರಾತು ಶುಲ್ಕವಾದ 97 ಕೋಟಿ ರೂ.ಗಳನ್ನು ಪಾವತಿಸುವಂತೆ ಕಳೆದ ತಿಂಗಳು ಆಪ್‌ಗೆ ದೆಹಲಿ ಲೆಫ್ಟಿನೆಂಟ್ ಗರ್ವನರ್ ವಿ.ಕೆ.ಸಕ್ಸೆನಾ ಸೂಚಿಸಿದ್ದರು. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. “ಶುಲ್ಕ ಪಾವತಿ ಮಾಡದಿದ್ದರೆ ಆಪ್ ಬ್ಯಾಂಕ್ ಖಾತೆಗಳು ಮತ್ತು ಆಪ್ ನಾಯಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು,’ ಎಂದು ಇದೇ ವೇಳೆ ಬಿಜೆಪಿ ಒತ್ತಾಯಿಸಿದೆ.
“ದೆಹಲಿ ಸರ್ಕಾರ ಮತ್ತು ಸಚಿವರನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ,’ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.